Rashmika Mandanna: ರಶ್ಮಿಕಾ ಮಂದಣ್ಣರನ್ನು ಮನೆಯಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ?

ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ನಲ್ಲಿ ಸಖತ್ ಮಿಂಚಿದ್ದಾರೆ. ಇನ್ನು ತೆಲುಗಿನ ಪುಷ್ಪಾ ಸಿನಿಮಾದಲ್ಲಿ ನಟಿಸಿದ ಬಳಿಕ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನು ರಶ್ಮಿಕಾ ಅಭಿಮಾನಿಗಳ ಪಾಲಿಗೆ ಸ್ಟಾರ್ ನಟಿಯಾಗಿದ್ರು ಇವರನ್ನು ಮನೆಯಲ್ಲಿ ರಶ್ಮಿಕಾ ಎಂದು ಕರೆಯುವುದಿಲ್ಲವಂತೆ. ಬದಲಾಗಿ ಬೇರೊಂದು ಹೆಸರಿನಿಂದ ಕರೆಯುತ್ತಾರಂತೆ. ಈ ಬಗ್ಗೆ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ.

Rashmika Mandanna: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ನಲ್ಲಿ ಸಖತ್ ಮಿಂಚಿದ್ದಾರೆ. ಇನ್ನು ತೆಲುಗಿನ ಪುಷ್ಪಾ ಸಿನಿಮಾದಲ್ಲಿ ನಟಿಸಿದ ಬಳಿಕ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನು ರಶ್ಮಿಕಾ ಅಭಿಮಾನಿಗಳ ಪಾಲಿಗೆ ಸ್ಟಾರ್ ನಟಿಯಾಗಿದ್ರು ಇವರನ್ನು ಮನೆಯಲ್ಲಿ ರಶ್ಮಿಕಾ ಎಂದು ಕರೆಯುವುದಿಲ್ಲವಂತೆ. ಬದಲಾಗಿ ಬೇರೊಂದು ಹೆಸರಿನಿಂದ ಕರೆಯುತ್ತಾರಂತೆ. ಈ ಬಗ್ಗೆ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ.

1 /6

ರಶ್ಮಿಕಾ ಮಂದಣ್ಣ ಕೊಡಗು ಮೂಲದವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಸದ್ದು ಮಾಡುತ್ತಿದ್ದಾರೆ. 2020 ರಲ್ಲಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಆಗಿ ಆಯ್ಕೆಯಾಗಿದ್ದರು.

2 /6

ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡಿದ್ದ ‘ಸೀತಾ ರಾಮಂ’ ಸಿನಿಮಾದಲ್ಲಿ ಪಾಕಿಸ್ತಾನಿ ಯುವತಿಯಾಗಿ ರಶ್ಮಿಕಾ ನಟಿಸಿದ್ದರು. ಇನ್ನು ಬಾಲಿವುಡ್ ನಲ್ಲಿ ರಶ್ಮಿಕಾ ಅವರ ಮೊದಲ ಸಿನಿಮಾ 'ಗುಡ್ ಬೈ' ಇತ್ತೀಚೆಗೆ ಬಿಡುಗಡೆಯಾಯಿತು. ಆದರೆ ಅದು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು. ನಟಿ ಮಾಲ್ಡೀವ್ಸ್‌ನ ವೆಕೇಷನ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 /6

ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಿಸಲು ತಮ್ಮ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ವಿಚಾರವೊಂದನ್ನು ಬಹಿರಂಗಪಟಿಸಿದ್ದು, ಈ ಬಗ್ಗೆ ತನಗೆ ಹೆಮ್ಮೆ ಇದೆ ಎಂದೂ ಸಹ ಹೇಳಿಕೊಂಡಿದ್ದಾರೆ.

4 /6

ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ಕುಟುಂಬಕ್ಕೆ ಅವರು ಸಮಯವನ್ನು ಮೀಸಲಿಡುತ್ತಾರೆ. ಅದೇ ರೀತಿ ಅವರು ಈ ಬಾರಿಯ ದೀಪಾವಳಿಗೆ ತಮ್ಮ ಊರಿಗೆ ತೆರಳಿದ್ದಾರೆ.

5 /6

“ಪ್ರತಿ ವರ್ಷ ದೀಪಾವಳಿಯಂದು ಮನೆಯವರು ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಚಿನ್ನ ಬೆಳ್ಳಿಯನ್ನು ಖರೀದಿಸುತ್ತಾರೆ. ದೀಪಾವಳಿಗೆ ಆಭರಣಗಳನ್ನು ಖರೀದಿಸುವುದು ನಮ್ಮ ಕುಟುಂಬಕ್ಕೆ ದೊಡ್ಡ ವಿಷಯ. ಇದು ಸೆಂಟಿಮೆಂಟ್” ಎಂದು ರಶ್ಮಿಕಾ ಹೇಳಿದ್ದಾರೆ.

6 /6

ಅಷ್ಟೇ ಅಲ್ಲದೆ, ಮನೆಯಲ್ಲಿ ತಂಗಿ, ತಂದೆ ತಾಯಿ ರಶ್ಮಿಕಾ ಅವರನ್ನು ಮಹಾಲಕ್ಷ್ಮಿ ಎಂದು ಕರೆಯುತ್ತಾರಂತೆ. ಹೀಗೆ ಕರೆದಾಗಲೆಲ್ಲ ಹೆಮ್ಮೆ ಪಡುತ್ತೇನೆ ಎನ್ನುತ್ತಾರೆ ರಶ್ಮಿಕಾ.