Anant Chaturdarshi Astro Tips: ಗಣೇಶ ವಿಸರ್ಜನೆಗೂ ಮುನ್ನ ಈ ವಿಶಿಷ್ಠ ಕೆಲಸ ಮಾಡಿದ್ರೆ, ಸುಖ-ಸಮೃದ್ಧಿ ಮನೆ ಸೇರುತ್ತವೆ

Ganesh Visarjan Astro Tips: ಅನಂತ ಚತುರ್ದರ್ಶಿಯ ದಿನ ಗಣೇಶ ವಿಸರ್ಜನೆಯ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ಜರುಗುತ್ತದೆ. ಸಾಮಾನ್ಯವಾಗಿ ಗಣೇಶ ಚತುರ್ಥಿ ಹಬ್ಬದ ಈ 10 ದಿನಗಳು ಶ್ರೀಗಣೇಶನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. 

Ganesh Visarjan Astro Tips: ಅನಂತ ಚತುರ್ದರ್ಶಿಯ ದಿನ ಗಣೇಶ ವಿಸರ್ಜನೆಯ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ಜರುಗುತ್ತದೆ. ಸಾಮಾನ್ಯವಾಗಿ ಗಣೇಶ ಚತುರ್ಥಿ ಹಬ್ಬದ ಈ 10 ದಿನಗಳು ಶ್ರೀಗಣೇಶನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಹಬ್ಬದ ಹನ್ನೊಂದನೆಯ ದಿನ ಅಂದರೆ ಅನಂತ ಚತುರ್ದರ್ಶಿಯ ದಿನ ಗಣೇಶ ವಿಸರ್ಜನೆಯನ್ನು ಸಡಗರ ಸಂಭ್ರಮದಿಂದ ನೆರವೇರಿಸಲಾಗುತ್ತದೆ. ಆದರೆ, ಗಣೇಶ ವಿಸರ್ಜನೆಗೂ ಮುಂಚಿತವಾಗಿ ನಾವು ನಾಳೆಯ ದಿನ ಕೆಲ ವಿಶೇಷ ಉಪಾಯಗಳನ್ನು ಅನುಸರಿಸಿದರೆ, ಜೀವನದ ಹಲವಾರು ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಅಷ್ಟೇ ಅಲ್ಲ ಮನೆಗೆ ಅಪಾರ ಸುಖ-ಸಮೃದ್ಧಿ ಕೂಡ ಹರಿದುಬರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಸುಖ-ಸಮೃದ್ಧಿ, ಧನ-ಸಂಪತ್ತು, ಉತ್ತಮ ಆರೋಗ್ಯ ಹಾಗೂ ಗ್ರಹದೋಷಗಳ ನಿವಾರಣೆಗೆ ಕೆಲ ಪರಿಹಾರಗಳನ್ನೂ ನೀಡಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಗಣೇಶ ಚತುರ್ಥಿಯ ಹಬ್ಬದ ದಿನ ಈ ಉಪಾಯಗಳನ್ನು ಅನುಸರಿಸುವುದರಿಂದ ಸಾಮಾನ್ಯಕ್ಕಿಂತ ಹಲವು ಪಟ್ಟು ಹೆಚ್ಚು ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. 

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-September 2022: ಈ 7 ರಾಶಿಗಳ ಪಾಲಿಗೆ ತುಂಬಾ ಲಕ್ಕಿ ಸಾಬೀತಾಗಲಿದೆ ಈ ತಿಂಗಳು, ಸೆ.17ಕ್ಕೆ ಮಹಾ ಬದಲಾವಣೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಧನಪ್ರಾಪ್ತಿಗೆ ಈ ಉಪಾಯ ಅನುಸರಿಸಿ - ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಗಣೇಶನಿಗೆ ಬೆಲ್ಲ ಮತ್ತು ಹಸುವಿನ ತುಪ್ಪದಲ್ಲಿ ತಯಾರಿಸಲಾಗಿರುವ ನೈವೇದ್ಯವನ್ನು ಅರ್ಪಿಸಿ. ಇದರಿಂದ ಬಡತನ ನಿವಾರಣೆಯಾಗಿ ಆದಾಯ ಹೆಚ್ಚುತ್ತದೆ.  

2 /5

2. ಮನಮೆಚ್ಚಿದ ಸಂಗಾತಿ ಪಡೆಯಲು ಈ ಉಪಾಯ ಅನುಸರಿಸಿ - ವಿವಾಹ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ, ಶ್ರೀಗಣೇಶನಿಗೆ ಅರಿಶಿಣದಲ್ಲಿ ಸಿಂಧೂರವನ್ನು ಬೆರೆಸಿ ಅರ್ಪಿಸಿ, ಬೇಗ ವಿವಾಹ ಮಾಡಿಸುವಂತೆ ಪಾರ್ಥನೆ ಸಲ್ಲಿಸಿ.

3 /5

3. ವಾಣಿ ದೋಷ ನಿವಾರಣೆಯ ಉಪಾಯ - ಜಾತಕದಲ್ಲಿ ಬುಧ ಬಲಹೀನನಾಗಿದ್ದರೆ ವಾಣಿಗೆ ಸಂಬಂಧಿ ಸಮಸ್ಯೆಗಳಿರುತ್ತವೆ. ಉದಾಹರಣೆಗೆ ತೊದಲುವಿಕೆ, ಮಾತನಾಡುವಾಗ ಎಡಚುವಿಕೆ, ಅಸ್ಪಷ್ಟ ಉಚ್ಚಾರಣೆ, ಕಡಿಮೆ ಬುದ್ಧಿಮತ್ತೆ, ತಾರ್ಕಿಕ ಶಕ್ತಿಯ ಕೊರತೆ, ಇತ್ಯಾದಿ ಸಮಸ್ಯೆಗಳಿರುತ್ತವೆ. ಇದನ್ನು ಹೋಗಲಾಡಿಸಲು ಅನಂತ ಚತುರ್ದರ್ಶಿಯಂದು ಗಣೇಶ ವಿಸರ್ಜನೆಗೂ ಮುನ್ನ ಗಣಪತಿ ಬಪ್ಪಾಗೆ ಬಾಳೆಹಣ್ಣಿನ ಮಾಲೆಯನ್ನು ತಯಾರಿಸಿ ಅರ್ಪಿಸಿ. ಇದರಿಂದ ಜಾತಕದಲ್ಲಿ ಬುಧ ಬಲ ಹೆಚ್ಚಾಗುತ್ತದೆ ಮತ್ತು ಆತ ಶುಭ ಫಲಿತಾಂಶಗಳನ್ನು ನೀಡುತ್ತಾನೆ.

4 /5

4. ಸುಖ-ಸಮೃದ್ಧಿ ಪ್ರಾಪ್ತಿಗಾಗಿ ಈ ಉಪಾಯ ಅನುಸರಿಸಿ - ಗಣೇಶ ವಿಸರ್ಜನೆಯ ದಿನ ಶ್ರೀಗಣೇಶನಿಗೆ ಸಂಪೂರ್ಣ ಭಕ್ತಿ ಭಾವದಿಂದ ಕರಿಕೆ ಮತ್ತು ಮೋದಕವನ್ನು ಅರ್ಪಿಸಿ. ನಂತರ ಸಹ ಕುಟುಂಬ ಪರಿವಾರದೊಂದಿಗೆ ಮೋದಕ ಪ್ರಸಾದವನ್ನು ಸೇವಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ.

5 /5

5. ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಂಪಾದಿಸಲು ಈ ಉಪಾಯ ಅನುಸರಿಸಿ - ಕೆಲಸ ಕಾರ್ಯಗಳಲ್ಲಿ ಎದುರಾಗುತ್ತಿರುವ ಅಡೆತಡೆಗಳ ನಿವಾರಿಸಲು ವಿಘ್ನವಿನಾಶಕ ಗಣೇಶನಿಗೆ 4 ತೆಂಗಿನ ಕಾಯಿಗಳ ಮಾಲೆಯನ್ನು ತಯಾರಿಸಿ ಅರ್ಪಿಸಿ. ಇದರಿಂದ ವರ್ಷಾನುವರ್ಷಗಳಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ಆರಂಭಿಸುತ್ತವೆ. ಇದರ ಜೊತೆಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗಲು ಆರಂಭಿಸುತ್ತದೆ.