ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭಯೋತ್ಪಾದಕರ ಭೀಕರ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಫಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭಯೋತ್ಪಾದಕರ ಭೀಕರ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಫಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯ ತೀವ್ರತೆ ಎಷ್ಟಿತ್ತೆಂದರೆ 10 ಕಿ.ಮೀ. ದೂರದವರೆಗೂ ಸ್ಫೋಟದ ಸದ್ದು ಕೇಳಿತ್ತು. ಅಷ್ಟೇ ಅಲ್ಲ, ಯೋಧರ ದೇಹ ಗುರುತು ಪತ್ತೆಹಚ್ಚಲಾಗದಷ್ಟು ಛಿದ್ರ ಛಿದ್ರವಾಗಿತ್ತು. ಇಂಥ ಸಂದರ್ಭದಲ್ಲಿ ಸೇನಾ ಸಿಬ್ಬಂದಿಗೆ ಮೃತ ದೇಹಗಳ ಗುರುತು ಪತ್ತೆಹಚ್ಚಲು ಸಹಾಯವಾಗಿದ್ದು ಯೋಧರ ಆಧಾರ್ ಕಾರ್ಡ್, ರಜೆ ಪತ್ರ ಮತ್ತು ಐಡೆಂಟಿಟಿ ಕಾರ್ಡ್'ಗಳು!
(Images Courtesy: Twitter/@crpfindia)