Health Tips: ದೊಡ್ಡಪತ್ರೆ ಎಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Doddapatre leaf health benefits: ದೊಡ್ಡಪತ್ರೆಯ ಹಸಿ ಎಲೆಗಳನ್ನು ಉಪ್ಪಿನ ಜೊತೆಗೆ ಸೇರಿಸಿಕೊಂಡು ಜಗಿದು ತಿಂದರೆ ಜೀರ್ಣಶಕ್ತಿ ಅಧಿಕವಾಗುವುದು ಮತ್ತು ಪಿತ್ತಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. 
 

Doddapatre Leaf Health Benefits: ನಮ್ಮ ಮನೆಯ ಹಿತ್ತಿಲಿನಲ್ಲಿ ಬೆಳೆಯುವ ಕೆಲವು ಗಿಡಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತವೆ. ಈ ಪೈಕಿ ದೊಡ್ಡಪತ್ರೆಯೂ ಒಂದು. ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕಿದರೆ ಅದರಿಂದ ಮುಕ್ತಿ ದೊರೆಯುತ್ತದೆ. ದೊಡ್ಡ ಪತ್ರೆಯಲ್ಲಿ ವಿಟಮಿನ್‌ ʼಸಿʼ, ಫೈಬರ್‌ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡಪತ್ರೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /5

ಮಕ್ಕಳಿಗೆ ಕಫ ಕಟ್ಟಿಕೊಂಡಾಗ ದೊಡ್ಡಪತ್ರೆ ಎಲೆಯನ್ನು ಬಾಡಿಸಿ, ಅದರ ರಸವನ್ನು ಹಿಂಡಿ ಅದನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಎರಡು ಸಲ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಇದರ ರಸವನ್ನು ಎದೆಯ ಭಾಗಕ್ಕೆ ಒಂದು ವಾರ ದಿನಕ್ಕೆ ಮೂರು ಸಲದಂತೆ ಸವರಿದರೆ ಕಫ ಗುಣವಾಗುತ್ತದೆ.

2 /5

ದೊಡ್ಡಪತ್ರೆ ಎಲೆಯ ತಂಬುಳಿ ತುಂಬಾ ರುಚಿಕರವಾಗಿರುತ್ತದೆ. ಇದು ಉಬ್ಬಸ ಮತ್ತು ಕೆಮ್ಮಿಗೆ ರಾಮಬಾಣವಾಗಿದೆ. ಇದನ್ನು ಹೆಚ್ಚಾಗಿ ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ.

3 /5

ದೊಡ್ಡಪತ್ರೆ ಎಲೆ ಮತ್ತು ಅರಿಶಿಣವನ್ನು ಅರೆದು ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ಗಂದೆಗಳು ಮಾಯವಾಗುತ್ತದೆ. ಗಾಯ ಅಥವಾ ಚೇಳು ಕಡಿತಕ್ಕೆ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಬಳಸಲಾಗುತ್ತದೆ

4 /5

ಜಾಂಡೀಸ್(ಅರಿಶಿಣ ಕಾಮಾಲೆ)ನಿಂದ ನರಳುತ್ತಿರುವವರು ಹತ್ತು ದಿನಗಳ ಕಾಲ ದೊಡ್ಡಪತ್ರೆಯ ಎಲಗಳನ್ನು ದಿನವೂ ತಿಂದರೆ ಕಾಯಿಲೆ ಗುಣವಾಗುತ್ತದೆ. 

5 /5

ದೊಡ್ಡಪತ್ರೆಯ ಹಸಿ ಎಲೆಗಳನ್ನು ಉಪ್ಪಿನ ಜೊತೆಗೆ ಸೇರಿಸಿಕೊಂಡು ಜಗಿದು ತಿಂದರೆ ಜೀರ್ಣಶಕ್ತಿ ಅಧಿಕವಾಗುವುದು ಮತ್ತು ಪಿತ್ತಸಂಬಂಧಿ ಕಾಯಿಲೆಗಳು ದೂರವಾಗುತ್ತವೆ.