ಭಾರತೀಯರಿಗೆ ದುಬಾರಿ Beer ಕುಡಿಸಿ ಲೂಟಿ ಮಾಡಿದ ಕಂಪನಿಗಳು, ತನಿಖಾ ವರದಿಯಲ್ಲಿ ಬಹಿರಂಗ

ಭಾರತದಲ್ಲಿ ದುಬಾರಿ ಬಿಯರ್‌ಗಳನ್ನು ಮಾರಾಟ ಮಾಡುವ ಮೂಲಕ ಬಿಯರ್ ಕಂಪನಿಗಳು ಭಾರಿ ಲಾಭ ಗಳಿಸಿವೆ. ರಾಯಿಟರ್ಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬೆಲೆಗಳನ್ನು ನಿಗದಿಪಡಿಸಲು ಬಿಯರ್ ಕಂಪನಿಗಳು ಹೇಗೆ ಮಾತುಕತೆ ನಡೆಸುತ್ತವೆ ಎಂಬುದನ್ನು ತೋರಿಸಲಾಗಿದೆ.

  • Dec 12, 2020, 17:18 PM IST

ನವದೆಹಲಿ: ವೀಕೆಂಡ್ ನಲ್ಲಿ  ಬಿಯರ್ ಕುಡಿದು ಚಿಲ್ಮಾಡುತ್ತಿದ್ದರೆ, ಈ ಸುದ್ದಿ ನಶೆ ಇಳಿಕೆಯ ಕೆಲಸ ಮಾಡಲಿದೆ. ಬಿಯರ್ (Beer) ಬೆಲೆಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಸುಮಾರು ಶೇ.90 ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಮೂಲಕ ಭಾರತೀಯ ಮತ್ತು ವಿದೇಶಿ ಬಿಯರ್ ಕಂಪನಿಗಳು ಭಾರತೀಯ ಗ್ರಾಹಕರಿಂದ ಅನಿಯಂತ್ರಿತ ಬೆಲೆ  ಹೇಗೆ ಪಡೆಯುತ್ತಿವೆ ಎಂಬುದನ್ನು ಸಿಸಿಐ ವರದಿಯೊಂದು ಬಹಿರಂಗಪಡಿಸಿದೆ.

 

ಇದನ್ನು ಓದಿ- OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?

1 /8

ರೈಟರ್ಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಬಿಯರ್ ಉತ್ಪಾದಿಸುವ ಅತಿ ದೊಡ್ಡ ಮೂರು ಕಂಪನಿಗಳಾದ Carlsberg, SABMiller ಹಾಗೂ ಭಾರತೀಯ ಮೂಲದ United Breweries (UB) ಅಧಿಕಾರಿಗಳ ನಡುವೆ ಬಿಯರ್ ಬೆಲೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಜಬರ್ದಸ್ತ್ ಹೊಂದಾಣಿಕೆ ಇರುತ್ತದೆ ಎನ್ನಲಾಗಿದೆ. ಈ ಮೂರು ಕಂಪನಿಗಳ ಅಧಿಕಾರಿಗಳು ಪರಸ್ಪರ ಅತಿ ಗೌಪ್ಯ ಬಿಸಿನೆಸ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ರೈಟರ್ಸ್ ಗೆ ದೊರೆತ ಒಂದು ಸರ್ಕಾರಿ ಆಂಟಿ ಟ್ರಸ್ಟ್ ವರದಿಯಲ್ಲಿ ಪರಸ್ಪರ ಹೊಂದಾಣಿಕೆ ನಡೆಸುವ ಮೂಲಕ ದರ ನಿಗದಿಪಡಿಸುವ ಆಟ ಕಳೆದ 11 ವರ್ಷಗಳಿಂದ ನಡೆದಿದೆ ಎನ್ನಲಾಗಿದೆ.

2 /8

ವರ್ಷ 2018 ರಲ್ಲಿ Competition Commission of India (CCI) ಈ ಮೂರೂ ಕಂಪನಿಗಳ ವೈಭವೋಪೇತ ಕಛೇರಿಗಳ ಮೇಲೆ ದಾಳಿ ನಡೆಸಿ, ತನಿಖೆ ಕೈಗೊಂಡಿದೆ. ಈ ದಾಳಿಯೇ ವೇಳೆ ಈ ಕಂಪನಿಗಳ ಕಾರ್ಯಶೈಲಿಯ ಮೇಲೆ ಸಂದೇಹ ವ್ಯಕ್ತಪಡಿಸಲಾಗಿತ್ತು. ಈ ಮೂರು ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಶೇ.88ರಷ್ಟು ಹಿಡಿತ ಸಾಧಿಸಿವೆ.

3 /8

ಹಿರಿಯ ಸಿಸಿಐ ಸದಸ್ಯರೊಬ್ಬರು ಈ ವರದಿಯ ತನಿಖೆ ನಡೆಸಲಿದ್ದು, ಅದರಲ್ಲಿ ಯಾವುದೇ ಅಕ್ರಮಗಳು ಕಂಡುಬಂದಲ್ಲಿ $ 250 ದಶ ಲಕ್ಷಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸಬಹುದಾಗಿದೆ. ವರದಿಯಲ್ಲಿ, ಕಾರ್ಯನಿರ್ವಾಹಕರ ನಡುವೆ ನಡೆದ ಸಂಭಾಷಣೆ, ವಾಟ್ಸಾಪ್ ಚಾಟ್‌ಗಳು ಮತ್ತು ಇ-ಮೇಲ್‌ಗಳ ಸಂಭಾಷಣೆಗಳಲ್ಲಿ ಕಂಪನಿಗಳು ರೆಗ್ಯುಲರ್ ಪದ್ಧತಿಯಿಂದ ಹಾಗೂ ನಿತ್ಯ ಹಲವು ರಾಜ್ಯಗಳಲ್ಲಿ ದರಗಳನ್ನು ಹೆಚ್ಚಿಸಲು ಜಂಟಿಯಾಗಿ ಕಾರ್ಯತಂತ್ರ ರೂಪಿಸುತ್ತಿದ್ದವು ಎಂಬುದು ತಿಳಿದುಬಂದಿದೆ.

4 /8

2013 ರಲ್ಲಿ ನಡೆದ ಒಂದು ವಾಟ್ಸ್ ಆಪ್ ಸಂವಾದದಲ್ಲಿ ಯುಬಿ ಕಂಪನಿಯ ಪ್ರಮುಖ ಸೇಲ್ಸ್ ಅಧಿಕಾರಿ ಕಿರಣ್ ಕುಮಾರ್ ಹಾಗೂ ಅಂದಿನ SABMiller ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಶಲಭ ಸೆಟ್ ಶಾಮೀಲಾಗಿದ್ದರು ಎನ್ನಲಾಗಿದೆ. ಇದರಲ್ಲಿ ಯಾವುದೇ ಒಂದು ರಾಜ್ಯದಲ್ಲಿ ಬಿಯರ್ ಬೆಲೆಯನ್ನು 60 ರೂ.ಗಳವರೆಗೆ ಹೆಚ್ಚಿಸುವ ಉಲ್ಲೇಖವಿದೆ. ವರದಿಗಳ ಪ್ರಕಾರ “Pls arrange msg to other friends” ಎಂಬ ಸಂದೇಶವನ್ನು ಸೆಟ್ ಕಳುಹಿಸಿದ್ದಾರೆ. ಇದರಿಂದ ಇತರೆ ಸ್ಪರ್ಧಾತ್ಮಕ ಕಂಪನಿಗಳೂ ಕೂಡ ಇದರಲ್ಲಿ ಶಾಮೀಲಾಗಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದು CCI ಹೇಳಿದೆ.

5 /8

ಈ ಕುರಿತು CCIಗೆ ಹೇಳಿಕೆ ನೀಡಿರುವ Carlsberg 2015ರಲ್ಲಿ ಓಡಿಷಾ ರಾಜ್ಯದಲ್ಲಿ ಪ್ರೈಸ್ ಪಾಲಸಿ ಬದಲಾವಣೆಯ ಬಳಿಕ ಎಲ್ಲ ಕಂಪನಿಗಳು ಬಿಯರ್ ಸಪ್ಲೈ ಕಡಿಮೆ ಮಾಡಿದ್ದವು. 2018 ರಲ್ಲಿ Carlsberg ಕಂಪನಿಯ ಉಪಾಧ್ಯಕ್ಷ ನಿಲೇಶ್ ಪಟೇಲ್ ಈ ಕುರಿತು ಒಂದು ಇ-ಮೇಲ್ ರವಾನಿಸಿದ್ದರು. ಇದರಲ್ಲಿ ಮಹಾರಾಷ್ಟ್ರ ರಾಜ್ಯಕ್ಕೂ ಕೂಡ ಇದೇ ರೀತಿಯ ಕಾರ್ಯತಂತ್ರ ರೂಪಿಸಲಾಗುವುದು ಎಂದಿದ್ದರು.

6 /8

CCI ವರದಿಯ ಪ್ರಕಾರ ಈ ಕಂಪನಿಗಳು ಒಂದೇ ರೂಪದ ದರ ನಿಗದಿಪಡಿಸಲು All India Brewers Association (AIBA) ಅನ್ನು ಒಂದು ಕಾಮನ್ ಪ್ಲಾಟ್ಫಾರ್ಮ್ ರೂಪದಲ್ಲಿ ಬಳಕೆ ಮಾಡಿಕೊಂಡಿದ್ದವು. ಇದಾದ ಬಳಿಕ ದೇಶಿಯ ಗ್ರೂಪ್ ಕಂಪನಿಗಳ ವತಿಯಿಂದ ಬೆಲೆ ಏರಿಕೆಗೆ ಲಾಗಿಂಗ್ ನಡೆಸುತ್ತವೆ ಎನ್ನಲಾಗಿದೆ.

7 /8

ವರದಿಯ ಪ್ರಕಾರ ಕನಿಸ್ಥ ಮೂರು ಬಾರಿ ಕಂಪನಿಗಳ ಪದಾಧಿಕಾರಿಗಳು ಪರಸ್ಪರ ತಮ್ಮ ಯೋಜನೆಗಳನ್ನು ಬಚ್ಚಿಡಲು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು 2016 ರಲ್ಲಿ ಈ ಮೂರು ಕಂಪನಿಗಳ ಅಧಿಕಾರಿಗಳಿಗೆ  ಪತ್ರ ರವಾನಿಸಿದ್ದ AIBA DG, 'We should avoid getting caught'ಅಂದರೆ ನಾವು ಸಿಲುಕಿಕೊಳ್ಳುವುದರಿಂದ ಪಾರಾಗಬೇಕು ಎಂದಿದ್ದರು.

8 /8

ಈ ವರದಿಯ ಕುರಿತು ರೈಟರ್ಸ್ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲು CCI ನಿರಾಕರಿಸಿದೆ. ಲಾಬಿ ಗ್ರೂಪ್ AIBA ಹಾಗೂ Carlsberg ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಈ ಕುರಿತು ಹೇಳಿಕೆ ನೀಡಿರುವ United Brewaries, ತನಿಖಾಧಿಕಾರಿಗಳಿಗೆ ಸಹಯೋಗ ನೀಡುತ್ತಿರುವುದಾಗಿ ಹೇಳಿದೆ ಮತ್ತು CCI ಮುಂದೆಯೂ ಕೂಡ ಹಾಜರಾಗುವುದಾಗಿ ಹೇಳಿದೆ. Heinenken ಕೂಡ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.