Daily Health Tips : ರಾತ್ರಿ ನೆನೆಸಿದ ಈ 5 ಆಹಾರಗಳನ್ನ ಬೆಳಗ್ಗೆ ಸೇವಿಸಿ : ಇದರಿಂದ ನಿಮ್ಮ ಬಳಿ ಯಾವ ರೋಗವು ಸುಳಿಯುವುದಿಲ್ಲ 

ಈ ಆಹಾರಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಅವು ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ, ಇದರಿಂದಾಗಿ ಅವುಗಳ ಪೌಷ್ಟಿಕತೆಯು ಬಹಳಷ್ಟು ಹೆಚ್ಚಾಗುತ್ತದೆ. ನೆನೆಸಿದಾಗ ಈ 5 ಆಹಾರಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ಯಾವುದೇ ರೋಗಗಳ ವಿರುದ್ಧ ಹೋರಾಡಲು ಉತ್ತಮವಾಗಿಸುತ್ತದೆ.

Written by - Channabasava A Kashinakunti | Last Updated : Aug 25, 2021, 02:54 PM IST
  • ನೆನೆಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿವೆ
  • ನೆನೆಸಿದ ಬೇಳೆ ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳು
  • ರಾತ್ರಿಯಿಡೀ ನೆನೆಸಿದ ಹೆಸರು ಕಾಳು ಮೊಳಕೆಯೊಡೆಯುತ್ತದೆ
Daily Health Tips : ರಾತ್ರಿ ನೆನೆಸಿದ ಈ 5 ಆಹಾರಗಳನ್ನ ಬೆಳಗ್ಗೆ ಸೇವಿಸಿ : ಇದರಿಂದ ನಿಮ್ಮ ಬಳಿ ಯಾವ ರೋಗವು ಸುಳಿಯುವುದಿಲ್ಲ  title=

ಕೆಲವು ಆಹಾರ ಪದಾರ್ಥಗಳಿವೆ ಅವುಗಳನ್ನ ಹಾಗೆ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿವೆ. ಹೌದ್ ಇಂದು ನಾವು ನಿಮಗಾಗಿ ನೆನಸಿ ಸೇವಿಸಬಹುದಾದ 5 ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ, ರಾತ್ರಿಯಿಡೀ ನೆನೆಸಿದ ಈ ಆಹಾರವನ್ನು ಸೇವಿಸುವುದರಿಂದ ದೇಹವು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುತ್ತೇವೆ.

ಈ ಆಹಾರಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಅವು ಮೊಳಕೆಯೊಡೆ(Soaked)ಯಲು ಪ್ರಾರಂಭಿಸುತ್ತವೆ, ಇದರಿಂದಾಗಿ ಅವುಗಳ ಪೌಷ್ಟಿಕತೆಯು ಬಹಳಷ್ಟು ಹೆಚ್ಚಾಗುತ್ತದೆ. ನೆನೆಸಿದಾಗ ಈ 5 ಆಹಾರಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ಯಾವುದೇ ರೋಗಗಳ ವಿರುದ್ಧ ಹೋರಾಡಲು ಉತ್ತಮವಾಗಿಸುತ್ತದೆ.

ಇದನ್ನೂ ಓದಿ : Ice Beauty Tips: ಮುಖಕ್ಕೆ ಐಸ್ ಮಸಾಜ್ ಮಾಡುವಾಗ ಮರೆತು ಕೂಡ ಈ ತಪ್ಪುಗಳನ್ನು ಮಾಡಬೇಡಿ

ನೆನೆಸಿದ ಬಾದಾಮಿಯ ಪ್ರಯೋಜನಗಳು

ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿಯವರ ಪ್ರಕಾರ, ಮೊದಲು ನೆನೆಸಿದ ಬಾದಾಮಿ(Soaked Almonds)ಯ ಹೆಸರು ನಮ್ಮ ಮನಸ್ಸಿಗೆ ಬರುತ್ತದೆ. ರಾತ್ರಿಯಿಡೀ ನೆನೆಸಿದ ನಂತರ, ಬಾದಾಮಿಯ ಪೋಷಣೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಿಂದ ಪರಿಹಾರ ನೀಡುತ್ತದೆ ಮತ್ತು ಸ್ಮರಣೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನೆನೆಸಿದ ಬೇಳೆ ಕಾಳಿನ ಲಾಭಗಳು

ನೆನೆಸಿದ ಬೇಳೆ ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳು(Health Benefits) ಸಿಗುತ್ತವೆ. ಇದರಲ್ಲಿ ಹೇರಳವಾದ ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ. ಬೆಳಿಗ್ಗೆ ಬೇಳೆ ತಿನ್ನುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Healthy Breakfast Tips : ಬೆಳಗಿನ ಉಪಾಹಾರಕ್ಕಾಗಿ ಸೇವಿಸಿ ಈ ಆರೋಗ್ಯಕರ ಆಹಾರ : ಇದರಿಂದ ಸಿಗಲಿದೆ ಅದ್ಭುತ ಪ್ರಯೋಜನಗಳು!

ನೆನೆಸಿದ ಒಣದ್ರಾಕ್ಷಿಯ ಲಾಭಗಳು

ಡಾ. ಮುಲ್ತಾನಿಯವರ ಪ್ರಕಾರ, ಬೆಳಿಗ್ಗೆ ಒಣದ್ರಾಕ್ಷಿ(Dry Grapes)ಯನ್ನು ರಾತ್ರಿ ನೆನೆಸುವುದು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯನ್ನು ಸಂಪೂರ್ಣವಾಗಿ ಆರೋಗ್ಯಕರಗೊಳಿಸುತ್ತದೆ. ಇದಲ್ಲದೇ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳು ನಮ್ಮನ್ನು ಸುಲಭವಾಗಿ ಅನಾರೋಗ್ಯಕ್ಕೆ ತಳ್ಳುವುದಿಲ್ಲ.

ನೆನೆಸಿದ ಒಣ ದ್ರಾಕ್ಷಿಯ ಪ್ರಯೋಜನಗಳು

ಒಣದ್ರಾಕ್ಷಿ(Dry Grapes Benefits)ಯಲ್ಲಿ ಮೆಗ್ನೀಶಿಯಂ, ಪೊಟ್ಯಾಶಿಯಂ, ಕಬ್ಬಿಣ ಇತ್ಯಾದಿಗಳು ಸಮೃದ್ಧವಾಗಿವೆ. ಇದು ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು, ರಕ್ತದ ಕೊರತೆಯನ್ನು ಹೋಗಲಾಡಿಸುವಲ್ಲಿ ಬಹಳ ಪ್ರಯೋಜನಕಾರಿ. ಒಣ ದ್ರಾಕ್ಷಿಯನ್ನು ನೆನೆಸುವುದು ಮೂತ್ರಪಿಂಡದ ಕಲ್ಲುಗಳಿಗೆ ಉತ್ತಮ ಪರಿಹಾರವಾಗಿದೆ.

ಇದನ್ನೂ ಓದಿ : Hair Wash Tips: ವಾರಕ್ಕೆ ಎಷ್ಟು ಸಲ ಕೂದಲನ್ನು ಶಾಂಪೂ ಮಾಡಬೇಕು?

ನೆನೆಸಿದ ಹೆಸರು ಕಾಳಿನ ಪ್ರಯೋಜನಗಳು

ರಾತ್ರಿಯಿಡೀ ನೆನೆಸಿದ ಹೆಸರು ಕಾಳು ಮೊಳಕೆ(Soaked Moong)ಯೊಡೆಯುತ್ತದೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ನೆನೆಸಿದ ಹೆಸರು ಕಾಳು ತಿನ್ನುವುದರಿಂದ ನಿಮ್ಮ ಮಲಬದ್ಧತೆ ಮತ್ತು ಇತರ ಹೊಟ್ಟೆ ರೋಗಗಳಿಗೆ ಪರಿಹಾರ ನೀಡುತ್ತದೆ. ಇದಲ್ಲದೇ ತೂಕ ಇಳಿಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News