Vastu For Plant: ಶಿವನಿಗೆ ಪ್ರಿಯವಾದ ಈ ಸಸ್ಯ ಮನೆಯಲಿದ್ದರೆ ಸದಾ ಇರುತ್ತೆ ಲಕ್ಷ್ಮಿ ದೇವಿ ಕೃಪೆ

Vastu For Plant: ವಾಸ್ತುವಿನ ಪ್ರಕಾರ, ಶಿವನಿಗೆ ಪ್ರಿಯವಾದ ಈ ಒಂದು ಸಸ್ಯ ಎಂದರೆ ಬಿಲ್ವ ಸಸ್ಯ ಮನೆಯಲ್ಲಿದ್ದರೆ ತಾಯಿ ಲಕ್ಷ್ಮಿ ಅಂತಹ ಮನೆಯನ್ನು ಪ್ರವೇಶಿಸುತ್ತಾಳೆ. ಅವರಿಗೆ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. 

Vastu Tips: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಯಾವ ಸಸ್ಯಗಳನ್ನು ನೆಡುವುದು ಶುಭ. ಯಾವ ಸಸ್ಯಗಳು  ಸಂಪತ್ತಿನ ಅಧಿದೇವತೆ ಮಾತೆ ಲಕ್ಷ್ಮೀದೇವಿಯನ್ನು ಆಕರ್ಷಿಸುತ್ತವೆ ಎಂಬಿತ್ಯಾದಿ ಮಾಹಿತಿಗಳ ಬಗ್ಗೆಯೂ ತಿಳಿಸಲಾಗಿದೆ. ವಾಸ್ತುವಿನ ಪ್ರಕಾರ, ಭೋಲೆನಾಥನಿಗೆ ಪ್ರಿಯವಾದ ಈ ಒಂದು ಸಸ್ಯ ಮನೆಯಲ್ಲಿದ್ದರೆ ತಾಯಿ ಲಕ್ಷ್ಮಿ ಅಂತಹ ಮನೆಯನ್ನು ಪ್ರವೇಶಿಸುತ್ತಾಳೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡಿ, ಸಂಪತ್ತನ್ನು ಸುರಿಸುತ್ತಾಳೆ ಎಂದು ಹೇಳಲಾಗುತ್ತದೆ. ಅದುವೇ ಬಿಲ್ವ ವೃಕ್ಷ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಶಿವನ ಆರಾಧನೆಯಲ್ಲಿ ಬಿಲ್ವ ಪತ್ರೆಗೆ ಮಹತ್ವದ ಸ್ಥಾನವಿದೆ. ಶಿವನಿಗೆ ಒಂದು ದಳ ಬಿಲ್ವ ಪತ್ರೆಯನ್ನು ಅರ್ಪಿಸಿ ಮನಸಾರೆ ಪೂಜಿಸಿದರೆ ಮನದ ಆಸೆ ಈಡೇರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆದರೆ, ಇದೇ ಬಿಲ್ವಪತ್ರೆ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿಯನ್ನು ಮನೆಗೆ ಪ್ರವೇಶಿಸುವಂತೆ ಮಾಡಬಲ್ಲದು ಎಂದು ನಿಮಗೆ ತಿಳಿದಿದೆಯೇ?

2 /5

ಧಾರ್ಮಿಕ ನಂಬಿಕೆಗಳ ಪ್ರಕಾರ, ಬಿಲ್ವಪತ್ರೆಯಲ್ಲಿ ತಾಯಿ ಮಹಾಲಕ್ಷ್ಮೀ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ, ಬಿಲ್ವ ವೃಕ್ಷವನ್ನು ಪೂಜಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ, ಲಕ್ಷ್ಮೀ ಕೃಪೆಗೂ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. 

3 /5

ವಾಸ್ತು ಶಾಸ್ತ್ರದ ಪ್ರಕಾರ, ಯಾವ ಮನೆಯಲ್ಲಿ ಬಿಲ್ವ ವೃಕ್ಷ ಇರುತ್ತದೆಯೋ, ಆ ಮನೆಯಲ್ಲಿ ಎಂದಿಗೂ ಕೂಡ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. 

4 /5

ಇನ್ನೊಂದು ನಂಬಿಕೆಗಳ ಪ್ರಕಾರ, ಬಿಲ್ವ ವೃಕ್ಷದ ಬೇರನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಮನೆಯ ತಿಜೋರಿಯಲ್ಲಿಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ. ಮಾತ್ರವಲ್ಲ, ಈ ವೃಕ್ಷದ ಕೆಳಗೆ ನಿಂತು ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ ಬಡತನದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. 

5 /5

ಬಿಲ್ವ ವೃಕ್ಷಕ್ಕೆ ಶುದ್ಧ ನೀರಿನಿಂದ ನೀರುಣಿಸಿದರೆ, ಪೂರ್ವಜರು ತೃಪ್ತರಾಗುತ್ತಾರೆ ಮತ್ತು ಅವರ ಆಶೀರ್ವಾದ ಇಡೀ ಕುಟುಂಬದ ಮೇಲೆ ಸದಾ ಇರುತ್ತದೆ ಎಂಬ ನಂಬಿಕೆಯೂ ಇದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.