Gangavva Remuneration : ಬಿಗ್ ಬಾಸ್ ತೆಲುಗು 8 ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬಿಗ್ ಬಾಸ್ ತೆಲುಗು 8 ಹತ್ತನೇ ವಾರದಲ್ಲಿ ಅಸಾಧಾರಣ ಡಬಲ್ ಎಲಿಮಿನೇಷನ್ ನಡೆಯಲಿದ್ದು, ವಾರದ ಮಧ್ಯದಲ್ಲೆ ಅನಿರೀಕ್ಷಿತವಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಗಂಗವ್ವ, ಮನೆಯಿಂದ ಹೊರಬಿದ್ದಿದ್ದಾರೆ.

ಬಿಗ್ ಬಾಸ್ ತೆಲುಗು 8 ನವೆಂಬರ್ 9 ರ ಸಂಚಿಕೆಯಲ್ಲಿ ಗಂಗವ್ವ ಎಲಿಮಿನೇಟ್ ಆಗಿ ಹೊರಹೋಗುವುದನ್ನು ತೋರಿಸಿದೆ. ಅಕ್ಟೋಬರ್ 6 ರಂದು ವೈಲ್ಡ್ ಕಾರ್ಡ್ ಆಗಿ ಬಿಗ್ ಬಾಸ್ ತೆಲುಗು ಸೀಸನ್ 8 ಗೆ ಪ್ರವೇಶಿಸಿದ ಗಂಗವ್ವ ಉತ್ತಮ ಪ್ರದರ್ಶನ ನೀಡಿದರು.
ಬಿಗ್ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳಂತೆ ಪ್ರಬಲ ಸ್ಪರ್ಧಿ ಗಂಗವ್ವ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅವರ ಆರೋಗ್ಯ ಪರಿಸ್ಥಿತಿ ಇತ್ತೀಚೆಗೆ ತುಂಬಾ ಹದಗೆಟ್ಟಿತ್ತು.
ಶನಿವಾರದ ಸಂಚಿಕೆಯಲ್ಲಿ ನಿರೂಪಕ ನಾಗಾರ್ಜುನ ಅವರು ಗಂಗವ್ವ ಅವರೊಂದಿಗೆ ಖಾಸಗಿಯಾಗಿ ಮಾತನಾಡಿದರು. ಆಗ ಗಂಗವ್ವ ತನ್ನ ಆರೋಗ್ಯದ ಸಮಸ್ಯೆಯನ್ನು ಹೇಳಿಕೊಂಡಿದ್ದರು.
ಹೀಗೆ ಅನಾರೋಗ್ಯದ ಕಾರಣದಿಂದಾಗಿ ಬಿಗ್ಬಾಸ್ ಮನೆಯಿಂದ ಗಂಗವ್ವ ಹೊರ ಹೋಗಿದ್ದಾರೆ. ಅಕ್ಟೋಬರ್ 6 ರಂದು ಮನೆ ಪ್ರವೇಶಿಸಿದ ಗಂಗವ್ವ ಸುಮಾರು 5 ವಾರಗಳ ಕಾಲ ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಭಾಗವಹಿಸಿದ್ದರು.
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಗಂಗವ್ ಗೆ ರೂ. 3.5 ಲಕ್ಷ ಬಹುಮಾನ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂದರೆ ದಿನಕ್ಕೆ ಸರಿಸುಮಾರು ರೂ. ಗಂಗವ್ವ 50 ಸಾವಿರ ಸಂಭಾವನೆ ಪಡೆದಿದ್ದಾರೆ ಎಂದು ಕೇಳಿ ಬರುತ್ತಿದೆ.
ಐದು ವಾರಗಳ ಕಾಲ ನಡೆದ ಗಂಗವ್ವ ಬಿಗ್ ಬಾಸ್ ತೆಲುಗು 8 ಸೀಸನ್ ರೂ. 17 ಲಕ್ಷ 50 ಸಾವಿರ ಗಳಿಸಿದ್ದಾರೆ. ಇದನ್ನು ನೋಡಿದರೆ ಮನೆಯ ಬಹುತೇಕ ಸ್ಪರ್ಧಿಗಳಿಗೆ ಹೋಲಿಸಿದರೆ ಗಂಗವ್ವ ಉತ್ತಮ ಸಂಪಾದನೆ ಮಾಡಿದ್ದಾರೆ.