Health Tips: ಬೇಸಿಗೆಯಲ್ಲಿ ಈ ಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

Healthy Summer Foods: ಬೇಸಿಗೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.   ​

Healthy Summer Foods: ಬೇಸಿಗೆ ತಾಪಕ್ಕೆ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಬೇಸಿಗೆಯಲ್ಲಿ ಬಹುತೇಕರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಬೇಸಿಗೆ ಕಾಲದಲ್ಲಿ ದೇಹವನ್ನು ಹೈಡ್ರೇಟ್ ಆಗಿಡುವುದು ತುಂಬಾ ಮುಖ್ಯ. ಬಿಸಿಲಿನ ಹೊಡೆತಕ್ಕೆ ನಿಮ್ಮ ತ್ವಚೆಗೂ ಧಕ್ಕೆಯುಂಟಾಗಬಹುದು. ಹೀಗಾಗಿ ದೇಹದ ಆರೋಗ್ಯದ ಜೊತೆಗೆ ತ್ವಚೆಯ ಆರೈಕೆಯನ್ನು ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ದಿನವಿಡೀ ಹೈಡ್ರೇಟ್‌ ಆಗಿರಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್‌ ಅಂಶವಿದೆ. ಶೇ.92ರಷ್ಟು ನೀರಿನಂಶ ಹೊಂದಿರುವ ಈ ಹಣ್ಣಿನಲ್ಲಿ ವಿಟಮಿನ್‌ C, B6, B1 ಮತ್ತು ಲಿಕೋಪಿನ್‌ ಅಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ ಚರ್ಮಕ್ಕೂ ಉತ್ತಮ.  

2 /5

ಪಪ್ಪಾಯಿ ಹಣ್ಣು ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಆರೈಕೆಗೂ ಉತ್ತಮ. ಡ್ರೈ ಸ್ಕಿನ್ ಸಮಸ್ಯೆಗೆ ಈ ಹಣ್ಣು ಉತ್ತಮ. ಈ ಹಣ್ಣಿನಲ್ಲಿ ವಿಟಮಿನ್‌ A, B ಮತ್ತು C ಇದೆ. ಇದರ ಜೊತೆಗೆ ಪೊಟಾಷಿಯಂ, ಮ್ಯಾಂಗನೀಸ್‌ ಹಾಗೂ ತಾಮ್ರದ ಅಂಶ ಸಮೃದ್ಧವಾಗಿದೆ.

3 /5

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ C ಹೇರಳವಾಗಿದೆ. ಇದು ಚರ್ಮದ ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಗುಣಗಳಿದ್ದು,  ಚರ್ಮದ ಆರೋಗ್ಯಕ್ಕೆ ಸಹಕಾರಿ. ಕಿತ್ತಳೆ ಹಣ್ಣಿನಲ್ಲಿರುವ  ವಿಟಮಿನ್‌ C ಮೊಡವೆ ಸಮಸ್ಯೆಗೆ ಮುಕ್ತಿ ನೀಡಿ ನಿಮಗೆ ಕಾಂತಿಯುತ ಚರ್ಮವನ್ನು ನೀಡುತ್ತದೆ.  

4 /5

ಮಾವಿನ ಹಣ್ಣನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ.  ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ಹಣ್ಣಿನಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್‌ C, A, B6, K, E, ಪೊಟಾಶಿಯಂ, ಮ್ಯಾಂಗನೀಸ್‌ ಹಾಗೂ ತಾಮ್ರದ ಅಂಶಗಳು ಹೇರಳವಾಗಿವೆ.

5 /5

ಕಿವಿ ಹಣ್ಣು ವಿಟಮಿನ್‌ C ಯಿಂದ ಸಮೃದ್ಧವಾಗಿದೆ. ಇದರಲ್ಲಿ ಕೊಲಜಿನ್‌ ಉತ್ಪಾದಿಸುವ ಅಂಶವಿದ್ದು, ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹವನ್ನು ಹೈಡ್ರೇಟ್‌ ಆಗಿಡಲು ಸಹಕರಿಸುತ್ತದೆ. ಕಿವಿಹಣ್ಣು ತಿನ್ನುವುದು ದೇಹದ ಆರೋಗ್ಯಕ್ಕೆ ಉತ್ತಮ.