BSNL ಭರ್ಜರಿ ಯೋಜನೆ, 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ ಸಿಗಲಿದೆ 5GB DATA

                  

ಬಿಎಸ್ಎನ್ಎಲ್ ನೀಡುವ ಈ ಯೋಜನೆಯಲ್ಲಿ ಒಟ್ಟು 420 GB ಡಾಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಗ್ರಾಹಕರು ಪ್ರತಿದಿನ 5 ಜಿಬಿ ಡೇಟಾವನ್ನು ಪಡೆಯುತ್ತಾರೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯಡಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯವೂ ಸಿಗುತ್ತದೆ.

1 /4

ಬೆಂಗಳೂರು : ಗ್ರಾಹಕರನ್ನು ಆಕರ್ಷಿಸಲು, ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಟೆಲಿಕಾಂ ಕ್ಷೇತ್ರದಲ್ಲಿ ಕೈಗೆಟುಕುವ ಯೋಜನೆಗಳನ್ನು ನೀಡುವ ಕಂಪನಿಗಳ ಓಟದ ಮಧ್ಯೆ ಬಿಎಸ್‌ಎನ್‌ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ತನ್ನ ಗ್ರಾಹಕರಿಗೆ ಉತ್ತಮ ಯೋಜನೆಯನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ 84 ದಿನಗಳ ಮಾನ್ಯತೆಯೊಂದಿಗೆ 599 ರೂ.ಗಳಿಗೆ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡಿದೆ.

2 /4

ಕಂಪನಿಯು ನೀಡುವ ಈ ಯೋಜನೆಯಲ್ಲಿ ಒಟ್ಟು 420 ಜಿಬಿ ಡಾಟಾ (DATA) ಸೌಲಭ್ಯ ಲಭ್ಯವಿದೆ. ಇದರೊಂದಿಗೆ ಗ್ರಾಹಕರು ಪ್ರತಿದಿನ 5 ಜಿಬಿ ಡೇಟಾವನ್ನು ಪಡೆಯುತ್ತಾರೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯಡಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯವೂ ಸಿಗುತ್ತದೆ. ಇದಲ್ಲದೆ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯ ನೀಡಲಾಗುತ್ತದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ನೀವು ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಬಿಎಸ್‌ಎನ್‌ಎಲ್‌ನ ಹೊಸ ಯೋಜನೆಯಲ್ಲಿ ಜನರು ಜಿಂಗ್ ಅಪ್ಲಿಕೇಶನ್‌ನ (Zing app) ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಿದ್ದಾರೆ. ಕರೋನಾ ಯುಗದಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಯೋಜನೆ ಆರ್ಥಿಕವಾಗಿರಬಹುದು. ಇದನ್ನೂ ಓದಿ - ತನ್ನ ಗ್ರಾಹಕರಿಗಾಗಿ ಅಗ್ಗದ ದರದಲ್ಲಿ ಹೊಸ ಪ್ಲಾನ್ ಲಾಂಚ್ ಮಾಡಿದ BSNL

3 /4

ಬಿಎಸ್ಎನ್ಎಲ್ನ ಈ 5G ಯೋಜನೆಯ ಪ್ರಯೋಜನಗಳನ್ನು ಆಯ್ದ ರಾಜ್ಯಗಳ ಕೆಲವೇ ನಗರಗಳಿಂದ ಮಾತ್ರ ಪಡೆಯಬಹುದು. ಆದ್ದರಿಂದ ಹೆಚ್ಚಿನ ಸ್ಥಳಗಳಲ್ಲಿ, ಬಳಕೆದಾರರು ಪ್ರತಿದಿನ ಹೆಚ್ಚಿನ ಡೇಟಾವನ್ನು ಖರ್ಚು ಮಾಡಲು ಬಯಸಿದರೆ, ಅವರು 2 G / 3 G ಯಲ್ಲಿ ಖರ್ಚು ಮಾಡಬೇಕಾಗುತ್ತದೆ. ಕಂಪನಿಯ 4 G ಸೇವೆಗಳು ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಕರ್ನಾಟಕ (Karnataka) ಮತ್ತು ಮಧ್ಯಪ್ರದೇಶದ ಕೆಲವು ನಗರಗಳಲ್ಲಿವೆ. ಈ ಸ್ಥಳಗಳ ಜನರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದನ್ನೂ ಓದಿ - ಹೊಸ ರೀಚಾರ್ಜ್ ಯೋಜನೆ ಪ್ರಾರಂಭಿಸಿದ BSNL, ಸಿಗಲಿದೆ ಈ ಎಲ್ಲಾ ಪ್ರಯೋಜನ

4 /4

ಬೆಲೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ, ಅನೇಕ ವಿಧಗಳಲ್ಲಿ ಬಿಎಸ್ಎನ್ಎಲ್ನ 599 ಯೋಜನೆ ಇತರ ಟೆಲಿಕಾಂ ಕಂಪನಿಗಳ ದುಬಾರಿ ಯೋಜನೆಗಳಿಗಿಂತ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅಂತಹ ಯೋಜನೆಯಲ್ಲಿ ಇತರ ಕಂಪನಿಗಳು ಪ್ರತಿದಿನ ಗ್ರಾಹಕರಿಗೆ ಕೇವಲ 1.5 ಜಿಬಿ ಅಥವಾ 2 ಜಿಬಿ ಇಂಟರ್ನೆಟ್ ಡೇಟಾವನ್ನು ನೀಡುತ್ತವೆ, ಆದರೆ ಬಿಎಸ್ಎನ್ಎಲ್ 5 ಜಿಬಿ ಡೇಟಾವನ್ನು ನೀಡುತ್ತಿದೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.