7th pay commission : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! ಈ ದಿನಾಂಕದಿಂದ ಸಿಗಲಿದೆ ಡಿಎ.

ಹಣಕಾಸು ಖಾತೆ ಸಹಾಯಕ ಸಚಿವ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಜುಲೈ 1 ರಿಂದ ತುಟ್ಟಿ ಭತ್ಯೆಯ ಮೂರೂ ಕಂತು ಕೂಡಾ ಸಿಗಲು ಶುರುವಾಗುತ್ತದೆ ಎಂದು ಹೇಳಿದ್ದಾರೆ. 

ನವದೆಹಲಿ : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಗುಡ್ ನ್ಯೂಸ್. ಜುಲೈ 1 ರಿಂದ ತುಟ್ಟಿಭತ್ಯೆಯ ಎಲ್ಲಾ ಲಾಭ ನೌಕರರಿಗೆ ಸಿಗಲು ಶುರುವಾಗುತ್ತದೆ. ಬಾಕಿ ಇರುವ ಡಿಎ ಕೂಡಾ ಸಿಗಲಿದೆ. ಹೀಗೆ ಹೇಳಿದ್ದು ಮತ್ಯಾರೂ ಅಲ್ಲ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಅನುರಾಗ್ ಠಾಕೂರ್ ಲಿಖಿತ ಹೇಳಿಕೆ : ಹಣಕಾಸು ಖಾತೆ ಸಹಾಯಕ ಸಚಿವ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಜುಲೈ 1 ರಿಂದ ತುಟ್ಟಿ ಭತ್ಯೆಯ ಮೂರೂ ಕಂತು ಕೂಡಾ ಸಿಗಲು ಶುರುವಾಗುತ್ತದೆ ಎಂದು ಹೇಳಿದ್ದಾರೆ. ಏರಿಕೆಯಾದ ತುಟ್ಟಿಭತ್ಯೆಯನ್ನು ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.  

2 /5

ಜ.1, 2020 ರಿಂದ ಸಿಗಬೇಕಿತ್ತು ಲಾಭ : ಏರಿಕೆಯಾದ ಡಿಎ ಜನವರಿ 1, 2020ರಿಂದ ಸಿಗಬೇಕಿತ್ತು. ಆದರೆ, ಕರೋನಾ ಮಹಾಮಾರಿ ಕಾರಣದಿಂದ ಮಾರ್ಚ್ 2021ರ ತನಕ ಪಾವತಿಯನ್ನು ತಡೆ ಹಿಡಿದಿತ್ತು. ಸರ್ಕಾರದ ಹೊಸ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಾಕಷ್ಟು ವರದಾನವಾಗಲಿದೆ. 

3 /5

ಈಗ ಶೇ. 17 ರಷ್ಟು ಸಿಗುತ್ತಿದೆ ಡಿಎ : ಕೇಂದ್ರ ನೌಕರರಿಗೆ ಈಗ ಶೇ. 17 ರಷ್ಟು ಡಿಎ ಸಿಗುತ್ತಿದೆ. ವರ್ಷಕ್ಕೆ ಎರಡು ಸಲ ಡಿಎ ಹೆಚ್ಚಾಗುತ್ತದೆ. ಕರೋನಾ ಮಹಾಮಾರಿ ಕಾರಣದಿಂದಾಗಿ ಜುಲಾಯಿ 2020 ರಿಂದ ಜನವರಿ 2021ರ ತನಕ ಡಿಎ ಹೆಚ್ಚಳ ತಡೆಹಿಡಿಯಲಾಗಿತ್ತು. ಒಂದು ವೇಳೆ ಸರ್ಕಾರ ಡಿಎ ಹೆಚ್ಚಳದ ಘೋಷಣೆ ಮಾಡಿದರೆ, ನೌಕರರ ಡಿಎ ಶೇ. 25 ರಷ್ಟು ಏರಿಕೆಯಾಗಲಿದೆ.   

4 /5

ಹೊಸ ಪೇಮ್ಯಾಟ್ರಿಕ್ಸ್ (Pay matrix ) ಘೋಷಣೆ : 7ನೇ ವೇತನ ಆಯೋಗ ಹೊಸ ಪೇ ಮ್ಯಾಟ್ರಿಕ್ಸ್ ಘೋಷಣೆ ಮಾಡಿದೆ. ಈ ಮೂಲಕ ಸರ್ಕಾರಿ ನೌಕರರು ತಮ್ಮ ಕೆರಿಯರ್ ಆರಂಭದಲ್ಲೇ ಕೆರಿಯರ್ ಉದ್ದಕ್ಕೂ ಆಗಬಹುದಾದ ಗ್ರೋತ್‍ ನ ಲೆಕ್ಕಾಚಾರ ಮಾಡಬಹುದಾಗಿದೆ. ಸಿವಿಲ್ ನೌಕರರು, ಸೇನೆ, ಮಿಲಿಟರಿ ನರ್ಸಿಂಗ್ ಸರ್ವಿಸ್  ನಲ್ಲಿರುವವರಿಗೆ ಬೇರೆ ಬೇರೆ ಪೇ ಮ್ಯಾಟ್ರಿಕ್ಸ್ ಇದೆ. ಇದೇ ಆಧಾರದ ಮೇಲೆ ಸಾಲರಿ ಹೆಚ್ಚಳ ಮಾಡಲಾಗುತ್ತದೆ.

5 /5

 ಡಬ್ಬಲ್ ಆಗಲಿದೆ ಕನಿಷ್ಠ ವೇತನ : 7ನೇ ವೇತನ ಆಯೋಗದ ಪ್ರಕಾರ ಸರ್ಕಾರಿ ನೌಕರರ ಮಿನಿಮಮ್ ಸಾಲರಿ 7,000ದ ಬದಲಿಗೆ 18 ಸಾವಿರಕ್ಕೆ ಏರಲಿದೆ.  ಅದೇ ರೀತಿ ಕ್ಲಾಸ್ ವನ್ ಆಫಿಸರ್ ಮಿನಿಮಮ್ ವೇತನ 56,100 ರೂಪಾಯಿಗೆ ಏರಿಕೆಯಾಗಲಿದೆ.