Benefits Of Tamarind - ಇಮ್ಯೂನಿಟಿ ಬೂಸ್ಟ್ ಜೊತೆಗೆ ಬೊಜ್ಜು ಇಳಿಕೆಗೂ ಉತ್ತಮ ಹುಣಸೆ, ಇಲ್ಲಿವೆ ಹುಣಸೆಯ ಅದ್ಭುತ ಪ್ರಯೋಜನಗಳು

Benefits Of Tamarind - ಇದುವರೆಗೆ ನೀವು ಹುಣಸೆಹಣ್ಣನ್ನು ಚಟ್ನಿ, ಚಾಟ್ ಅಥವಾ ಗೋಲ್ಗಪ್ಪದ ರುಚಿಯನ್ನು ಹೆಚ್ಚಿಸಲು ಬಳಸುವುದನ್ನು ನೋಡಿರಬಹುದು. ಆದರೆ ಹುಣಸೆ ರುಚಿಯನ್ನು (Tamarind In Kitchen) ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಬಲಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹುಣಸೆಹಣ್ಣಿನಲ್ಲಿ (Tamarind) ವಿಟಮಿನ್ ಸಿ, ಇ ಮತ್ತು ಬಿ ಹೊರತುಪಡಿಸಿ, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಫೈಬರ್  ಹೇರಳವಾಗಿ ಪ್ರಮಾಣದಲ್ಲಿ ಕಂಡುಬರುತ್ತವೆ. 

Benefits Of Tamarind - ಇದುವರೆಗೆ ನೀವು ಹುಣಸೆಹಣ್ಣನ್ನು ಚಟ್ನಿ, ಚಾಟ್ ಅಥವಾ ಗೋಲ್ಗಪ್ಪದ ರುಚಿಯನ್ನು ಹೆಚ್ಚಿಸಲು ಬಳಸುವುದನ್ನು ನೋಡಿರಬಹುದು. ಆದರೆ ಹುಣಸೆ ರುಚಿಯನ್ನು (Tamarind In Kitchen) ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಬಲಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹುಣಸೆಹಣ್ಣಿನಲ್ಲಿ (Tamarind) ವಿಟಮಿನ್ ಸಿ, ಇ ಮತ್ತು ಬಿ ಹೊರತುಪಡಿಸಿ, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಫೈಬರ್  ಹೇರಳವಾಗಿ ಪ್ರಮಾಣದಲ್ಲಿ ಕಂಡುಬರುತ್ತವೆ. ಇದಲ್ಲದೇ, ಹುಣಿಸೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಹಾಗಾದರೆ ಹುಳಿ-ಸಿಹಿ ಎರಡು ರುಚಿಗಳನ್ನು ಒಟ್ಟಿಗೆ ನೀಡುವ ಹುಣಸೆಹಣ್ಣಿನ ಆರೋಗ್ಯಕರ ಲಾಭಗಳ (Health Benefits Of Tamarind) ಕುರಿತು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Daily Health Tips : ರಾತ್ರಿ ನೆನೆಸಿದ ಈ 5 ಆಹಾರಗಳನ್ನ ಬೆಳಗ್ಗೆ ಸೇವಿಸಿ : ಇದರಿಂದ ನಿಮ್ಮ ಬಳಿ ಯಾವ ರೋಗವು ಸುಳಿಯುವುದಿಲ್ಲ

 

(ಸೂಚನೆ - ಹುಣಸೆ ಹಣ್ಣಿನ ಸೇವನೆ ಯಾವುದೇ ಒಂದು ಚಿಕಿತ್ಸಾ ಪ್ರಕ್ರಿಯೆಯ ವಿಕಲ್ಪ ಅಲ್ಲ. ಹೀಗಾಗಿ ಮೇಲೆ ನೀಡಲಾಗಿರುವ ಸಲಹೆಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ ಹಾಗೂ ಗಂಭೀರ ಸಮಸ್ಯೆ ಪರಿಹಾರಕ್ಕೆ ಚಿಕಿತ್ಸೆ ಪಡೆದುಕೊಳ್ಳಿ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

1. ಬೊಜ್ಜಿನಿಂದ ಮುಕ್ತಿ (Over Weight) - ಹುಣಸೆಹಣ್ಣಿನ ತಿರುಳಿನ ಸಾರವನ್ನು ಬೊಜ್ಜು ಕಡಿಮೆ ಮಾಡಲು ಲಾಭಕಾರಿ ಎಂದು ಪರಿಗಣಿಸಲಾಗಿದೆ. ಹುಣಸೆಹಣ್ಣಿನಲ್ಲಿರುವ ಹೈಡ್ರೋಸಿಟ್ರಿಕ್ ಆಮ್ಲವು ದೇಹದಲ್ಲಿ ಶೇಖರಣೆಯಾದ  ಕೊಬ್ಬನ್ನು ಕ್ರಮೇಣ ಕಡಿಮೆ ಮಾಡುವ ಮೂಲಕ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ತೂಕ ಇಳಿಕೆಗೆ ಇದು ಕಾರಣವಾಗುತ್ತದೆ. NCBI (ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ) ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹುಣಸೆಹಣ್ಣಿನ ತಿರುಳಿನ ಜಲೀಯ ಸಾರವು ಸ್ಥೂಲಕಾಯ ವಿರೋಧಿ ಗುಣಗಳನ್ನು ಹೊಂದಿದೆ. ಅದರ ಆಧಾರದ ಮೇಲೆ ಹುಣಿಸೆಹಣ್ಣಿನ ಪ್ರಯೋಜನಗಳು ತೂಕ ಇಳಿಸುವಲ್ಲಿ ಉಪಯುಕ್ತ ಎಂದು ಹೇಳಲಾಗುತ್ತದೆ.

2 /6

2. ಡೈಬಿಟೀಸ್ ನಿಯಂತ್ರಿಸಲು ಸಹಕಾರಿ - ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸಲು ಹುಣಸೆ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ, ಮತ್ತು ಸಕ್ಕರೆ ಮಟ್ಟವನ್ನು ಕ್ಷೀಣಿಸಲು ಕಾರಣವಾಗುತ್ತದೆ. ಸಕ್ಕರೆಯನ್ನು ನಿಯಂತ್ರಿಸಲು, ಪ್ರತಿದಿನ ಒಂದು ಲೋಟ ಹುಣಸೆಹಣ್ಣಿನ ರಸವನ್ನು ಕುಡಿಯುವುದು ಲಾಭಕರಿ ಎನ್ನಲಾಗುತ್ತದೆ.

3 /6

3. ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿಡುತ್ತದೆ - ಹುಣಿಸೆಯಲ್ಲಿರುವ ಕಬ್ಬಿಣ ಮತ್ತು ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪತ್ತಿಸಲು ಸಹಾಯ ಮಾಡುತ್ತದೆ.

4 /6

4. ಚೇಳು ಕಡಿತಕ್ಕೆ ಪರಿಣಾಮಕಾರಿ ಮದ್ದು - ಚೇಳು ಕಡಿತಕ್ಕೆ ಇದೊಂದು ಪರಿಣಾಮಕಾರಿ ಮನೆಮದ್ದಾಗಿದೆ. ಎರಡು ಹುಣಿಸೆಹಣ್ಣಿನ ತುಂಡುಗಳನ್ನು ಕತ್ತರಿಸಿ ಚೇಳು ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಲಾಭ ಸಿಗುತ್ತದೆ.

5 /6

5. ಪಚನ ಕ್ರಿಯೆ ಹೆಚ್ಚಿಸುತ್ತದೆ - ಹುಣಸೆಹಣ್ಣಿನಲ್ಲಿ ಕೆಲ ಪೋಷಕಾಂಶಗಳಿದ್ದು, ಅವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೀರ್ಣಕಾರಿ ರಸವನ್ನು (ಪಿತ್ತರಸ ಆಮ್ಲ) ಉತ್ತೇಜಿಸಲು ಕಾರ್ಯನಿರ್ವಹಿಸುತ್ತದೆ. ಹುಣಸೆಹಣ್ಣಿನ ಔಷಧೀಯ ಗುಣಗಳು ಜೀರ್ಣಾಂಗದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

6 /6

6. ರೋಗ ನಿರೋಧಕ ಶಕ್ತಿ ಹೆಚ್ಚಳ - ಹುಣಿಸೆಯಲ್ಲಿ ಕಂಡುಬರುವ ವಿಟಮಿನ್-ಸಿ (ಆಸ್ಕೋರ್ಬಿಕ್ ಆಸಿಡ್)  ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪರಿಣಾಮಕಾರಿ ಮತ್ತು ಉಪಯುಕ್ತ ಪೋಷಕಾಂಶವೆಂದು ಪರಿಗಣಿಸಲಾಗಿದೆ.  ಹುಣಸೆಹಣ್ಣಿನ ಬೀಜಗಳಲ್ಲಿ ಪಾಲಿಸ್ಯಾಕರೈಡ್ ಅಂಶಗಳು ಕಂಡುಬರುತ್ತವೆ, ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಾಲಿಸ್ಯಾಕರೈಡ್‌ಗಳು ಇಮ್ಯುನೊ ಮಾಡ್ಯುಲೇಟರಿ ಚಟುವಟಿಕೆಗಳನ್ನು ಹೊಂದಿವೆ ಎಂದು ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ, ಇವು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತವೆ.