GSAT-11: ಈಗ ಭಾರತದ ಮೂಲ ಮೂಲೆಯಲ್ಲೂ ಸಿಗಲಿದೆ ಇಂಟರ್ನೆಟ್

ಭಾರತದ ಅತಿದೊಡ್ಡ ಉಪಗ್ರಹ ಬ್ರಾಡ್‌ಬ್ಯಾಂಡ್‌ ಆಧರಿತ ಸೇವೆಯನ್ನು ನನಸುಗೊಳಿಸುವ ಜಿಸ್ಯಾಟ್ -11 ರ ಉಡಾವಣೆ ಒಂದು ರೀತಿಯ ಕ್ರಾಂತಿಗೆ ಕಾರಣವಾಗುತ್ತದೆ. ಇದರಲ್ಲಿ ನೀವು ಒಂದು ಸೆಕೆಂಡಿನಲ್ಲಿ ಒಂದೊಂದು ಜಿಬಿಯ ಮೂರು ಸಿನಿಮಾಗಳನ್ನೂ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.

Dec 10, 2018, 01:51 PM IST

ನವದೆಹಲಿ: ದೇಶದ ಮೂಲೆ ಮೂಲೆಯಲ್ಲೂ ಇಂಟರ್ನೆಟ್ ಕಲ್ಪಿಸಬಲ್ಲ ಭಾರತದ ಅತಿದೊಡ್ಡ ಉಪಗ್ರಹ ಜಿಸ್ಯಾಟ್ -11 ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಜಿಸ್ಯಾಟ್ -11 ನ್ನು ಫ್ರೆಂಚ್ ಗಯಾನಾದಿಂದ ಆಯರಿಯಾನ್-5 ರಾಕೆಟ್‌ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ ಉಪಗ್ರಹ ಇದಾಗಿದ್ದು, ಇದು 5,854 ಕೆ.ಜಿ. ತೂಕವಿದೆ. ಇಷ್ಟು ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಕೆಟ್‌ ಇಸ್ರೊ ಬಳಿ ಇಲ್ಲವಾದ್ದರಿಂದ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆಯರಿಯಾನ್-5 ರಾಕೆಟ್‌ ಮೂಲಕ ಉಡಾವಣೆ ಮಾಡಲಾಗಿದೆ.

1/9

ಯಶಸ್ವೀ ಉಡಾವಣೆ

ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್ ಗಯಾನಾದಲ್ಲಿರುವ ಕೋರೌನಲ್ಲಿರುವ ಏರಿಯನ್ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ಬೆಳಿಗ್ಗೆ 2.07 ನಿಮಿಷಕ್ಕೆ ಉಡಾಯಿಸಲಾಯಿತು. ಏರಿಯಾನ್‌ಸ್ಪೇಸ್‌ನ ಏರಿಯಾನ್‌-5 ರಾಕೆಟ್‌ ಭಾರತದ ಈ ಅತ್ಯಾಧುನಿಕ ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್-11 ಮತ್ತು ದಕ್ಷಿಣ ಕೊರಿಯಾದ ಜಿಯೋ- ಕಾಂಪ್‌ಸ್ಯಾಟ್‌-2ಎ ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗಳಿಗೆ ಸೇರಿಸಿತು. 

2/9

30 ನಿಮಿಷದ ಉಡಾವಣೆ

30 ನಿಮಿಷಗಳ ಉಡಾವಣೆ ಅವಧಿಯಲ್ಲಿ ಜಿಸ್ಯಾಟ್‌-11 ರಾಕೆಟ್‌ನಿಂದ ಬೇರ್ಪಟ್ಟು ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ. ನಾಲ್ಕು ನಿಮಿಷಗಳ ಬಳಿಕ ಕೊರಿಯನ್ ಉಪಗ್ರಹವನ್ನು ರಾಕೆಟ್‌ನಿಂದ ಪ್ರತ್ಯೇಕಿಸಿ ಕಕ್ಷೆಗೆ ಸೇರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. 

3/9

ಉಪಗ್ರಹದ ತೂಕ ಸುಮಾರು 5,854 ಕೆ.ಜಿ.

ಇಸ್ರೋ ಮುಖ್ಯಸ್ಥ ಜಿಸ್ಯಾಟ್-11 ಭಾರತವು ನಿರ್ಮಿಸಿದ ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ ಉಪಗ್ರಹ ಆಗಿದೆ. ಏರಿಯನ್ -5 ಮೂಲಕ ಇಂದು ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರ ತೂಕ 5,854 ಕೆ.ಜಿ. ಎಂದು ತಿಳಿಸಿದರು.

4/9

ಇದರ ಲೈಫ್ ಟೈಮ್ 15 ವರ್ಷ

ಈ ಅತ್ಯಾಧುನಿಕ ಜಿಸ್ಯಾಟ್-11  ಉಪಗ್ರಹದ ಜೀವಿತಾವಧಿ 15 ವರ್ಷ ಅಥವಾ ಅದಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ದೇಶಾದ್ಯಂತ ಅತಿ ವೇಗದ ಇಂಟರ್ನೆಟ್‌ ಸಂಪರ್ಕದ ವಿಸ್ತರಣೆಗೆ ಇದು ನೆರವಾಗಲಿದೆ. 

5/9

ಹಾಸನದಲ್ಲಿರುವ ಇಸ್ರೋದ ಪ್ರಧಾನ ಕೇಂದ್ರದಲ್ಲಿ ಜಿಸ್ಯಾಟ್‌-11ರ ನಿಯಂತ್ರಣ

ಜಿಸ್ಯಾಟ್ -11 ರ ಏರಿಯನ್ -5 ರಿಂದ ಬೇರ್ಪಟ್ಟ ನಂತರ, ಹಾಸನದಲ್ಲಿರುವ ಇಸ್ರೋದ ಪ್ರಧಾನ ನಿಯಂತ್ರಣ ಕೇಂದ್ರವು ಜಿಸ್ಯಾಟ್‌-11ರ ನಿಯಂತ್ರಣವನ್ನು ಪಡೆದಿದ್ದು, ಮುಂದಿನ ಐದು ದಿನಗಳಲ್ಲಿ ಉಪಗ್ರಹವನ್ನು ಅಂತಿಮ ಕಕ್ಷೆಯಲ್ಲಿ ಕೂರಿಸಲಾಗುವುದು ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು. 

6/9

ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಕಕ್ಷೆ

ಉಪಗ್ರಹವನ್ನು ಪ್ರಸ್ತುತ ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಕಕ್ಷೆಯಲ್ಲಿ ಸ್ಥಾಪಿಸಲಾಗಿದೆ. ನಂತರದ ದಿನಗಳಲ್ಲಿ ಕ್ರಮೇಣ ಇದನ್ನು ಭೂಸ್ಥಾಯೀ ವರ್ಗದಲ್ಲಿ ಹಂತ ಹಂತದಲ್ಲಿ ಕಳುಹಿಸಲಾಗುತ್ತದೆ. ಭೂಸ್ಥಾಯೀ ಕಕ್ಷೆಯ ಎತ್ತರ ಭೂಮಧ್ಯದಿಂದ ಸುಮಾರು 36,000 ಕಿ.ಮೀ.

7/9

GSAT-11 ಕಾರ್ಯಾರಂಭ?

GSAT-11 ಭೂಸ್ಥಾಯೀ ಕಕ್ಷೆಯಲ್ಲಿ 74 ಡಿಗ್ರಿ ಪೂರ್ವಕ್ಕೆ ಇಡಲಾಗುವುದು ಎಂದು ಇಸ್ರೊ ಹೇಳಿದೆ. ಅದರ ನಂತರ, ಎರಡು ಸೌರ ಕಮಾನುಗಳು ಮತ್ತು ನಾಲ್ಕು ಆಂಟೆನಾ ಪ್ರತಿಫಲಕಗಳನ್ನು ಸಹ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ, ಉಪಗ್ರಹ ಕೆಲಸ ಪ್ರಾರಂಭಿಸುತ್ತದೆ.  

8/9

ಹೈ-ಸ್ಪೀಡ್ ಡಾಟಾ

ಇಸ್ರೊದ ಪ್ರಕಾರ, GSAT -11 ಭಾರತದ ಮುಖ್ಯ ಭೂಭಾಗ ಮತ್ತು ದ್ವೀಪ ಪ್ರದೇಶಗಳಲ್ಲಿ ಉನ್ನತ-ವೇಗದ ಡಾಟಾ ಸೇವೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಇಡೀ ದೇಶಕ್ಕೆ ಸಂಪರ್ಕ ಏರ್ಪಡಿಸಲು ಹಲವು ಇನ್ಫ್ರಾರೆಡ್‌ ಕಿರಣಗಳನ್ನು ಬಳಸುತ್ತದೆ. ಈ ಕಿರಣಗಳ ವ್ಯಾಪ್ತಿ ತೀರಾ ಕಡಿಮೆ. ಆದರೆ ಸಾಮರ್ಥ್ಯ ಅತ್ಯಧಿಕ. ಹೀಗಾಗಿ ದತ್ತಾಂಶ ರವಾನೆಗೆ ಪ್ರಚಂಡ ವೇಗವಿರುತ್ತದೆ. ಇಂತಹ 32 ಕಿರಣಗಳು ದೇಶದ 16 ಸ್ಥಳಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. 

9/9

ಅಭಿನಂದನೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

ಈ ಉಪಗ್ರಹವು ಭಾರತದಲ್ಲಿ 16 ಜಿಬಿಪಿಎಸ್ ದತ್ತಾಂಶ ವೇಗವನ್ನು ಒದಗಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ನಾಲ್ಕು ಸಂವಹನ ಉಪಗ್ರಹಗಳ ಮೂಲಕ 100 ಜಿಬಿಪಿಎಸ್ ದತ್ತಾಂಶ ವೇಗವನ್ನು ಒದಗಿಸುವ ಗುರಿಯನ್ನು ಗುರಿಪಡಿಸಲಾಗಿದೆ ಎಂದು ಅವರು ಹೇಳಿದರು. GSAT-11 ಈ ವಿಭಾಗದಲ್ಲಿ ಮೂರನೇ ಉಪಗ್ರಹವಾಗಿದೆ.