ಡಸ್ಟ್‌ಬಿನ್‌ನಲ್ಲಿದ್ದ ಕಸ ತಿನ್ನುತ್ತಾ, ಹಸಿವಿನಿಂದ ದಿನ ಕಳೆಯುತ್ತಾ ಬೆಳೆದ ʻಈಕೆʼಇಂದು ಬಹುಬೇಡಿಕೆಯ ಸ್ಟಾರ್‌ ನಿರೂಪಕಿ!

bharti singh: 'ಕಾಮಿಡಿ ಯಾವಾಗಲೂ ಬಡತನದಲ್ಲಿಯೇ ನಡೆಯುತ್ತದೆ'... ಮನರಂಜನಾ ಲೋಕದಲ್ಲಿ ಬಡತನದಲ್ಲಿ ಬೆಳೆದು ಇಂದು ಟಾಪ್‌ ನಿರೂಪಕಿಯರಲ್ಲಿ ಒಬ್ಬರಾಗಿರುವ ಕಾಮಿಡಿಯನ್‌ ಹೇಳಿದ ಮಾತುಗಳಿವು. 
 

1 /8

'ಕಾಮಿಡಿ ಯಾವಾಗಲೂ ಬಡತನದಲ್ಲಿಯೇ ನಡೆಯುತ್ತದೆ'... ಮನರಂಜನಾ ಲೋಕದಲ್ಲಿ ಬಡತನದಲ್ಲಿ ಬೆಳೆದು ಇಂದು ಟಾಪ್‌ ನಿರೂಪಕಿಯರಲ್ಲಿ ಒಬ್ಬರಾಗಿರುವ ಕಾಮಿಡಿಯನ್‌ ಹೇಳಿದ ಮಾತುಗಳಿವು.   

2 /8

3 /8

ಭಾರತಿ ಸಿಂಗ್, ಬಾಲಿವುಡ್‌ನಲ್ಲಿ ಇಂದು ಇವರನ್ನು ʻಲಾಫಿಂಗ್‌ ಕ್ವೀನ್‌ʼ ಎಂದೇ ಕರೆಯುತ್ತಾರೆ. ಭಾರತಿ ಸಿಂಗ್‌ ತಮ್ಮ ಅದ್ಭುತ ಕಾಮಿಕ್ ಟೈಮಿಂಗ್, ಎಕ್ಸ್‌ಪ್ರೆಶನ್ ಮತ್ತು ಪಂಚ್ ಲೈನ್‌ಗಳಿಂದ ಯಾವುದೇ ಸನ್ನಿವೇಶವನ್ನು ಆಹ್ಲಾದಕರವಾಗಿಸಬಲ್ಲ ಕೌಶಲ್ಯವನ್ನು ಹೊಂದಿದ್ದಾರೆ.  ಸದಾ ಎಲ್ಲರನ್ನು ನಗಿಸುತ್ತಾ ಎಲ್ಲರನ್ನೂ ಕುಷಿಯಾಗಿಡುತ್ತಾ ಇರುವ ಭಾರತಿ ಸಿಂಗ್‌ ಈ ಸ್ಥಾನಕ್ಕೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.  

4 /8

ಚಿಕ್ಕ ವಯಸ್ಸಿನಲಲಿಯೇ ಭಾರತಿ ಸಿಂಗ್‌ ಅವರ ತಂದೆಯನ್ನು ಕಳೆದುಕೊಂಡರು, ನಂತರ ಮನೆಯ ನಿರ್ವಾಹಣೆಯ ಜವಾಬ್ದಾರಿ ಭಾರತಿಯವರ ತಾಯಿಯ ಹೆಗಲ ಮೇಲೆ ಬಿತ್ತು. ಪುಟ್ಟ ಭಾರತಿಯನ್ನು ಕರೆದುಕೊಂಡು ಆಕೆಯ ತಾಯಿ ಮನೆ ಮನೆಗೆ ಅಲೆದು ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು.

5 /8

ತನ್ನ ಅನೇಕ ಸಂದರ್ಶನಗಳಲ್ಲಿ, ಭಾರತಿ ತನ್ನ ಬಾಲ್ಯ ಮತ್ತು ತಾಯಿಯ ಕಷ್ಟಗಳನ್ನು ನೆನಪಿಸಿಕೊಳ್ಳಯತ್ತಾ,  ದಿನಕ್ಕೆ ಎರಡು ಹೊತ್ತಿನ ಊಟಕ್ಕಾಗಿ ತನ್ನ ತಾಯಿ ಹೇಗೆ ಹಗಲಿರುಳು ಶ್ರಮಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಕಠಿಣ ಹೋರಾಟದ ಹೊರತಾಗಿಯೂ, ಸ್ಟಾರ್‌ ಕಾಮಿಡಿಯನ್‌ ಕೆಲವೊಮ್ಮೆ ಕಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದರಂತೆ, ಅಷ್ಟೆ ಅಲ್ಲ ತೀರಾ ಹಸಿವಾದಾಗ ಡಸ್ಟ್‌ಬಿನ್‌ನಲ್ಲಿ ಆಹಾರವನ್ನು ಹುಡುಕಿ ತಿನ್ನುತ್ತಿದ್ದರಂತೆ.

6 /8

ಭಾರತಿ ಸಿಂಗ್‌ ತಮ್ಮ ವೃತ್ತಿಜೀವನವನ್ನು 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಮೂಲಕ ಪ್ರಾರಂಭಿಸಿದರು. ತಮ್ಮ ಹಾಸ್ಯದ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಶೋನಲ್ಲಿ ಅವರ ‘ಲಲ್ಲಿ’ ಪಾತ್ರವನ್ನು ಪ್ರೇಕ್ಷಕರು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ.   

7 /8

ಈ ಕಾರ್ಯಕ್ರಮದ ನಂತರ ಭಾರತಿ ಸಿಂಗ್‌  'ಕಾಮಿಡಿ ಸರ್ಕಸ್' ಶೋನಲ್ಲಿ ಕಾಣಿಸಿಕೊಂಡರು. ಈ ಶೋ ಕೂಡ ಸಾಕಷ್ಟು ಜನಪ್ರಿಯವಾಯಿತು. ಈ ಕಾರ್ಯಕ್ರಮದಲ್ಲಿ ಹಾಸ್ಯನಟ ತನ್ನ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಭೇಟಿಯಾದರು. ಕಾರ್ಯಕ್ರಮದಲ್ಲಿ ಈ ಇಬ್ಬರ ಭೇಟಿ ಪ್ರೀತಿಗೆ ತಿರುಗಿತು, 11 ವರ್ಷಗಳ ಕಾಲ ರಹಸ್ಯವಾಗಿ ಡೇಟಿಂಗ್‌ ಮಾಡಿದ್ದ ಈ ಜೋಡಿ 2017ರಲ್ಲಿ ವಿವಾಹವಾದರು.

8 /8

ಮದುವೆಯಾದ 5 ವರ್ಷಗಳ ನಂತರ, ಹರ್ಷ ಮತ್ತು ಭಾರತಿ ತಮ್ಮ ಮಗನನ್ನು ಸ್ವಾಗತಿಸಿದರು. ದಂಪತಿಗಳು ತಮ್ಮ ಮಗನಿಗೆ ಲಕ್ಷ್ಯ ಲಿಂಬಾಚಿಯಾ ಎಂದು ಹೆಸರಿಸಿದ್ದಾರೆ.