ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಡಯಾಬಿಟಿಸ್ ರೋಗಿಗಳ ಡಯಟ್ನಲ್ಲಿರಲಿ ಈ ಆಹಾರಗಳು

ಮಧುಮೇಹ ಸಮಸ್ಯೆ ಇರುವವರು ತಮ್ಮ ನಿತ್ಯ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಅನ್ನು ಸಹ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. 

ಜಗತ್ತಿನಾದ್ಯಂತ ಬಹುತೇಕ ಜನರಿಗೆ ಇರುವ ಸಮಸ್ಯೆ ಎಂದರೆ ಮಧುಮೇಹ. ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸುವುದು ಅತ್ಯಗತ್ಯ. ಮಧುಮೇಹ ಸಮಸ್ಯೆ ಇರುವವರು ತಮ್ಮ ನಿತ್ಯ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಅನ್ನು ಸಹ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಆಹಾರಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬೆಂಡೆಕಾಯಿ: ಬೆಂಡೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಫೈಬರ್-ಭರಿತ ಆಹಾರವಾಗಿರುವ  ಬೆಂಡೆಕಾಯಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮಾತ್ರವಲ್ಲ ಇದು ಇನ್ಸುಲಿನ್ ಉತ್ಪಾದನೆಯನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

2 /5

ದಾಲ್ಚಿನ್ನಿ: ನಮ್ಮಲ್ಲಿ ಹಲವರು ದಾಲ್ಚಿನ್ನಿ ಚಹಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಇದು ರುಚಿಕರವಾಗಿರುವುದು ಮಾತ್ರವಲ್ಲ ಆರೋಗ್ಯಕ್ಕೂ ಸಹ ಹಲವು ಪ್ರಯೋಜನಗಳನ್ನು ನೀಡುತ್ತದೆ. ಡಯಾಬಿಟಿಸ್ ರೋಗಿಗಳು ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಇನ್ಸುಲಿನ್ ಉತ್ಪಾದನೆಗೆ ಸಹಾಯಕವಾಗಿದೆ. ಇದು ನಮ್ಮ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್‌ನಂತೆ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ.

3 /5

ಹಾಗಲಕಾಯಿ: ಮಧುಮೇಹಿಗಳಿಗೆ ಹಾಗಲಕಾಯಿ ಅತ್ಯುತ್ತಮ ಆಹಾರವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಅಂಶಗಳನ್ನು ಒಳಗೊಂಡಿರುವ ಕಾರಣ  ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಹಾಗಲಕಾಯಿ ಸೇವಿಸುವಂತೆ ಸಲಹೆ ನೀಡಲಾಗುತ್ತದೆ. 

4 /5

ಮೆಂತ್ಯ: ತೂಕ ನಷ್ಟಕ್ಕೆ ದಿವೌಷಧ ಎಂದು ಪರಿಗಣಿಸಲಾಗಿರುವ ಮೆಂತ್ಯದಲ್ಲಿ  ಟ್ರೈಗೋನೆಲಿನ್ ಎಂಬ ಅಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು  ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ನೀರನ್ನು ಕುಡಿಯುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆಯಬಹುದು.

5 /5

ಅರಿಶಿನ: ಅರಿಶಿನವು ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಇದು ಇನ್ಸುಲಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಪ್ಯಾಂಕ್ರಿಯಾಟಿಕ್ ಬೀಟಾ ಕೋಶಗಳ ಮೇಲೆ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.