Headache Reasons: ತಲೆನೋವು ಬರೋದು ಸಾಮಾನ್ಯ. ಆದರೆ ಕೆಲವರಿಗೆ ಹಲವು ಕಾರಣಗಳಿಂದ ತಲೆನೋವು ಉಂಟಾಗಬಹುದು. ಅದರಲ್ಲಿ ಅಧಿಕ ರಕ್ತದೊತ್ತಡಕ್ಕೂ (BP) ಕಾರಣವಾಗಬಹುದು. ಹಾಗಿದ್ರೆ ಬಿಪಿ ಇದ್ರೆ ನಿಜವಾಗ್ಲೂ ತಲೆನೋವು ಉಂಟಾಗುತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
Fish Health Care: ಕರಾವಳಿಗರಿಗೆ ಮೀನಿಲ್ಲದೇ ಊಟನೇ ಸೇರಲ್ಲ. ಮೀನುಗಳು ರುಚಿಯಲ್ಲೂ ಸೂಪರ್, ಆರೋಗ್ಯ ಪ್ರಯೋಜನಗಳಲ್ಲೂ ಸೈ ಎನಿಸಿಕೊಂಡಿದೆ. ಹಾಗಿದ್ರೆ ಅದರ ಆರೋಗ್ಯ ಪ್ರಯೋಜನಗಳು ಎಷ್ಟಿದೆ ಗೊತ್ತಾ?
ಹೃದಯದ ಆರೋಗ್ಯಕ್ಕೂ ಬೆಳ್ಳುಳ್ಳಿ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಬೆಳ್ಳುಳ್ಳಿಯಲ್ಲಿರುವ ಸಂಯುಕ್ತಗಳು ರಕ್ತನಾಳಗಳ ಕಾರ್ಯಕ್ಷಮತೆಯನ್ನ ಬೆಂಬಲಿಸಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನೆರವಾಗಬಹುದು. ಹೀಗಾಗಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನ ಕಡಿಮೆ ಮಾಡುವಲ್ಲಿ ಇದು ಸಹಕಾರಿ ಎನ್ನಲಾಗುತ್ತಿದೆ.
ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ಹೃದಯದ ಕಾರ್ಯಕ್ಷಮತೆ ಹೆಚ್ಚಾಗಿ ರಕ್ತದೊತ್ತಡ ಕಡಿಮೆಯಾಗಲು ನೆರವಾಗುತ್ತದೆ. ದೇಹದ ತೂಕವನ್ನ ನಿಯಂತ್ರಣದಲ್ಲಿಡುವುದೂ ಅಗತ್ಯವಾಗಿದೆ.
ಹೃದಯ ಆರೋಗ್ಯಕ್ಕೂ ದಾಳಿಂಬೆ ಉತ್ತಮವಾಗಿದೆ. ದಾಳಿಂಬೆದಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ರಕ್ತನಾಳಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನ ತಗ್ಗಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ವಿಶೇಷವಾಗಿ ಮಧುಮೇಹ, ಅತಿಯಾದ ಒತ್ತಡ, ನಿದ್ರಾಹೀನತೆ, ಧೂಮಪಾನ ಹಾಗೂ ಅಸ್ವಸ್ಥ ಆಹಾರ ಪದ್ಧತಿ ಹೊಂದಿರುವವರಲ್ಲಿ ಅಪಾಯ ಹೆಚ್ಚಿರುತ್ತದೆ. ಯುವಜನತೆಯಲ್ಲಿಯೂ ಈ ಸಮಸ್ಯೆ ವೇಗವಾಗಿ ಏರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಹೆಚ್ಚು ಎಣ್ಣೆ ಮತ್ತು ಫಾಸ್ಟ್ಫುಡ್ ಸೇವನೆ, ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆ ಕೊರತೆ ಹಾಗೂ ಅತಿಯಾದ ತೂಕ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಕೆಲವರಲ್ಲಿ ಇದು ವಂಶಪಾರಂಪರ್ಯವಾಗಿಯೂ ಕಂಡುಬರುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೂಡ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ಉಪಯುಕ್ತ ಎನ್ನಲಾಗುತ್ತಿದೆ. ವಿಶೇಷವಾಗಿ ಚಳಿ, ಕೆಮ್ಮು ಹಾಗೂ ವೈರಲ್ ಸೋಂಕುಗಳಿಂದ ರಕ್ಷಣೆ ಪಡೆಯಲು ಇದು ಸಹಾಯ ಮಾಡಬಹುದು ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತುಪ್ಪ ದೇಹಕ್ಕೆ ತ್ವರಿತ ಶಕ್ತಿ ನೀಡುವಲ್ಲಿ ಸಹಾಯಕವಾಗುತ್ತದೆ. ಕೆಲವು ಆರೋಗ್ಯ ತಜ್ಞರ ಪ್ರಕಾರ, ಮಿತ ಪ್ರಮಾಣದಲ್ಲಿ ತುಪ್ಪ ಸೇವಿಸುವುದರಿಂದ ಹೊಟ್ಟೆ ತುಂಬಿದ ಭಾವನೆ ಹೆಚ್ಚು ಕಾಲ ಉಳಿಯಬಹುದು. ಇದರಿಂದ ಅನಗತ್ಯ ತಿಂಡಿಗಳನ್ನ ಕಡಿಮೆ ತಿನ್ನುವ ಸಾಧ್ಯತೆ ಇರುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಎಂಬ ಸ್ಥಿತಿಯಲ್ಲಿ ಕಾಲುಗಳಿಗೆ ರಕ್ತ ಹರಿವು ಕಡಿಮೆಯಾಗಬಹುದು. ಇದರ ಪರಿಣಾಮ ಕಾಲಿನ ಚರ್ಮ ಒಣಗುವುದು, ಬೆರಳುಗಳಲ್ಲಿ ಕೂದಲು ಕಡಿಮೆಯಾಗುವುದು, ಕಾಲು ನೋವು ಅಥವಾ ಚಳಿ ಅನುಭವಿಸುವಂತಹ ಲಕ್ಷಣಗಳು ಕಾಣಿಸಬಹುದು.
Chemical Ripened Banana: ಬಾಳೆಹಣ್ಣು ಪ್ರಕೃತಿ ನಮಗೆ ನೀಡಿದ ಅದ್ಭುತ ಆಹಾರ. ಇದು ಎಲ್ಲಾ ವಯಸ್ಸಿನ ಜನರು ತಿನ್ನುವ ಮತ್ತು ಪ್ರತಿ ಮನೆಯಲ್ಲೂ ಇಷ್ಟವಾಗುವ ಹಣ್ಣು. ಇದರಲ್ಲಿರುವ ವಿಟಮಿನ್ B6, ವಿಟಮಿನ್ C, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೈಬರ್ನಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನ ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನ ರಕ್ಷಿಸುತ್ತದೆ. ಇಂತಹ ಪೌಷ್ಟಿಕಾಂಶದ ಮೌಲ್ಯವನ್ನ ಹೊಂದಿರುವ ಈ ಹಣ್ಣು, ರಾಸಾಯನಿಕಗಳೊಂದಿಗೆ ಹಣ್ಣಾದರೆ, ಆರೋಗ್ಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಇಂದು ಹಣ್ಣುಗಳಿಗೆ ರಸಾಯನಿಕ ಪದಾರ್ಥ ಬೆರೆಸಿ ಮಾರುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಹಣ್ಣು ಖರೀದಿಸುವ ಮುನ್ನ ಎಚ್ಚರವಹಿಸುವುದು ಅಗತ್ಯ...
ಕುಂಬಳಕಾಯಿಬೀಜಗಳು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತವೆ. ಜಿಂಕ್ ಅಂಶವು ಇವುಗಳಲ್ಲಿ ಹೆಚ್ಚಾಗಿ ಇರುವುದರಿಂದ ದೇಹದ ರಕ್ಷಣಾತ್ಮಕ ವ್ಯವಸ್ಥೆ ಬಲವಾಗುತ್ತದೆ. ಇದರಿಂದ ಶೀತ, ಜ್ವರ ಹಾಗೂ ಇತರ ಸೋಂಕುಗಳಿಂದ ರಕ್ಷಣೆ ಸಿಗುತ್ತದೆ.
Watermelon health benefits: ಬೇಸಿಗೆ ಬಂತೆಂದರೆ ಮೊದಲು ನೆನಪಿಗೆ ಬರುವ ಹಣ್ಣು ಕಲ್ಲಂಗಡಿ. ಸುಮಾರು 92 ಪ್ರತಿಶತ ನೀರನ್ನ ಒಳಗೊಂಡಿರುವ ಈ ಕೆಂಪು, ಸಿಹಿ ಹಣ್ಣು ಸೂರ್ಯನ ಶಾಖದಿಂದ ಪರಿಹಾರ ಪಡೆಯಲು ಉತ್ತಮ ಮಾರ್ಗವಾಗಿದೆ. ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾದ ಕಲ್ಲಂಗಡಿ ಹಣ್ಣು ತಿನ್ನುವಾಗ ನಾವು ಮಾಡುವ ಕೆಲವು ತಪ್ಪುಗಳು ಮಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನುವುದರಿಂದಾಗುವ ಅಪಾಯಗಳ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನ ಸೇರಿಸಿ. ತಾಜಾ ಋತುಮಾನದ ಹಣ್ಣುಗಳನ್ನ ಸೇವಿಸಿ. ನಿಮ್ಮ ಆಹಾರದಲ್ಲಿ ಧಾನ್ಯಗಳನ್ನ ಸೇರಿಸಿ. ವಿಶೇಷವಾಗಿ ಹೆಚ್ಚು ದ್ವಿದಳ ಧಾನ್ಯಗಳನ್ನ ಸೇವಿಸಿ
ಬಾಳೆಹಣ್ಣನ್ನ ಪೋಷಕಾಂಶಗಳ ಉಗ್ರಾಣವೆಂದು ಪರಿಗಣಿಸಲಾಗುತ್ತದೆ. ಬಾಳೆಹಣ್ಣು ತಿನ್ನುವುದರಿಂದ ದೇಹವು ಬಲಗೊಳ್ಳುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.
ಮಧುಮೇಹಿ ರೋಗಿಗಳು ಒಣದ್ರಾಕ್ಷಿಗಳನ್ನ ತಿನ್ನಬಹುದೇ? ಇದು ಅನೇಕರ ಪ್ರಶ್ನೆಯಾಗಿರುತ್ತದೆ. ಮಧುಮೇಹಿಗಳು ಒಣದ್ರಾಕ್ಷಿ ತಿಂದರೆ ಅವರ ಆರೋಗ್ಯಕ್ಕೆ ಏನಾಗುತ್ತೆ? ಮಧುಮೇಹ ರೋಗಿಗಳಿಗೆ ಒಣದ್ರಾಕ್ಷಿ ಸುರಕ್ಷಿತವೇ? ಇದಕ್ಕೆ ಇಂದು ನಾವು ಉತ್ತರ ನೀಡಲಿದ್ದೇವೆ.
ಈ ಕಾಳು ನೆನೆಸಿದ ನೀರು ಕುಡಿಯುವುದರಿಂದ ಮಧುಮೇಹ ನೈಸರ್ಗಿಕವಾಗಿ ನಿಯಂತ್ರಣಕ್ಕೆ ಬರುತ್ತದೆ.
ತೆಂಗಿನ ನೀರು ಅತ್ಯಂತ ಜನಪ್ರಿಯ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಒಂದು ವಾರ ನಿಯಮಿತವಾಗಿ ತೆಂಗಿನ ನೀರು ಕುಡಿದರೆ, ನಿಮ್ಮ ದೇಹದಲ್ಲಿ ಉತ್ತಮ ಬದಲಾವಣೆ ಕಾಣಬಹುದು.
ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಆರೋಗ್ಯಕರ ಕೊಬ್ಬಿನಾಮ್ಲಗಳನ್ನ ಹೊಂದಿರುತ್ತವೆ. ಅವು ರಕ್ತದೊತ್ತಡನ್ನ ನಿಯಂತ್ರಿಸಲು ಸಹಾಯ ಮಾಡುತ್ತವೆ.
Heart attack survive tips : ಕಳೆದ ಕೆಲವು ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಅನೇಕ ಜನರಿಗೆ ಒಂಟಿಯಾಗಿರುವಾಗಲೇ ಹೃದಯಾಘಾತವಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ವರದಿಯಾಗಿದೆ. ನೀವು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಹೃದಯಾಘಾತವಾದರೆ ಏನು ಮಾಡಬೇಕು..? ಬನ್ನಿ ತಿಳಿಯೋಣ..