ದಷ್ಟ ಪುಷ್ಟ, ಕಡು ಕಪ್ಪು ಕೂದಲಿಗೆ ಕಾಫಿ ಪುಡಿ ವರದಾನ! ಆದ್ರೆ ಹೀಗೆ ಬಳಸಿ!!

Coffee For Hair Growth: ಕಾಫಿ ಕೂದಲಿಗೆ ವರದಾನವಾಗಿದೆ.. ಇದನ್ನು ಈ ರೀತಿ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಗಾಢ ಕಡು ಕಪ್ಪು ಕೂದಲು ನಿಮ್ಮದಾಗುತ್ತೆ..
 

1 /6

ಉದ್ದ ಹಾಗೂ ದಪ್ಪನೆಯ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಬಯಕೆ.. ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿ ಬೆಸೋತ್ತಿರುವವರು ಇದ್ದಾರೆ.. ಆದರೆ ಇಂದು ನಾವು ಹೇಳಲು ಹೊರಟಿರುವ ಮನೆಮದ್ದು ನಿಮ್ಮ ಕೂದಲನ್ನು ಬುಡದಿಂದ ಸ್ಟ್ರಾಂಗ್‌ ಮಾಡಿ ಉದ್ದ ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.. 

2 /6

ಉದ್ದ ಮತ್ತು ದಪ್ಪನಾದ ಹೊಳೆಯುವ ಕೇಶರಾಶಿ ಪಡೆಯಲು ಕಾಫಿ ಪುಡಿ ಉತ್ತಮ ಮನೆಮಮದ್ದಾಗಿದೆ.. ಹೌದು ಕಾಫಿ ಕುಡಿಯಲು ರುಚಿಕರವಾಗಿರುವುದಲ್ಲದೇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ..   

3 /6

ಕಾಫಿಯ ಪ್ರಯೋಜನಗಳು: ಕಾಫಿಯು ಉತ್ಕರ್ಷಣ ನಿರೋಧಕಗಳು ಮತ್ತು ಕೆಫೀನ್ ಅನ್ನು ಹೊಂದಿದ್ದು, ಇವು ಬೇರುಗಳಿಂದ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಕಾಫಿ ತುಂಬಾ ಪರಿಣಾಮಕಾರಿ ಎನ್ನಲಾಗುತ್ತದೆ..    

4 /6

ಕಾಫಿಪುಡಿಯನ್ನು ಕೂದಲಿಗೆ ಬಳಸುವ ವಿಧಾನ:  ಒಂದು ಬೌಲ್‌ನಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಂಡೀಷನರ್‌ ಮತ್ತು ತೆಂಗಿನ ಎಣ್ಣೆಗೆ ಚೆನ್ನಾಗಿ ಮಿಶ್ರಣ ಮಾಡಿ.. ನಂತರ ಪೇಸ್ಟ್‌ನ್ನು ಕೂದಲಿಗೆ 30 ನಿಮಿಷಗಳ ಕಾಲ ಹಚ್ಚಿ, ಬಳಿಕ ಶಾಂಪು ಬಳಸಿ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲು ಬುಡದಿಂದ ಸ್ಟ್ರಾಂಗ್‌ ಆಗುತ್ತವೆ..   

5 /6

ವಿಧಾನ 2: ಎರಡು ಚಮಚ ಕಾಫಿ ಪುಡಿ, ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ 20 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆಯಿರಿ.  

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.