Smartphone Charging Mistakes: ಚಾರ್ಜಿಂಗ್ ವೇಳೆ ಈ ತಪ್ಪುಗಳಿಂದ ಬಾಂಬ್‌ನಂತೆ ಸ್ಫೋಟಗೊಳ್ಳುತ್ತೆ ಫೋನ್

Smartphone Charging Common Mistakes: ಸ್ಮಾರ್ಟ್‌ಫೋನ್ ಚಾರ್ಜಿಂಗ್‌ನ ಸಂದರ್ಭಗಳು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಫೋನ್ ಸ್ಫೋಟಗೊಳ್ಳುವಂತೆ ಮಾಡಬಹುದು. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪ್ರಸ್ತುತ, ಕಾಲಮಾನದಲ್ಲಿ ಪ್ರತಿಯೊಬ್ಬರ ಜೀವನಾಡಿಯಾಗಿರುವ ಸ್ಮಾರ್ಟ್‌ಫೋನ್ (Smartphone) ಅನ್ನು ಬಿಟ್ಟಿರುವುದು ಎಂದರೆ ಏನೋ ಕಳೆದುಕೊಂಡಂತೆ. ಹಾಗಾಗಿಯೇ, ಕೆಲವರು ಫೋನ್ ಚಾರ್ಜ್ (Phone Charge) ಮಾಡುವಾಗಲೂ ಅದನ್ನು ಬಿಟ್ಟಿರುವುದೇ ಇಲ್ಲ. ಆದರೆ, ಇಂತಹ ತಪ್ಪುಗಳಿಂದ ನಿಮ್ಮ ಫೋನ್ ಬಾಂಬ್‌ನಂತೆ ಸ್ಫೋಟಗೊಳ್ಳಬಹುದು ಏನು ನಿಮಗೆ ತಿಳಿದಿದೆಯೇ? ಹಾಗಿದ್ದರೆ, ಫೋನ್ ಚಾರ್ಜ್ ಮಾಡುವಾಗ ಯಾವ ತಪ್ಪುಗಳನ್ನು (Smartphone Charging Common Mistakes)  ಮಾಡಬಾರದು ಎಂದು ತಿಳಿಯೋಣ...   

2 /5

ಕೆಲವರು ಫೋನ್ ಅನ್ನು ಚಾರ್ಜಿಂಗ್ ಇಟ್ಟು ಅದರಲ್ಲಿ ಮೆಸೇಜ್ ಮಾಡುವುದು, ವಿಡಿಯೋ ವೀಕ್ಷಿಸುವುದು, ಗೇಮ್ ಆಡುವ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಇದರಿಂದ ಫೋನ್ ಮೇಲೆ ಒತ್ತಡ ಹೆಚ್ಚಾಗುವುದರಿಂದ ಇದು ಹೆಚ್ಚು ಬಿಸಿಯಾಗುತ್ತದೆ. ಕೆಲವೊಮ್ಮೆ ಇದರಿಂದ ಫೋನ್ ಸ್ಫೋಟಗೊಳ್ಳಬಹುದು. 

3 /5

ಕೆಲವರಿಗೆ ನಾವು ಹೆಚ್ಚು ಹೊತ್ತು ಫೋನ್ ಚಾರ್ಜ್ (Phone Charging) ಮಾಡುವುದರಿಂದ ಅದರ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಹೀಗಾಗಿಯೇ, ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿ ಇಟ್ಟಿರುತ್ತಾರೆ. ಆದರೆ ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿ ಇಡುವುದರಿಂದ ಫೋನ್ ಓವರ್ ಹೀಟ್ ಆಗಿ ಅದು ಸಿಡಿಯಬಹುದು. 

4 /5

ಅಧಿಕೃತವಲ್ಲದ ಚಾರ್ಜರ್‌ಗಳು (Charger) ಭದ್ರತಾ ಮಾನದಂಡಗಳನ್ನು ಪೂರೈಸಿರುವುದಿಲ್ಲ. ಹಾಗಾಗಿ, ಇಂತಹ ಚಾರ್ಜರ್‌ಗಳ ಬಳಕೆಯು ಫೋನ್ ಅನ್ನು ಹಾನಿಗೊಳಿಸುತ್ತದೆ. ಬ್ಯಾಟರಿ ತುಂಬಾ ಬಿಸಿಯಾಗುವುದರಿಂದ ಇದು ಬಾಂಬ್‌ನಂತೆ ಸ್ಫೋಟಗೊಳ್ಳಬಹುದು. 

5 /5

ಫೋನ್‌ಗಳನ್ನು ಸುರಕ್ಷಿತವಾಗಿಡಲು (Phone Security) ಫೋನ್ ಕವರ್ ಅನ್ನು ಬಳಸಲಾಗುತ್ತದೆ. ಹಾಗಂತ ಫೋನ್ ರಕ್ಷಣೆಗಾಗಿ ಭಾರೀ ದಪ್ಪವಾದ ಫೋನ್  ಕೇಸ್‌ಗಳನ್ನು ಬಳಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದರಿಂದ ಫೋನ್ ಬಳಕೆ ವೇಳೆ, ಫೋನ್ ಚಾರ್ಜಿಂಗ್ ಸಂದರ್ಭದಲ್ಲಿ ಅದು ಅತಿಯಾಗಿ ಬಿಸಿಯಾಗುತ್ತದೆ. ಕೆಲವೊಮ್ಮೆ ಇದು ಫೋನ್ ಬ್ಲಾಸ್ಟ್ ಆಗಲು ಕೂಡ ಕಾರಣವಾಗಬಹುದು.