ಈ ರಾಶಿಯವರನ್ನು ಧನಿಕರನ್ನಾಗಿಸುತ್ತಾನೆ ರಾಹು! ಒಂದೂವರೆ ವರ್ಷ ಧನ ಸಂಪತ್ತಿಗಿಲ್ಲ ಕೊರತೆ

ರಾಹು ಅಕ್ಟೋಬರ್ 30 ರಂದು ತನ್ನ ರಾಶಿಯನ್ನು ಬದಲಿಸಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೇಷ ರಾಶಿಯಿಂದ ಮೀನ ರಾಶಿಗೆ  ರಾಹುವಿನ ಸಂಕ್ರಮಣವಾಗುತ್ತದೆ. ರಾಹುವಿನ ಸ್ಥಾನದಲ್ಲಿನ ಬದಲಾವಣೆ ಮೂರು ರಾಶಿಯವರಿಗೆ ಅಪಾರ  ಸಂಪತ್ತು, ಉನ್ನತ ಸ್ಥಾನ ಮತ್ತು ಪ್ರತಿಷ್ಠೆ ಒದಗಿಸಿಕೊಡುತ್ತದೆ. 

ಬೆಂಗಳೂರು : ರಾಹು ಮತ್ತು ಕೇತು ಅಂದರೆ ಸಾಮಾನ್ಯವಾಗಿ ಕಷ್ಟ ಕೊಡುವವರು ಎಂದೇ ನಂಬಿಕೆ. ಹೀಗಾಗಿ ಇವರ ಹೆಸರಿನಲ್ಲಿ ಶಾಂತಿ ಹೋಮಗಳು ನಡೆಯುತ್ತಿರುತ್ತವೆ. ರಾಹುವಿನದ್ದು ಸದಾ ಹಿಮ್ಮುಖ ನಡೆ. ಕಷ್ಟ ಕೊಡುವ ರಾಹು ಕೂಡಾ ಶುಭ ಫಲಗಳನ್ನು ಕರುಣಿಸುತ್ತಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ರಾಹು ಮತ್ತು ಕೇತು ಗ್ರಹಗಳು ಒಂದೂವರೆ ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಈ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಿಸಲಿದ್ದಾನೆ. ಮೇಷ ರಾಶಿಯಿಂದ ಹಿರ್ಬರುವ ರಾಹು ನಂತರ ಪ್ರವೇಶಿಸುವುದು ಮೀನ ರಾಶಿಯನ್ನು. ಈ ರೀತಿ ರಾಹು ತನ್ನ ಸ್ಥಾನವನ್ನು ಬದಲಾಯಿಸುವ ಮೂಲಕ ಮೂರು ರಾಶಿಯವರ ಜೀವನದಲ್ಲಿ ತನ್ನ ಕೃಪಾ ದೃಷ್ಟಿ ಹರಿಸುತ್ತಾನೆ. ಈ ರಾಶಿಯವರ ಸಂಪತ್ತು ಗಳಿಕೆ, ಉನ್ನತ ಸ್ಥಾನಮಾನ ಪ್ರತಿಷ್ಠೆ ಗೌರವ ಪ್ರಾಪ್ತಿಗೆ ಕಾರಣನಾಗುತ್ತಾನೆ. 

2 /4

ವೃಶ್ಚಿಕ ರಾಶಿ: ರಾಹುವಿನ ರಾಶಿ ಬದಲಾಗುತ್ತಿದ್ದಂತೆ ಈ ರಾಶಿಯವರ ಅದೃಷ್ಟವೂ ಬದಲಾಗುತ್ತದೆ. ಇದ್ದಕ್ಕಿದ್ದಂತೆ ಹಣಕಾಸಿನ ಪ್ರಯೋಜನಗಳನ್ನು ಪಡೆಯಬಹುದು. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ಲಾಭವು ವೇಗವಾಗಿ ಹೆಚ್ಚಾಗುತ್ತದೆ. ಈ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ.

3 /4

ಮಕರ ರಾಶಿ : ದೊಡ್ಡ ಮಟ್ಟದ ಯಶಸ್ಸು ಅಥವಾ ಸಾಧನೆ ನಿಮ್ಮದಾಗುತ್ತದೆ.   ಆರ್ಥಿಕ ಲಾಭ ದೊರೆಯಲಿದೆ. ಆಸ್ತಿ ಖರೀದಿಸುವ ಅವಕಾಶವಿದೆ. ಜೀವನದಲ್ಲಿ ಕಷ್ಟಗಳು ಕೊನೆಯಾಗಲಿವೆ.    ಶತ್ರುಗಳನ್ನು ಸುಲಭವಾಗಿ ಸೋಲಿಸುವುದು ಸಾಧ್ಯವಾಗುತ್ತದೆ.  

4 /4

ಕುಂಭ ರಾಶಿ : ರಾಹು ಸಂಚಾರವು ಕುಂಭ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಈ ರಾಶಿಯವರು  ಹಠಾತ್ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಕುಂಭ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಮಹತ್ತರ ಬದಲಾವಣೆ ಕಂಡು ಬರುತ್ತದೆ.