ಶನಿಯು ಮಕರ ರಾಶಿಯ ಅಧಿಪತಿ. ಜ್ಯೋತಿಷ್ಯದ ಪ್ರಕಾರ ಸೂರ್ಯ ಶನಿದೇವನ ತಂದೆ. ಈ ರೀತಿಯಾಗಿ ಸೂರ್ಯನು ವರ್ಷಕ್ಕೊಮ್ಮೆ ತನ್ನ ಮಗನಾದ ಶನಿಯ ರಾಶಿಯನ್ನು ಪ್ರವೇಶಿಸುತ್ತಾನೆ.
ಬೆಂಗಳೂರು : ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿ ಇನ್ನೊಂದು ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜನವರಿ 14, 2023 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಂದರ್ಭವನ್ನು ದೇಶದಾದ್ಯಂತ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಶನಿಯು ಮಕರ ರಾಶಿಯ ಅಧಿಪತಿ. ಜ್ಯೋತಿಷ್ಯದ ಪ್ರಕಾರ ಸೂರ್ಯ ಶನಿದೇವನ ತಂದೆ. ಈ ರೀತಿಯಾಗಿ ಸೂರ್ಯನು ವರ್ಷಕ್ಕೊಮ್ಮೆ ತನ್ನ ಮಗನಾದ ಶನಿಯ ರಾಶಿಯನ್ನು ಪ್ರವೇಶಿಸುತ್ತಾನೆ. ಆದರೆ ಈ ಬಾರಿ ಮಕರ ರಾಶಿಯಲ್ಲಿ ಈಗಾಗಲೇ ಶನಿ ನೆಲೆಸಿದ್ದಾನೆ. ಹಾಗಾಗಿ ಈ ಬಾರಿಯ ಸಂಕ್ರಾಂತಿ ವಿಶೇಷವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೃಷಭ ರಾಶಿ : ವೃಷಭ ರಾಶಿಯವರಿಗೆ ಮಕರ ಸಂಕ್ರಾಂತಿಯ ದಿನದಿಂದ ಹೆಚ್ಚಿನ ಲಾಭವಾಗಲಿದೆ. ಈ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. ಸೂರ್ಯನ ಆಶೀರ್ವಾದದಿಂದ ಯಾವುದೇ ಕೆಲಸ ಮಾಡಲು ಹೋದರೂ ಅಲ್ಲಿ ಜಯ ಸಿಗುತ್ತದೆ. ಆದಾಯದಲ್ಲಿ ವಿಪರೀತ ಹೆಚ್ಚಳವಾಗಲಿದೆ. ನಿಮ್ಮ ಪ್ರಭಾವ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಮಿಥುನ ರಾಶಿ : ಸೂರ್ಯನ ರಾಶಿ ಬದಲಾವಣೆಯು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮದೇ ಆಟ. ನೀವು ಏನು ಮಾಡಿದರೂ ಯಶಸ್ಸು ಖಂಡಿತಾ. ಪ್ರತಿ ಕ್ಷಣವೂ ನಿಮ್ಮ ಪರವಾಗಿರುತ್ತದೆ. ಉದ್ಯಮಿಗಳು ಕೂಡಾ ಉತ್ತಮ ಯಶಸ್ಸು ಪಡೆಯಲಿದ್ದಾರೆ. ಒತ್ತಡದಿಂದ ಮುಕ್ತಿ ಸಿಗಲಿದೆ.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರ ಮೇಲೆ ಕೂಡಾ ಸೂರ್ಯನ ಆಶೀರ್ವಾದ ಚೆನ್ನಾಗಿಯೇ ಇರುತ್ತದೆ. ಸೂರ್ಯ ಸಂಚಾರದ ಪರಿಣಾಮ ಎಲ್ಲವೂ ಶುಭವೇ. ಮಾಡುವ ಎಲ್ಲಾ ಕೆಲಸದಲ್ಲಿಯೂ ಪ್ರೇಮ ಸಂಗಾತಿ, ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ನೀಡುತ್ತಾರೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ಪಾಲುದಾರಿಕೆ ಕಾರ್ಯಗಳಲ್ಲಿ ಸಹಾಯ ದೊರೆಯಲಿದೆ.
ಮಕರ ರಾಶಿ : ಸೂರ್ಯ ಮಕರ ರಾಶಿಯನ್ನೇ ಪ್ರವೇಶಿಸುವುದರಿಂದ ಈ ರಾಶಿಯವರಿಗೆ ಸಿಗುವ ಲಾಭಗಳು ಕೂಡಾ ಹೆಚ್ಚಾಗಿರುತ್ತದೆ. ಈ ಜನರ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಕಾಲ ನಿಮ್ಮ ಜೀವನದಲ್ಲಿ ಬರಲಿದೆ. ಹಳೆಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)