ಹನ್ನೆರಡು ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಗುರುವಿನ ನೇರನಡೆ, ಈ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯುವಂತೆ ಮಾಡಲಿದೆ!

Guru Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ದೇವಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಇದರಿಂದ ಹೊಸ ವರ್ಷದ ಆರಂಭದಲ್ಲಿಯೇ ಕೆಲ ರಾಶಿಗಳ ಜನರ ಅದೃಷ್ಟ ಸೂರ್ಯನಂತೆ ಹೊಳೆಯಲಿದ್ದು, ಅವರಿಗೆ ಗುರು ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ. (Spirituala News In Kannada)
 

ಬೆಂಗಳೂರು: ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಡಿಸೆಂಬರ್ 28, 2023 ರಂದು ದೇವಗುರು ಬೃಹಸ್ಪತಿ ಮೇಷರಾಶಿಯಲ್ಲಿ ನೇರ ನಡೆಯನ್ನು ಅನುಸರಿಸಲಿದ್ದಾನೆ. ಸಾಮಾನ್ಯವಾಗಿ ಗುರುವನ್ನು ಸಮೃದ್ಧಿ, ಐಶ್ವರ್ಯ, ಜ್ಞಾನ, ಸ್ಥಾನಮಾನ, ಪ್ರತಿಷ್ಠೆಯ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಗುರುವಿನ ನಡೆ ಪರಿವರ್ತನೆಗೆ ವಿಶೇಷ ಮಹತ್ವವನ್ನು ಕೊಡಲಾಗಿದೆ. ಗುರು ತನ್ನ ನೇರ ನಡೆಯನ್ನು ಅನುಸರಿಸುವುದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನುಂಟು ಮಾಡಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಭಾಗ್ಯ ಪರಿವರ್ತನೆಯಾಗಲಿದ್ದು, ಅವರಿಗೆ ಸ್ಥಾನಮಾನ ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ಶತಮಾನದ ಬಳಿಕ ಗುರು-ಶುಕ್ರರಿಂದ ಗಜಲಕ್ಷ್ಮಿ ರಾಜಯೋಗ ರಚನೆ. ಹೊಸ ವರ್ಷದಲ್ಲಿ ಈ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Guru Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ದೇವಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಇದರಿಂದ ಹೊಸ ವರ್ಷದ ಆರಂಭದಲ್ಲಿಯೇ ಕೆಲ ರಾಶಿಗಳ ಜನರ ಅದೃಷ್ಟ ಸೂರ್ಯನಂತೆ ಹೊಳೆಯಲಿದ್ದು, ಅವರಿಗೆ ಗುರು ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ. (Spirituala News In Kannada)

2 /5

ಮೇಷ ರಾಶಿ: ಗುರು ನಿಮ್ಮ ರಾಶಿಯಲ್ಲಿಯೇ ನೇರ ನಡೆಯನ್ನು ಅನುಸರಿಸುತ್ತಿರುವ ಕಾರಣ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಅಪಾರ ಹೆಚ್ಚಾಗಲಿದೆ. ನಿಮ್ಮಲ್ಲಿ ಹೊಸ ಶಕ್ತಿಯ ಸಂಚಾರ ಇರಲಿದೆ. ಬಾಳ ಸಂಗಾತಿಯ ಜೊತೆಗೆ ನಿಮ್ಮ ಸಂಬಂಧಗಳು ಉತ್ತಮವಾಗಿರಲಿವೆ. ಇಬ್ಬರೂ ಜೊತೆಗೂಡಿ ಸಂಪತ್ತು ವೃದ್ಧಿಯ ಯೋಜನೆಗಳನ್ನು ರೂಪಿಸುವಿರಿ. ಈ ಅವಧಿಯಲ್ಲಿ ನಿಮ್ಮ ಜೀವನ ಶೈಲಿಯಲ್ಲಿಯೂ ಕೂಡ ಉತ್ತಮ ಸುಧಾರಣೆಯನ್ನು ನೀವು ಗಮನಿಸುವಿರಿ. ಪಾರ್ಟ್ನರ್ ಶಿಪ್ ನಲ್ಲಿ ನೀವು ವ್ಯಾಪಾರ ಮಾಡಲು ಬಯಸುತ್ತಿದ್ದರೆ, ಸಮಯ ಸಾಕಷ್ಟು ಅನುಕೂಲಕರವಾಗಿದೆ. ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. 

3 /5

ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಗುರು ತನ್ನ ನೆರನಡೆಯನ್ನು ಅನುಸರಿಸಲಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ನಿರೀಕ್ಷಿಸಬಹುದು. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಇನ್ನೊಂದೆಡೆ ನಿಮ್ಮ ಪರಾಕ್ರಮದಲ್ಲಿ ವೃದ್ಧಿಯನ್ನು ನೀವು ಕಾಣುವಿರಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಉತ್ತಮ ಪ್ರದರ್ಶನ ತೋರುವಿರಿ. ಗುರುವಿನ ದೃಷ್ಟಿ ನಿಮ್ಮ ಜಾತಕದ ಪಂಚಮ ಭಾವದ ಮೇಲೆ ಇರುವ ಕಾರಣ, ಮಕ್ಕಳ ಉನ್ನತಿಯಾಗುವ ಸಾಧ್ಯತೆ ಇದೆ. ಹೂಡಿಕೆಯಿಂದ ಲಾಭ ಸಿಗುವ ಪ್ರಬಲ ಯೋಗವಿದೆ. 

4 /5

ಸಿಂಹ ರಾಶಿ: ಗುರು ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ನೇರನಡೆ ಅನುಸರಿಸಲಿದ್ದಾನೆ. ಇದರಿಂದ ನಿಮಗೆ ಅದೃಷ್ಟದ ಅಪಾರ ಬೆಂಬಲ ಪ್ರಾಪ್ತಿಯಾಗಲಿದೆ. ಅಂದುಕೊಂಡ ನಿಮ್ಮ ಎಲ್ಲಾ ಯೋಜನೆಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಹೊಸ ಜನರ ಜೊತೆಗೆ ನಿಮ್ಮ ಪರಿಚಯ ಬೆಳೆಯಲಿದ್ದು, ನಿಮ್ಮ ಸಾಮಾಜಿಕ ವ್ಯಾಪ್ತಿ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ನಿಮಗೆ ಉನ್ನತಿಯ ಅವಕಾಶಗಳು ಪ್ರಾಪ್ತಿಯಾಗಲಿದ್ದು, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಕಾಲಕಾಲಕ್ಕೆ ದೇಶ-ವಿದೇಶಗಳ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)