ಐದು ರಾಶಿಯವರಿಗೆ ಈ ಮಾಸದಲ್ಲಿ ಸಿಗುವುದು ವೃತ್ತಿ ಜೀವನದಲ್ಲಿ ಯಶಸ್ಸು, ಪ್ರಾಪ್ತಿಯಾಗುವುದು ಧನ ಸಂಪತ್ತು

ಡಿಸೆಂಬರ್‌ನಲ್ಲಿ ನಡೆಯುವ ಬುಧ ಸಂಕ್ರಮಣ, ಶುಕ್ರ ಸಂಕ್ರಮಣ, ಸೂರ್ಯನ ಸಂಕ್ರಮಣವು ಐದು ರಾಶಿಯವರ ಬಾಳು ಬೆಳಗಲಿದೆ. ಈ ರಾಶಿಯವರು  ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಮಾತ್ರವಲ್ಲ ಈ ರಾಶಿಯವರಿಗೆ ಅದ್ಬುತ  ಧನಲಾಭವಾಗಲಿದೆ. ಅಲ್ಲದೆ, ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸ ಮತ್ತೆ ಚುರುಕು ಪಡೆಯಲಿದೆ. 
 

ಬೆಂಗಳೂರು :  2022 ರ ಕೊನೆಯ ತಿಂಗಳು ನಡೆಯುತ್ತಿದೆ. ಇನ್ನೇನು ಹೊಸ ವರ್ಷದ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಹೊಸ ವರ್ಷ ನಮ್ಮ ಜೀವನದಲ್ಲಿ ಹರುಶವನ್ನೇ ಹೊತ್ತು ತರಲಿ ಎನ್ನುವ ಆಶಯ ಎಲ್ಲರದ್ದಾಗಿರುತ್ತದೆ. ಇದೆ ನಿರೀಕ್ಷೆಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ. ಆದರೆ ಈ ವರ್ಷದ ಕೊನೆಯ ಮಾಸವೇ ಕೆಲವು ರಾಶಿಯವರ ಜೀವನದಲ್ಲಿ ಸಂತೋಷದ  ಹೊನಲು ಹರಿಯಲಿದೆ. ಯಾಕೆಂದರೆ ಡಿಸೆಂಬರ್ ನಲ್ಲಿ ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಬುಧ, ಶುಕ್ರ ಮತ್ತು ಸೂರ್ಯ ಡಿಸೆಂಬರ್‌ನಲ್ಲಿ ತಮ್ಮ ರಾಶಿಯನ್ನು ಬದಲಾಯಿಸಲಿದ್ದಾರೆ. ಡಿಸೆಂಬರ್ 3 ರಂದು ಬುಧ ಡಿಸೆಂಬರ್ 5 ರಂದು ಶುಕ್ರ ಮತ್ತು ಡಿಸೆಂಬರ್ 16 ರಂದು ಸೂರ್ಯ ಸಂಕ್ರಮಣ ನಡೆಯಲಿದೆ. ಇನ್ನು ಬುಧ ಮತ್ತು ಶುಕ್ರ ಗ್ರಹಗಳು ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ರಾಶಿ ಬದಲಾಯಿಸಲಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಿಥುನ ರಾಶಿ : ಸೂರ್ಯ, ಬುಧ ಮತ್ತು ಶುಕ್ರನ ಸಂಚಾರವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ, ಒತ್ತಡದ ಜೀವನದಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗುವ ಸಾಧ್ಯತೆ ಇದೆ.

2 /5

ವೃಶ್ಚಿಕ ರಾಶಿ : ಡಿಸೆಂಬರ್ ತಿಂಗಳ ಗ್ರಹಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಮೂರೂ ಗ್ರಹಗಳ ಸಂಕ್ರಮಣ ಇ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ನಿಂತು ಹೋಗಿದ್ದ ಕೆಲಸ ಕಾರ್ಯಗಳು ಮತ್ತೆ ವೇಗ ಪಡೆಯಲಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ  ಪ್ರಶಂಸೆ ಸಿಗುವುದು.  

3 /5

ಮಕರ ರಾಶಿ : ಬುಧ, ಸೂರ್ಯ ಮತ್ತು ಶುಕ್ರ ಗ್ರಹಗಳ ರಾಶಿ ಬದಲಾವಣೆಯು ಮಕರ ರಾಶಿಯವರಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಉದ್ಯೋಗದಲ್ಲಿ ಉತ್ತಮ ಪ್ರಗತಿಯಾಗುವ ಸಾಧ್ಯತೆಗಳಿವೆ. ನಿಮ್ಮ ಗುರಿಯತ್ತ ಗಮನ ಹರಿಸಿದರೆ,  ಗುರಿ ಸಾಧಿಸುವುದರಲ್ಲಿ ಯಶಸು ಸಿಗಲಿದೆ. 

4 /5

ಕುಂಭ ರಾಶಿ : ಡಿಸೆಂಬರ್‌ನಲ್ಲಿ ಗ್ರಹಗಳ ರಾಶಿ ಬದಲಾವಣೆಯು ಕುಂಭ ರಾಶಿಯವರಿಗೆ ಫಲಕಾರಿಯಾಗಿರಲಿದೆ. ಉದ್ಯೋಗಸ್ಥರಿಗೆ ಈ ತಿಂಗಳು ವರದಾನದಂತೆ ಇರಲಿದೆ.  ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಹಿರಿಯರ ಆಶೀರ್ವಾದ ಇರಲಿದೆ.   

5 /5

ಮೀನ ರಾಶಿ : ಬುಧ, ಶುಕ್ರ ಮತ್ತು ಸೂರ್ಯನ ಸಂಚಾರವು ಮೀನ ರಾಶಿಯವರಿಗೆ ಬಹಳಷ್ಟು ಲಾಭವನ್ನು  ತರಲಿದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಆದಾಯ ಹೆಚ್ಚಾಗುತ್ತದೆ.  ಕಠಿಣ ಪರಿಶ್ರಮದ ಫಲಿತಾಂಶ ಸಿಗಲಿದೆ.  ( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

You May Like

Sponsored by Taboola