ಇನ್ನು ಎರಡೇ ದಿನಗಳಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಕಾಣುವರು ಸಾಲು ಸಾಲು ಗೆಲುವು

Guru Gochara 2023: ಸುಮಾರು 12 ವರ್ಷಗಳ ನಂತರ, ಇನ್ನೆರಡು ದಿನಗಳಲ್ಲಿ ಅಂದರೆ  ಏಪ್ರಿಲ್ 22 ರಂದು, ಗುರುವು ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಗುರುವಿನ್ ಸ್ಥಾನ ಪಲ್ಲಟದಿಂದಾಗಿ  ಕೆಲವು ರಾಶಿಯವರು ಅಧಿಕ ಲಾಭವನ್ನು ಪಡೆಯಲಿದ್ದಾರೆ. 
 

ಬೆಂಗಳೂರು : ಏಪ್ರಿಲ್ 22 ರಂದು ದೇವಗುರು ಗುರುವು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಸರಿ ಸುಮಾರು ಒಂದು ವರ್ಷ ಅಂದರೆ  ಮೇ 1, 2024 ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. ಜ್ಯೋತಿಷ್ಯದಲ್ಲಿ ಗುರುವಿನ ಈ ರಾಶಿ ಬದಲಾವಣೆಯನ್ನು ಅತ್ಯಂತ ಮಂಗಳಕರ ಎಂದು ಕರೆಯಲಾಗುತ್ತದೆ. ಗುರುವಿನ ಈ ಸಂಕ್ರಮಣ ಯಾವ ರಾಶಿಯವರಿಗೆ ಶುಭ ಫಲ ನೀಡಲಿದೆ ನೋಡೋಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

ಮೇಷ: ಮೇಷ ರಾಶಿಯವರ ಭವಿಷ್ಯ ಬೆಳಗಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು. ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಗತಿ ಕಾಣಲಿದ್ದಾರೆ. ಯಾವ ಕೆಲಸ ಮಾಡುವುದಾದರೂ ಮನೆಯವರ ಸಂಪೂರ್ಣ ಬೆಂಬಲ ಇರಲಿದೆ. ಕಚೇರಿಯಲ್ಲಿ ಅಧಿಕಾರಿಗಳು ಕೂಡಾ ನಿಮ್ಮ ಕಾರ್ಯ ವೈಖರಿಯಿಂದ  ಹೆಮ್ಮೆ ಪಡುತ್ತಾರೆ.   

2 /8

ವೃಷಭ:  ಮನೆ ಮತ್ತು ವಾಹನ ಖರೀದಿಸಲು ಬಯಸುವವರು ಈ ಸಂದರ್ಭದಲ್ಲಿ ಯೋಚನೆ ಮಾಡಬಹುದು. ಗುರು ಬಲದಿಂದ ನೀವು ಮಾಡಬೇಕೆಂದಿರುವ ಕೆಲಸ ಕೈಗೂಡುವುದು.  ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವ ವಿದ್ಯಾರ್ಥಿಗಳ ಆಸೆ ನೆರವೇರುವುದು. 

3 /8

ಮಿಥುನ: ವೃತ್ತಿಯಲ್ಲಿ ಪ್ರಗತಿಯಾಗುವುದು. ವ್ಯವಹಾರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಉದ್ಯೋಗವನ್ನು ಬದಲಾಯಿಸಲು ಬಯಸುವವರು ಕೂಡಾ ಈ ಸಂದರ್ಭದಲ್ಲಿ ಪ್ರಯತ್ನಿಸಿ. ನೀವು ಅಂದುಕೊಂಡ ಉದ್ಯೋಗ ನಿಮ್ಮದಾಗುತ್ತದೆ. 

4 /8

ಕರ್ಕಾಟಕ: ಜಮೀನಿನ ಮೇಲೆ ಹೂಡಿಕೆ ಮಾಡಬಹುದು. ವಾಹನವನ್ನು ಬದಲಾಯಿಸಲು ಇದೇ  ಸರಿಯಾದ ಸಮಯ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಶ್ಲಾಘನೆ ಸಿಗುವುದು.

5 /8

ಸಿಂಹ:  ತಂದೆ ಮತ್ತು ಮಗ ಇಬ್ಬರೂ ಒಂದೇ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರೆ, ಶೀಘ್ರದಲ್ಲೇ ಪ್ರಗತಿ ಹೊಂದಬಹುದು. ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿದರೆ ಅದರ ಫಲ ಖಂಡಿತಾ ಸಿಗುತ್ತದೆ. 

6 /8

ಕನ್ಯಾ: ಶಿಕ್ಷಣ, ಧರ್ಮ ಅಥವಾ  ಕಮ್ಯುನಿಕೇಶನ್ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಭಾರೀ ಲಾಭವಾಗುವುದು.  ಈ ಬಾರಿ ಈ ರಾಶಿಯವರ ಆದಾಯವೂ ಹೆಚ್ಚಲಿದೆ. ಆದಾಯದ ರೂಪದಲ್ಲಿ ಹೆಚ್ಚಿನ ಹಣವನ್ನು ಪಡೆಯುವಿರಿ.      

7 /8

ವೃಶ್ಚಿಕ: ವ್ಯಾಪಾರ ಆರಂಭಿಸಲು ಇದು ಸೂಕ್ತ ಸಮಯ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ ಸ್ಥಿತಿ ಉತ್ತಮವಾಗಲಿದೆ. ರಫ್ತು ಆಮದು ಕೆಲಸ ಮಾಡುವವರಿಗೆ ಲಾಭವಾಗುತ್ತದೆ.  

8 /8

ಧನು ರಾಶಿ: ಉದ್ಯೋಗದಲ್ಲಿರುವವರು, ಬಡ್ತಿ ಮತ್ತು ಇನ್ಕ್ರಿಮೆಂಟ್ ಪಡೆಯುವಿರಿ. ಪಾಲುದಾರಿಕೆಯಲ್ಲಿ ಹೊಸ ವ್ಯಾಪಾರ  ಆರಂಭಿಸಲು ಸರಿಯಾದ ಸಮಯ. ದೊಡ್ಡ ಆರ್ಡರ್ ಗಳನ್ನು ಪಡೆಯಬಹುದು. ನಿಮ್ಮ ಅದೃಷ್ಟವು ಬೆಳಗುವುದು.  (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)