Best Budget 7 Seater Car: ನೀವು 7 ಆಸನಗಳ ಕಾರನ್ನು ತೆಗೆದುಕೊಳ್ಳಲು ಬಯಸಿದರೆ, ಇಲ್ಲಿವೆ ಬೆಸ್ಟ್ ಆಯ್ಕೆ

                        

Best Budget 7 Seater Car: ಕುಟುಂಬದವರೆಲ್ಲಾ ಒಟ್ಟಾಗಿ ಆರಾಮದಾಯಕವಾಗಿ ಎಲ್ಲಗಾದರು ಪ್ರಯಾಣಿಸುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ದೊಡ್ಡ ಮತ್ತು ಉದ್ದವಾದ ಕಾರನ್ನು ಖರೀದಿಸಿ ಅದರಲ್ಲಿ ಪ್ರಯಾಣಿಸುವುದು ಪ್ರತಿಯೊಬ್ಬರ ಕನಸು. ದುಬಾರಿ ಕಾರು ಖರೀದಿಸುವ ಈ ಹವ್ಯಾಸವನ್ನು ಶ್ರೀಮಂತರು ಸುಲಭವಾಗಿ ಪೂರೈಸಬಹುದು, ಆದರೆ ಮಧ್ಯಮ ವರ್ಗದ ಕುಟುಂಬಕ್ಕೆ ದೊಡ್ಡ ಕಾರು ಖರೀದಿಸುವುದು ಸ್ವಲ್ಪ ಕಷ್ಟ. ಇಂದು ನಾವು ನಿಮಗೆ ಅಂತಹ 7 ಆಸನಗಳ 5 ವಾಹನಗಳ ಬಗ್ಗೆ ಹೇಳಲಿದ್ದೇವೆ, ಇದರಲ್ಲಿ ನಿಮ್ಮ ಇಡೀ ಕುಟುಂಬವು ಆರಾಮವಾಗಿ ಪ್ರಯಾಣಿಸಬಹುದು ಮತ್ತು ಅವುಗಳ ಬೆಲೆ 4 ಲಕ್ಷದಿಂದ ಆರಂಭವಾಗುತ್ತದೆ. ಈ ಏಳು ಆಸನಗಳ ಕಾರಿನಲ್ಲಿ ನೀವು ಇಡೀ ಕುಟುಂಬದೊಂದಿಗೆ ಪ್ರಯಾಣಿಸುವುದನ್ನು ಆನಂದಿಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಈ ಪಟ್ಟಿಯಲ್ಲಿ ಮಾರುತಿಯ ಇಕೋ ಕಾರು ಮೊದಲ ಸ್ಥಾನದಲ್ಲಿದೆ. ಈ ಕಾರು 4 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಮಾರುತಿ ಸುಜುಕಿ ಇಕೋ ಆರಂಭಿಕ ಬೆಲೆ ರೂ. 3.94 ಲಕ್ಷಗಳು (ದೆಹಲಿ ಎಕ್ಸ್ ಶೋರೂಂ). ಇಕೋ ಕಾರ್ 1196 ಸಿಸಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 6000 ಆರ್ಪಿಎಂನಲ್ಲಿ 72.41 ಎಚ್ಪಿ ಮತ್ತು 3000 ಆರ್ಪಿಎಂನಲ್ಲಿ 101 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಹೊರತಾಗಿ, ಅದರ CNG ಮಾದರಿಯೂ ಬರುತ್ತದೆ. ನಾವು ಅದರ ಮೈಲೇಜ್ ಬಗ್ಗೆ ನೋಡುವುದಾದರೆ, ಅದು ಪೆಟ್ರೋಲ್ ನಲ್ಲಿ 16.11 kmpl ಮತ್ತು CNG ನಲ್ಲಿ 21.94 kmpl ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ.

2 /5

ಅಗ್ಗದ ಏಳು ಆಸನಗಳ ಕಾರುಗಳ ಈ ಪಟ್ಟಿಯಲ್ಲಿ ಡಟ್ಸನ್ ಗೋ ಪ್ಲಸ್ (Datsun Go Plus) ಹೆಸರು ಎರಡನೇ ಸ್ಥಾನದಲ್ಲಿದೆ. ಮಧ್ಯಮ ವರ್ಗದ ಕುಟುಂಬದ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಇದರ ಆರಂಭಿಕ ಬೆಲೆ 4.26 ಲಕ್ಷ ರೂ. ಡಟ್ಸನ್ ಗೋ ಪ್ಲಸ್ 1198 ಸಿಸಿ 3 ಸಿಲಿಂಡರ್ SOHC ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 5000 Rpm ನಲ್ಲಿ 67 Hp ಮತ್ತು 4000 Rpm ನಲ್ಲಿ 104 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದರ ನೋಟ ಕೂಡ ಅದ್ಭುತವಾಗಿದೆ.  

3 /5

ವಿನ್ಯಾಸದ ವಿಷಯದಲ್ಲಿ ರೆನಾಲ್ಟ್ ಕಾರುಗಳಿಗೆ ಸರಿಸಾಟಿ ಇಲ್ಲ. ರೆನಾಲ್ಟ್ ಟ್ರೈಬರ್‌ನ (Renault Triber) ಸೊಗಸಾದ ನೋಟ ಅದ್ಭುತವಾಗಿದೆ ಮತ್ತು ಅದರ ಬೆಲೆಯೂ ತುಂಬಾ ಕಡಿಮೆ. ಇದರ ಆರಂಭಿಕ ಮಾದರಿಯ ಬೆಲೆ 5.50 ಲಕ್ಷ ರೂ., ಅದರ ಉನ್ನತ ಮಾದರಿಯ ಬೆಲೆ 7.78 ಲಕ್ಷ ರೂ. ಪ್ರೀಮಿಯಂ ಲುಕ್ ಜೊತೆಗೆ ಹಲವು ಇತ್ತೀಚಿನ ಫೀಚರ್‌ಗಳು ಕೂಡ ಈ ಕಾರಿನಲ್ಲಿ ಲಭ್ಯವಿದೆ. ರೆನಾಲ್ಟ್ ಟ್ರೈಬರ್ 999 ಸಿಸಿ 3 ಸಿಲಿಂಡರ್ ಎಂಜಿನ್ ಹೊಂದಿದ್ದು, 6250 ಆರ್‌ಪಿಎಂನಲ್ಲಿ 71 ಎಚ್‌ಪಿ ಪವರ್ ಮತ್ತು 3500 ಆರ್‌ಪಿಎಂನಲ್ಲಿ 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದನ್ನೂ ಓದಿ- Auto Debit Payments: ಡೆಬಿಟ್-ಕ್ರೆಡಿಟ್ ಕಾರ್ಡ್ ಪೇಮೆಂಟ್ ನಿಯಮ ಬದಲಿಸಿದ RBI; ಅಕ್ಟೋಬರ್ 1 ರಿಂದ ಅನ್ವಯ

4 /5

ಮಾರುತಿಯ ಇನ್ನೊಂದು ಕಾರು, ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಕೂಡ ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದೆ. ಈ 7 ಆಸನಗಳ ಕಾರ್ ಕೂಡ ಮಧ್ಯಮ ವರ್ಗದ ಕುಟುಂಬಕ್ಕೆ ತುಂಬಾ ಇಷ್ಟವಾಗಿದೆ. ಇದರ ಆರಂಭಿಕ ಬೆಲೆ 7.96 ಲಕ್ಷ ರೂ. ಇದರ ಹೊರತಾಗಿ, ಈ ಕಾರು ಡೀಸೆಲ್ ಮತ್ತು CNG ಮಾದರಿಗಳಲ್ಲಿ ಕೂಡ ಬರುತ್ತದೆ.  ಇದನ್ನೂ ಓದಿ- Detel Easy Plus: DL ಅವಶ್ಯಕತೆ ಬೀಳದ ಅಗ್ಗದ ಬೆಲೆಯ Electric Moped ಲಾಂಚ್, ಬೆಲೆ ಎಷ್ಟು ಗೊತ್ತಾ?

5 /5

ನೀವು ಸ್ವಲ್ಪ ದೊಡ್ಡ ಕಾರನ್ನು ಖರೀದಿಸಲು ಬಯಸಿದರೆ ಮತ್ತು ನಿಮ್ಮ ಬಜೆಟ್ ಕೂಡ ಹೆಚ್ಚಾಗಿದ್ದರೆ ನೀವು ಮಹೀಂದ್ರಾದಿಂದ ಮಹೀಂದ್ರ ಮರಾಜೋ (Mahindra Marazzo) 7 ಆಸನಗಳ ಕಾರನ್ನು ಖರೀದಿಸಬಹುದು, ಇದರ ಆರಂಭಿಕ ಬೆಲೆ 12.41 ಲಕ್ಷ ರೂ . ಮಹೀಂದ್ರ ಮರಾಜೋ 1.5 ಲೀಟರ್, 4 ಸಿಲಿಂಡರ್, ಡೀಸೆಲ್ ಎಂಜಿನ್ ಪಡೆಯುತ್ತದೆ. ಈ BS6 ಎಂಜಿನ್ 122PS ಪವರ್ ಮತ್ತು 300 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.