ಕೊಲೆಸ್ಟ್ರಾಲ್-ಸಕ್ಕರೆ ಕಾಯಿಲೆ ಮತ್ತು ಮೊಡವೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಈ ಹಸಿರು ತರಕಾರಿ

ಆಯುರ್ವೇದದ ಪ್ರಕಾರ ಕನಿಷ್ಠ 300 ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಈ ನುಗ್ಗೆಕಾಯಿಗೆ ಇದೆಯಂತೆ. ಅತಿ ಹೆಚ್ಚು ಪೋಷಕಾಂಶವನ್ನು ಈ ನುಗ್ಗೆ ಕಾಯಿ ತನ್ನೊಳಗೆ ಅವಿತು ಇಟ್ಟುಕೊಂಡಿದೆ.

ಬೆಂಗಳೂರು :  ನುಗ್ಗೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ನುಗ್ಗೆ ಕಾಯಿ ಸಾಂಬಾರ್ ಇಷ್ಟಪಡದವರು ಬಹಳ ವಿರಳ ಎಂದೇ ಹೇಳಬೇಕು. ಚಳಿಗಾಲದ ಆರಂಭವಾಗುತ್ತಿದ್ದಂತೆಯೇ ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ನುಗ್ಗೆಕಾಯಿಯಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ರೀತಿಯ ಲಾಭವಾಗುತ್ತದೆ. ಆಯುರ್ವೇದದ ಪ್ರಕಾರ ಕನಿಷ್ಠ 300 ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಈ ನುಗ್ಗೆಕಾಯಿಗೆ ಇದೆಯಂತೆ. ಅತಿ ಹೆಚ್ಚು ಪೋಷಕಾಂಶವನ್ನು ಈ ನುಗ್ಗೆ ಕಾಯಿ ತನ್ನೊಳಗೆ ಅವಿತು ಇಟ್ಟುಕೊಂಡಿದೆ. ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್ ಜೀವಸತ್ವಗಳು, ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಬಿ ಕಾಂಪ್ಲೆಕ್ಸ್  ಈ ತರಕಾರಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನುಗ್ಗೆ ಕಾಯಿ ಮತ್ತು ನುಗ್ಗೆ ಸೊಪ್ಪನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ. ಇದರಲ್ಲಿ  ಫೈಟೊಕೆಮಿಕಲ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಇದು  ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

2 /5

ನುಗ್ಗೆ ಬೀಜ ಕ್ಯಾಲ್ಸಿಯಂ ಗಣಿ ಎಂದರೆ ತಪ್ಪಾಗಲಾರದು. ಈ ಬೀಜಗಳಲ್ಲಿ ಕ್ಯಾಲ್ಶಿಯಂ ಹೇರಳವಾಗಿ ಇರುವುದರಿಂದ ಮೂಳೆಗಳು ಮತ್ತು ಹಲ್ಲುಗಳನ್ನು  ಸದೃಢವಾಗಿಡಲು ಸಹಾಯ ಮಾಡುತ್ತದೆ. ನುಗ್ಗೆ ಕಾಯಿಯಲ್ಲಿರುವ ಕ್ಯಾಲ್ಷಿಯಂ ಪ್ರಮಾಣದಿಂದಾಗಿ ಗರ್ಭಿಣಿಯರು ಇದನ್ನು ಕಡ್ಡಾಯವಾಗಿ ಸೇವಿಸಬೇಕು ಎಂದು ಹೇಳಲಾಗುತ್ತದೆ.

3 /5

ಇನ್ನು ನುಗ್ಗೆ ಕಾಯಿ ಚರ್ಮದ ಆರೋಗ್ಯಕ್ಕೂ ಬೆಸ್ಟ್. ಮೊಡವೆಗಳ ಸಮಸ್ಯೆ ಇದ್ದರೆ, ಇದರ ಫೇಸ್ ಪ್ಯಾಕ್ ಅನ್ನು ತಯಾರಿಸಿ, ಮುಖಕ್ಕೆ ಹಚ್ಚಬಹುದು.   

4 /5

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಕೂಡಾ ನುಗ್ಗೆ ಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತಿನ್ನುವುದರಿಂದ ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ. 

5 /5

ಇನ್ನು ತೂಕ ಕಳೆದುಕೊಳ್ಳಲು ಬಯಸುವವರಿಗೂ ನುಗ್ಗೆ ಕಾಯಿ ಉತ್ತಮ ಮದ್ದು. ತೂಕ ಹೆಚ್ಚಾಗಿದ್ದವರು ನುಗ್ಗೆಕಾಯಿಯನ್ನು ಸೇವಿಸುತ್ತಾ ಬಂದಲ್ಲಿ  ಶೀಘ್ರವಾಗಿ ತೂಕ ಕಳೆದುಕೊಳ್ಳಬಹುದು. ನುಗ್ಗೆ ಸೊಪ್ಪಿನಲ್ಲಿ ಇರುವ ರಂಜಕವು ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.