12ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಧೋನಿ-ಸಾಕ್ಷಿ: ಇವರಿಬ್ಬರ ಲವ್ ಸ್ಟೋರಿ ಗೊತ್ತಾ..?

2010ರ ಜುಲೈ 3ರಂದು ನಿಶ್ಚಿತಾರ್ಥ ಮಾಡಿಕೊಂಡ ಧೋನಿ-ಸಾಕ್ಷಿ ಜುಲೈ 4ರಂದು ಡೆಹ್ರಾಡೂನ್ ಬಳಿಯ ವಿಶ್ರಾಂತಿ ರೆಸಾರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಅವರ ವಿವಾಹವಾಗಿ ಇಂದಿಗೆ ಭರ್ತಿ 12 ವರ್ಷ.  2010ರ ಇದೇ ದಿನದಂದು ‘ಕ್ಯಾಪ್ಟನ್ ಕೂಲ್’ ದೇಶದ ಕೋಟ್ಯಂತರ ಹುಡುಗಿಯರ ಹೃದಯ ಬಡಿತವನ್ನು ಹೆಚ್ಚಿಸಿದ್ದರು. ಸಾಕ್ಷಿಯೊಂದಿಗೆ 7 ಸುತ್ತು ಸುತ್ತುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಸಾಕ್ಷಿ-ಧೋನಿ ಪ್ರೀತಿಯ ಸಾಕ್ಷಿಯಾಗಿ ಮುದ್ದಾದ ಮಗಳು ಝಿವಾ ಇದ್ದಾಳೆ. ಧೋನಿ-ಸಾಕ್ಷಿ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಪ್ರೇಮಕಥೆಯ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

2010ರಲ್ಲಿ ಧೋನಿ ಸಾಕ್ಷಿಯನ್ನು ಪ್ರೀತಿಸಿ ವಿವಾಹವಾದರು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯ ‘ಎಂಎಸ್ ಧೋನಿ: ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ಮಹಿ ಮತ್ತು ಸಾಕ್ಷಿ ಅವರ ಪ್ರೇಮಕಥೆಯ ಬಗ್ಗೆ ಇರುವ ಸಿನಿಮಾ ಆಗಿದೆ. ಆದರೆ ಈ ಜೋಡಿಯ ಬಗ್ಗೆ ಸಿನಿಮಾದಲ್ಲಿ ಇರದೇ ಇರುವ ಅನೇಕ ಆಸಕ್ತಿದಾಯಕ ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ.  

2 /6

ಎಂ.ಎಸ್.ಧೋನಿಯವರಿಗೆ ಸಾಕ್ಷಿ ಲೇಡಿ ಲಕ್ ಆಗಿದ್ದಾರೆ. ಏಕೆಂದರೆ ಸಾಕ್ಷಿಯವರು ಧೋನಿ ಜೀವನದಲ್ಲಿ ಪತ್ನಿಯಾಗಿ ಪ್ರವೇಶಿಸಿದಾಗಿನಿಂದ ಅವರ ವೃತ್ತಿಜೀವನ ಉತ್ತುಂಗಕ್ಕೇರಿತು. ಮದುವೆಯಾದ ಮುಂದಿನ ವರ್ಷವೇ ಅಂದರೆ 2011ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದು ಸಂಭ್ರಮಿಸಿತು.

3 /6

ಧೋನಿ ಹಾಗೂ ಸಾಕ್ಷಿ ಅವರ ತಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದ್ದರಿಂದಲೇ ಇಬ್ಬರೂ ಚಿಕ್ಕಂದಿನಿಂದಲೂ ಪರಿಚಿತರು. ಆದರೆ, ಸ್ವಲ್ಪ ಸಮಯದ ನಂತರ ಸಾಕ್ಷಿ ಕುಟುಂಬ ಡೆಹ್ರಾಡೂನ್‌ಗೆ ಸ್ಥಳಾಂತರಗೊಂಡಿತ್ತು. ನಂತರ ಇಬ್ಬರ ನಡುವಿನ ಸಂಪರ್ಕ ಕಡಿತಗೊಂಡಿತ್ತು.

4 /6

ಇದಾದ ನಂತರ ಧೋನಿ-ಸಾಕ್ಷಿ ಸುಮಾರು 10 ವರ್ಷಗಳ ನಂತರ ಮತ್ತೆ ಭೇಟಿಯಾಗಿದ್ದರು. ಆಗ ಧೋನಿಯವರು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಮ್ಯಾಚ್ ಆಡುವಾಗ ಸಾಕ್ಷಿಯವರು ಮಹಿ ತಂಗಿದ್ದ ಹೋಟೆಲ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಳು.

5 /6

ಆ ವೇಳೆ ಯುಧ್‌ಜೀತ್ ಎಂಬುವರು ಧೋನಿ ಮ್ಯಾನೇಜರ್ ಹಾಗೂ ಸಾಕ್ಷಿ ಅವರ ಸ್ನೇಹಿತರಾಗಿದ್ದರು. ನಂತರ ಧೋನಿ ಯುಧ್‌ಜೀತ್ ಬಳಿ ಸಾಕ್ಷಿಯವರ ಮೊಬೈಲ್ ನಂಬರ್ ಕೇಳಿದ್ದರು. ಬಳಿಕ ಸಾಕ್ಷಿಗೆ ಧೋನಿ ಸಂದೇಶವನ್ನೂ ಕಳುಹಿಸಿದರು. ಮೊದಮೊದಲು ಧೋನಿ ಹೆಸರಿನಲ್ಲಿ ಯಾರೋ ತನಗೆ ತೊಂದರೆ ಕೊಡುತ್ತಿದ್ದಾರೆಂದು ಸಾಕ್ಷಿ ಅಂದುಕೊಂಡಿದ್ದರು. ಬಳಿಕ ಒಂದು ತಿಂಗಳ ನಂತರ ತನಗೆ ಸಂದೇಶ ಕಳುಹಿಸಿದ್ದು ಧೋನಿಯವರೇ ಅಂತಾ ಸಾಕ್ಷಿಗೆ ಗೊತ್ತಾಯಿತು.

6 /6

ಮಾರ್ಚ್ 2008ರಿಂದ ಧೋನಿ ಮತ್ತು ಸಾಕ್ಷಿ ಇಬ್ಬರೂ ಡೇಟಿಂಗ್ ಶುರು ಮಾಡಿದರು. ಬಳಿಕ ಧೋನಿ ಮನೆಗೆ ಸಾಕ್ಷಿ ಭೇಟಿ ನೀಡಲು ಪ್ರಾರಂಭಿಸಿದರು. 2 ವರ್ಷಗಳ ನಂತರ ಅಂದರೆ 2010ರಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಜುಲೈ 3ರಂದು ನಿಶ್ಚಿತಾರ್ಥ ಮಾಡಿಕೊಂಡು ಜುಲೈ 4ರಂದು ಡೆಹ್ರಾಡೂನ್ ಬಳಿಯ ವಿಶ್ರಾಂತಿ ರೆಸಾರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.