Health Tips: ‘ಅಲೋವೆರಾ ಜ್ಯೂಸ್ʼ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Benefits of aloe vera juice: ಉತ್ತಮ ಆರೋಗ್ಯ ಕಾಪಾಡುವಲ್ಲಿ ಅಲೋವೆರಾ ಮಹತ್ತರ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟ್‍ಗಳು ಹೇರಳವಾಗಿದೆ. ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ​

ನವದೆಹಲಿ: ನಿಯಮಿತವಾಗಿ ಅಲೋವೆರಾ ಜ್ಯೂಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಇದರ ಔಷಧೀಯ ಗುಣಗಳಿಂದಾಗಿ ನೀವು ಹಲವಾರು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಉತ್ತಮ ಆರೋಗ್ಯ ಕಾಪಾಡುವಲ್ಲಿ ಅಲೋವೆರಾ ಮಹತ್ತರ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟ್‍ಗಳು ಹೇರಳವಾಗಿದೆ. ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹಕ್ಕೆ ಅಗತ್ಯ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ಅಲೋವೆರಾ ಜ್ಯೂಸ್ ಸೇವಿಸುವುದರಿಂದ ನೀವು ಹಲವಾರು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಅಲೋವೆರಾದಲ್ಲಿ ವಿಟಮಿನ್ ‘B’ ಹೇರಳವಾಗಿದ್ದು, ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ನೀವು ಸುಲಭವಾಗಿ ದೇಹದ ತೂಕ ಕಳೆದುಕೊಳ್ಳಬಹುದು. ಅಲೋವೆರಾ ಸೇವನೆಯಿಂದ ಹೊಟ್ಟೆ ಹಸಿವು ತಗ್ಗುತ್ತದೆ. ಇದು ಸಹ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.  

2 /5

ಅಲೋವೆರಾ ಅಥವಾ ಲೋಳೆಸರ ಜ್ಯೂಸ್ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿಯಾಗಿದೆ. ಇದರಲ್ಲಿನ ಕಿಣ್ವಗಳು ಹಾಗೂ ನಾರುಗಳು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುವ ಜೊತೆಗೆ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಮಲಬದ್ಧತೆಯಂತಹ ಗಂಭೀರ ಸಮಸ್ಯೆಗೆ ಅಲೋವೆರಾ ಜ್ಯೂಸ್ ಪರಿಣಾಮಕಾರಿ ಔಷಧವಾಗಿದೆ.

3 /5

ಕಾಂತಿಯುತ ಚರ್ಮ ಹಾಗೂ ಸುಂದರ ಕೂದಲಿಗೆ ಅಲೋವೆರಾ ಉತ್ತಮ ಕೊಡುಗೆ ನೀಡುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಸೇವನೆಯಿಂದ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ. ಅದರಂತೆ ಕೂದಲಿನ ಉತ್ತಮ ಬೆಳವಣಿಗೆ ಸುಧಾರಿಸುವಲ್ಲೂ ಸಹ ಇದು ಸಹಕಾರಿ. ಕೂದಲು ಉದುರುವ ಸಮಸ್ಯೆಗೆ ಇದು ಮುಕ್ತಿ ನೀಡುತ್ತದೆ.

4 /5

ಜಂಕ್‍ಫುಡ್ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ದೇಹದಲ್ಲಿ ವಿಷಕಾರಿ ಅಂಶ ಸೇರಿಕೊಂಡಿರುತ್ತದೆ. ಅಲೋವೆರಾ ಜ್ಯೂಸ್ ವಿಷಕಾರಿ ಅಂಶಗಳನ್ನು ಹೊರಹಾಕಿ ನಿಮ್ಮ ದೇಹವನ್ನು ಶುದ್ಧವಾಗಿಡುತ್ತದೆ. ಅಜೀರ್ಣಕಾರಿ ಕಾಯಿಲೆಗಳನ್ನು ಇದು ಪರಿಣಾಮಕಾರಿಯಾಗಿ ಶಮನಗೊಳಿಸುತ್ತದೆ.

5 /5

ಬಾಯಿಯ ದುರ್ವಾಸನೆಯಿಂದ ಬಳಲುತ್ತಿರುವವರಿಗೆ ಅಲೋವೆರಾ ಬಹಳ ಪ್ರಯೋಜನಕಾರಿ. ಅಲೋವೆರಾದಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳು ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಡುತ್ತದೆ. ಇದರಿಂದ ಬಾಯಿಯ ದುರ್ವಾಸನೆಯನ್ನು ತಡೆಯಬಹುದಾಗಿದೆ.