ಕೋಕೋದಲ್ಲಿನ ಫ್ಲಾವನಾಲ್‌ಗಳು ಎಂಬ ಪದಾರ್ಥಗಳು ಎಸಿಇ ಇನ್‌ಹಿಬಿಟರ್‌ಗಳು ಎಂಬ ರಕ್ತದೊತ್ತಡವನ್ನು ಕಡಿಮೆ ಮಾಡಲು ಔಷಧಿಗಳಂತೆ ಕಾರ್ಯನಿರ್ವಹಿಸುತ್ತವೆ.
ಬೆಂಗಳೂರು : ಚಾಕೊಲೇಟ್ ಅನ್ನು ಕೋಕೋ ಬೀನ್‌ನಿಂದ ತಯಾರಿಸಲಾಗುತ್ತದೆ. ಇದು ಕರಗಬಲ್ಲ ಫೈಬರ್, ಸತು, ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್, ರಂಜಕ ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ದೇಹದ ವಿವಿಧ ಕಾರ್ಯಗಳಿಗೆ ಮತ್ತು ಕಿಣ್ವಗಳನ್ನು ಸಕ್ರಿಯಗೊಳಿಸಲು ಅವಶ್ಯಕ. ಅಲ್ಲದೆ ದೇಹದ ಚಯಾಪಚಯವನ್ನು ಕೂಡಾ ಉತ್ತಮಗೊಳಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕೋಕೋದಲ್ಲಿನ ಫ್ಲಾವನಾಲ್‌ಗಳು ಎಂಬ ಪದಾರ್ಥಗಳು ಎಸಿಇ ಇನ್‌ಹಿಬಿಟರ್‌ಗಳು ಎಂಬ ರಕ್ತದೊತ್ತಡವನ್ನು ಕಡಿಮೆ ಮಾಡಲು ಔಷಧಿಗಳಂತೆ ಕಾರ್ಯನಿರ್ವಹಿಸುತ್ತವೆ. ಇದು ರಕ್ತದಲ್ಲಿ ನೈಟ್ರಸ್ ಆಕ್ಸೈಡ್ ಅನ್ನು ಉತ್ಪಾದಿಸಲು ದೇಹವನ್ನು ಉತ್ತೇಜಿಸುವ ಫ್ಲೇವನಾಲ್ ಗಳನ್ನು ಸಹ ಹೊಂದಿರುತ್ತದೆ. ಇದು ರಕ್ತನಾಳಗಳನ್ನು ತೆರೆಯಲು ಸಹಾಯ ಮಾಡುತ್ತದೆ.
ಯಕೃತ್ತಿನ ರಕ್ತನಾಳಗಳಲ್ಲಿನ ಅಧಿಕ ರಕ್ತದೊತ್ತಡವು ಅದರ ಹಾನಿ ಮತ್ತು ದೀರ್ಘಕಾಲದ ಯಕೃತ್ತಿನ ಕಾಯಿಲೆಗೆ ಸಂಬಂಧಿಸಿದ್ದಾಗಿದೆ. ಟೆಕ್ಸಾಸ್‌ನ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ನಡೆಸಿದ ಸಂಶೋಧನೆಯ ಪ್ರಕಾರ, ಡಾರ್ಕ್ ಚಾಕೊಲೇಟ್ ಯಕೃತ್ತಿನಲ್ಲಿ ರಕ್ತವನ್ನು ಸುಧಾರಿಸುತ್ತದೆ ಮತ್ತು ಅದರ ಕಾರ್ಯನಿರ್ವಹಣೆಯನ್ನು ವೇಗಗೊಳಿಸುತ್ತದೆ.
ಕೋಕೋವು ಪಾಲಿಫಿನಾಲ್ಸ್ ಎಂಬ ರಾಸಾಯನಿಕಗಳನ್ನು ಹೊಂದಿರುತ್ತದೆ ಮತ್ತು ಆದ್ದರಿಂದ ಡಾರ್ಕ್ ಚಾಕೊಲೇಟ್ ಅನ್ನು ಸೇವಿಸಿದಾಗ, ಅದು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಸರಿಯಾಗಿದ್ದಾಗ, ರಕ್ತನಾಳಗಳು ಆರೋಗ್ಯಕರವಾಗಿರುತ್ತವೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿರುತ್ತದೆ.
ಚಾಕೊಲೇಟ್‌ನಲ್ಲಿ ಕೆಫೀನ್, ಸತು, ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ರಂಜಕವಿದೆ. ಈ ಪೋಷಕಾಂಶಗಳು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ ಮತ್ತು ದೌರ್ಬಲ್ಯವನ್ನು ತೆಗೆದುಹಾಕುತ್ತವೆ. ಅಲ್ಲದೆ, ರಕ್ತಹೀನತೆಯಂತಹ ಇತರ ಆರೋಗ್ಯ ಸಮಸ್ಯೆಗಳಿಂದ ದೌರ್ಬಲ್ಯವನ್ನು ಹೊಂದಿರುವ ಜನರಿಗೆ ಕೂಡಾ ಡಾರ್ಕ್ ಚಾಕೊಲೇಟ್ ಸಹಕಾರಿ.
ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ಕುಸಿದರೆ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ವ್ಯಕ್ತಿಯನ್ನು ಕೋಮಾಗೂ ಕೊಂಡೊಯ್ಯಬಹುದು. ಚಾಕೊಲೇಟ್ ತಿನ್ನುವುದರಿಂದ ಹಠಾತ್ ಕಡಿಮೆಯಾದ ರಕ್ತದ ಸಕ್ಕರೆಯನ್ನು ಮತ್ತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಚಾಕೊಲೇಟಲ್ಲಿ ಸಂಸ್ಕರಿಸಿದ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳಿರುತ್ತವೆ. ಅದು ದೇಹಕ್ಕೆ ಹಾನಿಕಾರಕವಾಗಿದೆ ಎಂಬುದನ್ನು ನೆನಪಿನಲ್ಲಿರಲಿ. ಹಾಗಾಗಿ ಅದನ್ನು ಸಮತೋಲಿತ ಪ್ರಮಾಣದಲ್ಲಿ ತಿನ್ನಬೇಕು.