Furniture Cleaning Hacks: ಫರ್ನೀಚರ್ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಉಪಾಯ: ಕ್ಷಣದಲ್ಲಿ ಫಳಫಳ ಅಂತಾ ಮಿನುಗುತ್ತೆ ಪೀಠೋಪಕರಣಗಳು

Furniture Cleaning Hacks: ಅನೇಕ ಜನರ ಮನೆಗಳಲ್ಲಿ ಪೀಠೋಪಕರಣಗಳು ಇರುತ್ತವೆ. ಇವುಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಜತೆಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಅಷ್ಟೇ ಮುಖ್ಯ. ಕಾಳಜಿ ವಹಿಸದಿದ್ದರೆ ಅವುಗಳು ಕೊಳಕು ಆಗುತ್ತವೆ. ನಂತರ ಗೀರುಗಳು ಬೀಳುವುದು, ಬಣ್ಣ ಬದಲಾಗುವ ಸಮಸ್ಯೆಗೆ ತುತ್ತಾಗುತ್ತವೆ. ಹೀಗಾಗಿ ಟೇಬಲ್, ಕುರ್ಚಿ, ಅಲ್ಮಿರಾ ಅಥವಾ ಯಾವುದೇ ಇತರ ಪೀಠೋಪಕರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ.

1 /5

ಅನೇಕ ಬಾರಿ ಪೀಠೋಪಕರಣಗಳಲ್ಲಿ ಮೊಂಡುತನದ ಕಲೆಗಳನ್ನು ಕಾಣಿಸಿಕೊಳ್ಳುತ್ತವೆ. ಅದನ್ನು ತೊಡೆದುಹಾಕಲು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಏರೋಸಲ್ (Aerosol)ನ್ನು ಬಳಕೆ ಮಾಡಬಹುದು. ಪೀಠೋಪಕರಣಗಳ ಮೇಲೆ ಅವುಗಳನ್ನು ಸಿಂಪಡಿಸಿ, ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಬಹುದು.

2 /5

ಅಡಿಗೆ ಸೋಡಾದ ಸಹಾಯದಿಂದ ಸಹ ಸುಲಭವಾಗಿ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ನೀವು ಬಿಸಿ ನೀರಿನಲ್ಲಿ ಅಡಿಗೆ ಸೋಡಾವನ್ನು ಬೆರೆಸಿ, ಅದನ್ನು ಬಾಟಲಿಯಲ್ಲಿ ಹಾಕಿ ಸಿಂಪಡಿಸಿ. ಸ್ವಲ್ಪ ಸಮಯದವರೆಗೆ ಮೈಕ್ರೋಫೈಬರ್ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಬೇಕು.

3 /5

ಪೀಠೋಪಕರಣಗಳನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಕ್ಲೀನಿಂಗ್ ವಸ್ತುಗಳು ಲಭ್ಯವಿದೆ. ಇದನ್ನು ಟೇಬಲ್ ಮತ್ತು ಕುರ್ಚಿಯ ಮೇಲೆ ಸ್ಪ್ರೇ ಮಾಡಿ ನಂತರ ಸ್ವಚ್ಛವಾದ ಹತ್ತಿ ಬಟ್ಟೆಯ ಸಹಾಯದಿಂದ ನಿಧಾನವಾಗಿ ಉಜ್ಜಿದರೆ ಪೀಠೋಪಕರಣಗಳು ಹೊಸದರಂತೆ ಹೊಳೆಯುತ್ತವೆ.

4 /5

ಗ್ಲಿಸರಿನ್ ಮತ್ತು ಯಾವುದೇ ಎಣ್ಣೆಯನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ. ಈಗ ಅದಕ್ಕೆ ನಿಂಬೆರಸ ಹಿಂಡಿ. ಈಗ ಅದನ್ನು ಪೀಠೋಪಕರಣಗಳ ಪ್ರತಿಯೊಂದು ಮೂಲೆಯಲ್ಲಿ ಸಿಂಪಡಿಸಿ. ಅಂತಿಮವಾಗಿ ಅದನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.

5 /5

ಅಡುಗೆಯ ಪಾಕವಿಧಾನದ ರುಚಿಯನ್ನು ಹೆಚ್ಚಿಸಲು ನೀವು ಹೆಚ್ಚಾಗಿ ಬಿಳಿ ವಿನೆಗರ್ ಅನ್ನು ಬಳಸಿರಬಹುದು. ಆದರೆ ಬಿಳಿ ವಿನೆಗರ್ ಸ್ವಚ್ಛತೆ ಕಾಪಾಡಲು ಕೂಡ ಸಹಾಯ ಮಾಡುತ್ತದೆ ಎಂದರೆ ನಂಬಲು ಸಾಧ್ಯವೇ? ಹೌದು ಬಿಳಿ ವಿನೆಗರ್ ನ್ನು ಬಾಟಲಿಯಲ್ಲಿ ಇರಿಸಿ ಮತ್ತು ಪೀಠೋಪಕರಣಗಳ ಮೇಲೆ ಸಿಂಪಡಿಸಿದರೆ ಫಳಫಳ ಅಂತಾ ಹೊಳೆಯುವ ಫರ್ನೀಚರ್ ನಿಮ್ಮದಾಗುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)