Shani-Shukra In Navpancham Yog: ಶೀಘ್ರದಲ್ಲಿಯೇ ನವಪಂಚಮ ರಾಜಯೋಗ ನಿರ್ಮಾಣ, ಧನದಾತ ಶುಕ್ರ- ಕರ್ಮಫಲದಾತ ಶನಿ ಕೃಪೆಯಿಂದ ಅಪಾರ ಧನಲಾಭ!

Shani Shukra In Navpancham Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಕರ್ಮ ಫಲದಾತ ಶನಿ ಹಾಗೂ ಧನ ಫಲದಾತ ಶುಕ್ರನ ಕೃಪೆಯಿಂದ ನವಪಂಚಮ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಅಪಾರ ಧನಪ್ರಾಪ್ತಿ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿವೆ, ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

Nav Pancham Rajyog: ಜೋತಿಷ್ಯ ಶಾಸ್ತ್ರದಲ್ಲಿ ಹಲವು ಯೋಗಗಳ ಕುರಿತು ವರ್ಣನೆಗಳನ್ನು ನೀಡಲಾಗಿದ್ದು, ಓರ್ವ ವ್ಯಕ್ತಿಯ ಜಾತಕದಲ್ಲಿ ಆ ಯೋಗಗಳು ನಿರ್ಮಾಣಗೊಂಡಿದ್ದೆ ಆದಲ್ಲಿ ವ್ಯಕ್ತಿ ತನ್ನ ಜೀವನದಲ್ಲಿ ಅಪಾರ ಕೀರ್ತಿಯನ್ನು ಗಳಿಸುತ್ತಾನೆ ಮತ್ತು ತನ್ನ ಜೀವನದ ಉತ್ತುಂಗ ಸ್ಥಾನಕ್ಕೇರುತ್ತಾನೆ. ಪ್ರಸ್ತುತ ಇಂತಹುದೇ ಒಂದು ಯೋಗ ನಿರ್ಮಾಣಗೊಳ್ಳುತ್ತಿದ್ದು, ಆ ಯೋಗದ ಹೆಸರು ನಂವಪಂಚಮ ರಾಜಯೋಗ. ಒಂದು ಗ್ರಹ ಮತ್ತೊಂದು ಗ್ರಹದ ಜೊತೆಗೆ ನವಪಂಚಮ ಭಾವದಲ್ಲಿ ಬಂದಾಗ ಈ ಯೋಗ ನಿರ್ಮಾಣಗೊಳ್ಳುತ್ತದೆ. ಪ್ರಸ್ತುತ ನವಗ್ರಹಗಳ ಎರಡು ದೊಡ್ಡ ಗ್ರಹಗಳಾದ ಶನಿ ಹಾಗೂ ಶುಕ್ರರು ನವಪಂಚಮ ರಾಜಯೋಗವನ್ನು ರೂಪ್ಸಿಸುತ್ತಿದ್ದಾರೆ. ಇದರಿಂದ ಮೂರು ರಾಶಿಗಳ ಜನರಿಗೆ ಅಪಾರ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Budhaditya Rajyog In Aries: ಸೂರ್ಯ ಹಾಗೂ ಬುದ್ಧನ ಮೈತ್ರಿಯಿಂದ ಈ ರಾಶಿಗಳ ಭಾಗ್ಯ ಫಳಫಳ ಹೊಳೆಯಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ತುಲಾ ರಾಶಿ: ತುಲಾ ರಾಶಿಗೆ ಶುಕ್ರ ಅಧಿಪತಿ. ಹೀಗಾಗಿ ನವಪಂಚಮ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಶನಿ ವಿರಾಜಮಾನನಾಗಿದ್ದರೆ, ನವಮಭಾವದಲ್ಲಿ ಶುಕ್ರ ಇರಲಿದ್ದಾನೆ. ಇದರಿಂದಾಗಿ ನಿಮ್ಮ ಅದೃಷ್ಟದಲ್ಲಿ ಉನ್ನತಿ ಇರಲಿದೆ. ಧಾರ್ಮಿಕ ಯಾತ್ರೆ ಕೈಗೊಳ್ಳುವಿರಿ, ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ಶನಿ ಮೂಲತ್ರಿಕೋಣ ರಾಜಯೋಗ ಕೂಡ ನಿರ್ಮಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೌಕರವರ್ಗದ ಜಾನರಿಗಾಗಿ ಪದೋನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಧನಾರ್ಜನೆ ಹಾಗೂ ಹೂಡಿಕೆ ಮಾಡುವಲ್ಲಿ ಯಶಸ್ವಿಯಾಗುವಿರಿ. ಸಂತಾನ ಪಕ್ಷದ ವತಿಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ.   

2 /3

ಧನು ರಾಶಿ: ಧನು ರಾಶಿಯ ಜಾತಕದವರ ವೈವಾಹಿಕ ಜೀವನ, ಬಂಧುಮಿತ್ರರು ಹಾಗೂ ಸಹಕರ್ಮಿಗಳ ದೃಷ್ಟಿಯಿಂದ ಈ ನವಪಂಚಮ ರಾಜಯೋಗ ಅತ್ಯಂತ ಉತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ವಾಹನ ಹಾಗೂ ಆಸ್ತಿಪಾಸ್ತಿ ಖರೀದಿಸಲು ನೀವು ಮುಂದಾಗಬಹುದು. ಯಾರ ಕೆಲಸ ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದೆಯೋ ಅವರಿಗೆ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ.  ಇನ್ನೊಂದೆಡೆ ಉದ್ಯಮಿಗಳಿಗೆ ಈ ಅವಧಿಯಲ್ಲಿ ಅಪಾರ ಧನ ಲಾಭ ಉಂಟಾಗುವ ಸಾಧ್ಯತೆ ಇದೆ.  

3 /3

ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೆ ನವಪಂಚಮ ರಾಜಯೋಗ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಬುದ್ಧಿ ಹಾಗೂ ಉನ್ನತಿ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಹಳೆ ಹೂಡಿಕೆಯಿಂದಲೂ ಕೂಡ ಸಾಕಷ್ಟು ಲಾಭವಾಗಲಿದೆ. ಷೇರು ಮಾರುಕಟ್ಟೆ, ಲಾಟರಿಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಮಯ ಉತ್ತಮವಾಗಿದೆ. ಧನಲಾಭದ ಯೋಗವಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಊರ್ಜೆಯಿಂದ ತುಂಬಿರುವಿರಿ. ಇದರಿಂದ ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನದ ಲಾಭವನ್ನು ನೀವು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ ಮತ್ತು ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಚೈತನ್ಯ ಇರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)