AC ಮೇಲೆ ಶೇಕಡಾ 48 ರಷ್ಟು ರಿಯಾಯಿತಿ, ಯಾವ ಎಸಿ ಮೇಲೆ ಎಷ್ಟು ರಿಯಾಯಿತಿ ಲಭ್ಯ, ಇಲ್ಲಿದೆ ಮಾಹಿತಿ

                               

ಒಂದೆಡೆ ಕರೋನಾ ಹಾವಳಿ ಹೆಚ್ಚಾಗಿದ್ದರೆ, ಇನ್ನೊಂದೆಡೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಾರ್ಚ್ ತಿಂಗಳಲ್ಲೇ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಉತ್ತರ ಭಾರತದಲ್ಲಿ ತಾಪಮಾನವು 40 ಡಿಗ್ರಿಗಿಂತ ಮೇಲೇರಿದೆ. ಮುಂಬರುವ ದಿನಗಳಲ್ಲಿ ತಾಪಮಾನ ಇನ್ನೂ ಅಧಿಕವಾಗುವ ಬಗ್ಗೆ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಈ ಹಿನ್ನಲೆಯಲ್ಲಿ ನೀವೂ ಕೂಡ ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಕಡಿಮೆ ದರದಲ್ಲಿ ಎಸಿ ಖರೀದಿಸಲು ಸುವರ್ಣಾವಕಾಶವಿದೆ. ಇ-ಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ Summer Appliances Fest ಸೇಲ್ ಅನ್ನು ಆರಂಭಿಸಿದೆ. ಇದರಲ್ಲಿ ಯಾವ ಎಸಿ ಮೇಲೆ ಎಷ್ಟು ರಿಯಾಯಿತಿ ಲಭ್ಯವಿದೆ ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಎಲ್‌ಜಿ 1.5 ಟನ್ 4 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಅಮೆಜಾನ್‌ನ ಸೈಟ್‌ನಲ್ಲಿ ನೇರವಾಗಿ 22,500 ರೂ.ಗಳ ರಿಯಾಯಿತಿ ಲಭ್ಯವಿದೆ. ನೀವು ಈ ಎಸಿಯನ್ನು ಕೇವಲ 37,490 ರೂ.ಗಳಿಗೆ ಖರೀದಿಸಬಹುದು. ಇದರ ಮಾರುಕಟ್ಟೆ ಬೆಲೆ 59,990 ರೂ.ಗಳಾಗಿದೆ.

2 /5

ಎಲ್‌ಜಿಯ .5 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿಯಲ್ಲಿ ನೀವು ಶೇಕಡಾ 38 ರಷ್ಟು ರಿಯಾಯಿತಿ ಪಡೆಯಬಹುದು. 25,500 ರೂ. ರಿಯಾಯಿತಿಯ ನಂತರ ನೀವು ಈ ಎಸಿಯನ್ನು 41,490 ರೂ.ಗಳಿಗೆ ಖರೀದಿಸಬಹುದು. ಈ ಎಸಿಯ ಮಾರುಕಟ್ಟೆ ಬೆಲೆ 66,900 ರೂ.

3 /5

ವರ್ಲ್‌ಪೂಲ್‌ನ 1.5 ಟನ್ 3 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿಯಲ್ಲಿ ನೀವು ಶೇಕಡಾ 47 ರಷ್ಟು ರಿಯಾಯಿತಿ ಪಡೆಯಬಹುದು. ಈ ಎಸಿಯನ್ನು 29,990 ರೂ.ಗಳಿಗೆ ಖರೀದಿಸಬಹುದು. ಅಂದಹಾಗೆ, ರಿಲೇಟ್ ಔಟ್‌ಲೆಟ್‌ನಲ್ಲಿ ಈ ಎಸಿಯ ಬೆಲೆ 56,900 ರೂ. ಇದನ್ನೂ ಓದಿ - TV ಖರೀದಿಸುವವರಿಗೊಂದು ಗುಡ್ ನ್ಯೂಸ್ : TCL TV ಮೇಲೆ 57 ಶೇ ರಿಯಾಯಿತಿ

4 /5

ಅಮೆಜಾನ್‌ನ (Amazon) ಈ ವಿಶೇಷ ಮಾರಾಟದಲ್ಲಿ, ನೀವು ವರ್ಲ್‌ಪೂಲ್ 1.5 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿಯನ್ನು ಕೇವಲ 34,490 ರೂ.ಗಳಿಗೆ ಖರೀದಿಸಬಹುದು. ಈ ಎಸಿಯ ಮಾರುಕಟ್ಟೆ ಬೆಲೆ 66,350 ರೂ. ಇದನ್ನೂ ಓದಿ - ಹಣ ಇಲ್ಲವೇ? ಚಿಂತೆಬಿಡಿ Amazon, Paytm, Mobikwik ನೀಡುತ್ತಿವೆ ಉತ್ತಮ ಕೊಡುಗೆ

5 /5

ಈ ವಿಶೇಷ ಸೇಲ್ ನಲ್ಲಿ ನೀವು ಎಲ್‌ಜಿಯ 1 ಟನ್ 5 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿಯನ್ನು ಕೇವಲ 34,999 ರೂ.ಗಳಿಗೆ  ಮನೆಗೆ ತರಬಹುದು. ಈ ಎಸಿಯ ಮಾರುಕಟ್ಟೆ ಬೆಲೆ 58,950 ರೂ.