ಶನಿ ಮಾರ್ಗಿಯಿಂದ ಈ ರಾಶಿಗಳಿಗೆ ಹಣದ ಸುರಮಳೆ, ಹೆಜ್ಜೆಯಿಟ್ಟಲ್ಲೆಲ್ಲಾ ವಿಜಯ ಮಾಲೆ.. ಕೈಹಿಡಿದು ಮುನ್ನಡೆಸುವನು ಛಾಯಾಪುತ್ರ!

Shani Margi 2023 : ನ್ಯಾಯದ ದೇವರಾದ ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯಾದರೂ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ತನ್ನ ರಾಶಿ ಕುಂಭದಲ್ಲಿ ಶನಿ ಇದ್ದಾನೆ. ಈ ಸಮಯದಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿ ಮಾರ್ಗಿ: ಶನಿಯು ನಿಧಾನವಾಗಿ ಚಲಿಸುವ ಗ್ರಹ. ಎರಡೂವರೆ ವರ್ಷಗಳಲ್ಲಿ ಒಂದು ರಾಶಿ ಬದಲಾಯಿಸುತ್ತದೆ. ಈ ಸಮಯದಲ್ಲಿ ಶನಿಯು ತನ್ನ ರಾಶಿ ಕುಂಭದಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಶನಿಯ ಹಿಮ್ಮುಖ ಚಲನೆಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಶನಿಯು ನವೆಂಬರ್ 4 ರ ನಂತರ, ನೇರವಾಗಿ ಚಲಿಸಲು ಆರಂಭಿಸುತ್ತಾನೆ. ಕೆಲವು ಜನರಿಗೆ ಶನಿ ಮಾರ್ಗಿ ಬಲವಾದ ಲಾಭವನ್ನು ನೀಡುತ್ತದೆ.  

2 /5

ವೃಷಭ ರಾಶಿ: ವೃಷಭ ರಾಶಿಯವರಿಗೆ ಮಾರ್ಗಿ ಶನಿಯು ಬಹಳಷ್ಟು ಲಾಭವನ್ನು ನೀಡುತ್ತದೆ. ಈ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಪಡೆಯುತ್ತಾರೆ. ಆದಾಯ ಹೆಚ್ಚಲಿದೆ. ಉನ್ನತ ಸ್ಥಾನ ಸಿಗಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಅಂದುಕೊಂಡ ಕೆಲ ಸಿಗಲಿದೆ. ನೀವು ಕೆಲವು ದೊಡ್ಡ ಯಶಸ್ಸನ್ನು ಪಡೆಯಬಹುದು. ಜೀವನದಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಮತ್ತು ವಿಶ್ರಾಂತಿ ಹೆಚ್ಚಾಗುತ್ತದೆ. ಒಂಟಿ ಜನರು ಜೀವನ ಸಂಗಾತಿಯನ್ನು ಪಡೆಯಬಹುದು.  

3 /5

ಧನು ರಾಶಿ : ಶನಿಯ ನೇರ ಸಂಚಾರವು ಧನು ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಬಡ್ತಿ ಸಿಗಲಿದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ನೀವು ಸಂತೋಷದಿಂದ ಜೀವನ ಸಾಗಿಸುವಿರಿ.   

4 /5

ತುಲಾ ರಾಶಿ : ತುಲಾ ರಾಶಿಯವರಿಗೆ ಶನಿಯ ಮಾರ್ಗ ಬದಲಾವಣೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವು ದೊಡ್ಡ ಸಾಧನೆಗಳನ್ನು ಸಾಧಿಸಲಾಗುವುದು. ಜೀವನವು ಸಂತೋಷದಿಂದ ತುಂಬಿರುತ್ತದೆ. ನೀವು ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಉಲ್ಲಾಸವನ್ನು ಅನುಭವಿಸುವಿರಿ.  

5 /5

ಮಿಥುನ ರಾಶಿ: ಶನಿಯ ನೇರ ಸಂಚಾರವು ಮಿಥುನ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಭಾಗ್ಯೋದಯವಾಗುವ ಕಾಲ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಹಣದ ಸುರಮಳೆ ಆಗಲಿದೆ. ಹಿರಿಯರ ಆಶೀರ್ವಾದದಿಂದ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ