ವಿಶ್ವದಾದ್ಯಂತ ಬಹುತೇಕ ಜನರನ್ನು ತೊಂದರೆಗೀಡುಮಾಡಿರುವ ಕಾಯಿಲೆ ಎಂದರೆ ಅದು 'ಮಧುಮೇಹ'.
ಬೆಂಗಳೂರು: ನಿಮ್ಮ ಮನೆಯಲ್ಲೂ ಯಾರಾದರೂ ಡಯಾಬಿಟಿಸ್ ರೋಗಿಗಳಿದ್ದರೆ ಇಂದಿನಿಂದಲೇ ಅವರ ಆಹಾರ ಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ. ಇದರಿಂದ ಶುಗರ್ ನಿಯಂತ್ರಣದಲ್ಲಿಡುವುದು ತುಂಬಾ ಸುಲಭ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರನ್ನೂ ಬಾಧಿಸುತ್ತಿರುವ ದೀರ್ಘಾವಧಿಯ ಕಾಯಿಲೆ ಎಂದರೆ ಮಧುಮೇಹ ಅಥವಾ ಡಯಾಬಿಟಿಸ್. ಈ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳ ಬಳಕೆಯಿಂದ ಮಧುಮೇಹಿಗಳಲ್ಲಿ ಎಂದಿಗೂ ಕೂಡ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯಬಹುದು.
ತಾಜಾ ಹಸಿರು ಸೊಪ್ಪುಗಳಲ್ಲಿ ಫೈಬರ್ ಹೆಚ್ಚಾಗಿದ್ದು ಇದು ಆಹಾರದಲ್ಲಿನ ಸಕ್ಕರೆಯನ್ನು ಬೇಗ ರಕ್ತದಲ್ಲಿ ಹೀರಿಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ಶುಗರ್ ಹೆಚ್ಚು-ಕಡಿಮೆಯಾಗುವುದಿಲ್ಲ.
ಮಧುಮೆಹಿಗಳು ಸೀಮೆ ಬದನೆಕಾಯಿ, ಸೋರೆಕಾಯಿ, ಬೆಂಡೆಕಾಯಿ, ಎಲೆಕೋಸು, ಹೂಕೋಸು, ಗೆಡ್ಡೆಕೋಸು, ಸೌತೆಕಾಯಿ, ಟೊಮಾಟೊದಂತಹ ತರಕಾರಿಗಳನ್ನು ಯತೇಚ್ಛವಾಗಿ ಬಳಸುವುದರಿಂದ ಶುಗರ್ ಹೆಚ್ಚಾಗುವುದನ್ನು ತಡೆಯಬಹುದು.
ಮಧುಮೆಹಿಗಳು ಸೊಪ್ಪು-ತರಕಾರಿಗಳ ಜೊತೆಗೆ ದ್ವಿದಳ ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಬಳಸುವುದರಿಂದ ಶುಗರ್ ಹೆಚ್ಚಾಗುವುದಿಲ್ಲ.
ಬ್ರೊಕೊಲಿಯನ್ನು ಮಧುಮೆಹಿಗಳಿಗೆ ಅತ್ಯುತ್ತಮ ಆಹಾರ ಎಂದು ಪರಿಗಳಿಸಲಾಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಬ್ಲಡ್ ಶುಗರ್ ಕಂಟ್ರೋಲ್ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ.
ಮಧುಮೇಹಿಗಳಿಗೆ ಓಟ್ಸ್ ಅನ್ನು ಸಹ ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ನಿತ್ಯ ಓಟ್ಸ್ ಸೇವಿಸುವುದರಿಂದ ಇದು ದೇಹದಲ್ಲಿ ಕೆಟ್ಟ ಕೊಬ್ಬನ್ನು ನಿವಾರಿಸಿ, ಬ್ಲಡ್ ಶುಗರ್ ಅನ್ನು ಕೂಡ ನಿಯಂತ್ರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.