ಈ 3 ರಾಶಿಯವರು ಕೈಗೆ ಕೆಂಪು ದಾರ ಕಟ್ಟಿದರೆ ಅದೃಷ್ಟವೇ ನಿಮ್ಮತ್ತ ವಾಲಿದಂತೆ: ಸಾಕ್ಷಾತ್‌ ಬ್ರಹ್ಮ, ವಿಷ್ಣು, ಮಹೇಶ್ವರರ ದೈವಬಲ ಕೈಹಿಡಿದು ನಡೆಸಿದ ಸಮಾನ

Benefits of wearing red thread: ಮರಕ್ಕೆ ಕೆಂಪು ದಾರವನ್ನು ಕಟ್ಟುವ ಆಚರಣೆಯು ಹಿಂದೂ ಸಂಪ್ರದಾಯಗಳಲ್ಲಿ ಮಹತ್ತರವಾದ ಮಹತ್ವವನ್ನು ಹೊಂದಿದೆ. ಕಲ್ವ, ರಾಖಿ, ರಕ್ಷಾಬಂಧನಂ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ದಾರವನ್ನು ಮರಕ್ಕೆ ಕಟ್ಟುವುದರಿಂದ ಆಧ್ಯಾತ್ಮಿಕ ಸಂಬಂಧವಷ್ಟೇ ಅಲ್ಲ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವೂ ತಿಳಿಯುತ್ತದೆ. ನಿಸರ್ಗ ಪ್ರೇಮದ ಜೊತೆಗೆ ಭಕ್ತಿ ಶ್ರದ್ಧೆಯನ್ನು ಹುಟ್ಟಿಸಿ ನೆಮ್ಮದಿಯನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಹಿಂದೂ ಆಚರಣೆಗಳಲ್ಲಿ ಮರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅವುಗಳ ಮುಂದೆ ಮಾಡುವ ಪ್ರಾರ್ಥನೆಯು ನೇರವಾಗಿ ದೇವರನ್ನು ತಲುಪುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಮರಕ್ಕೆ ಕೆಂಪು ದಾರವನ್ನು ಕಟ್ಟಿ ತಮ್ಮ ಮೊರೆಯನ್ನು ಕೇಳುವಂತೆ ದೇವರನ್ನು ಪ್ರಾರ್ಥಿಸುತ್ತಾರೆ.  

2 /7

ಮರಕ್ಕೆ ದಾರವನ್ನು ಕಟ್ಟುವುದು ನಮ್ಮೊಳಗಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎಂಬುದು ನಂಬಿಕೆ. ಇದರ ಜೊತೆಗೆ ಆ ಕೆಂಪು ದಾರವನ್ನು ಕೈಗೆ ಕಟ್ಟುವುದರಿಂದಲೂ ಅಪಾರ ಪ್ರಮಾಣದ ಲಾಭವಿದೆ ಎಂಬುದು ನಿಮಗೆ ತಿಳಿದಿದೆಯೇ? ಇದು ಸಾಕ್ಷಾತ್‌ ತ್ರಿಮೂರ್ತಿಗಳ ದೈವಬಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.  

3 /7

ಹೆಚ್ಚಿನವರ ಕೈಯಲ್ಲಿ ಕೆಂಪು ಅಥವಾ ಕಪ್ಪು ದಾರ ಕಟ್ಟಿರುವುದನ್ನು ನೋಡಿರಬಹುದು. ಇದನ್ನು ಕಟ್ಟಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಇದೆ. ಕೆಂಪು ದಾರವು ಹತ್ತಿಯಿಂದ ಮಾಡಲ್ಪಟ್ಟಿದ್ದು, ಹಿಂದೂ ಧರ್ಮದಲ್ಲಿ ಕೆಂಪು ಬಣ್ಣವನ್ನು ಅತ್ಯಂತ ಪವಿತ್ರ ಬಣ್ಣವೆಂದು ಪೂಜಿಸಲಾಗುತ್ತದೆ.  

4 /7

ಅಷ್ಟೇ ಅಲ್ಲದೆ, ಈ ಕೆಂಪು ದಾರದಲ್ಲಿ ಹಳದಿ ಮತ್ತು ಬಿಳಿ ಬಣ್ಣ ಕೊಂಚ ಮಿಶ್ರಣವಾಗಿರುತ್ತದೆ. ಹೀಗಾಗಿ ಈ ಮೂರು ಬಣ್ಣಗಳ ಸಮಾಗಮವನ್ನು ಬ್ರಹ್ಮ, ವಿಷ್ಣು, ಮಹೇಶ್ವರರೇ ಎಂದು ನಂಬಲಾಗುತ್ತದೆ. ಇನ್ನು ಇದಷ್ಟೇ ಅಲ್ಲದೆ, ಕೆಲವು ವಿಶೇಷ ರಾಶಿಗಳ ಜನರು ಮಾತ್ರ ತಮ್ಮ ಕೈಗೆ ಕೆಂಪು ದಾರವನ್ನು ಕಟ್ಟಬಹುದು. ಅಷ್ಟಕ್ಕೂ ಯಾರು ಕಟ್ಟಬಹುದು? ಯಾರು ಕಟ್ಟಬಾರದು? ಎಂಬ ವಿಚಾರದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.  

5 /7

ಜ್ಯೋತಿಷ್ಯದ ಪ್ರಕಾರ, ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಯವರು ಕೆಂಪು ದಾರವನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಆಂಜನೇಯ ಸ್ವಾಮಿಯ ಕೃಪೆಯೂ ಸಿಗುತ್ತದೆ. ಆದರೆ ಶನಿಯು ಮಕರ ರಾಶಿಯ ಅಧಿಪತಿಯಾಗಿರುವುದರಿಂದ ಈ ರಾಶಿಯವರು ಕೆಂಪು ದಾರ ಕಟ್ಟಬಾರದು. ಶನಿಗೆ ಕೆಂಪು ಬಣ್ಣ ಇಷ್ಟವಾಗುವುದಿಲ್ಲ.  

6 /7

ಕೆಂಪು ದಾರವನ್ನು ಕಟ್ಟಲು ಒಂದಷ್ಟು ನಿಯಮವಿದೆ. ವಿಶೇಷವಾಗಿ ಇದನ್ನು ಮಂಗಳವಾರದಂದು ಮಾತ್ರ ಕೈಗೆ ಧರಿಸಬೇಕು. ಮೀನ ರಾಶಿಯವರು ಕೆಂಪು ದಾರವನ್ನೂ ಧರಿಸಬಾರದು. ಕೆಂಪು ದಾರವು ಲಕ್ಷ್ಮಿ ದೇವಿ, ದುರ್ಗಾ, ಸರಸ್ವತಿ ಮತ್ತು ಬ್ರಹ್ಮ ವಿಷ್ಣು ಮಹೇಶ್ವರನ ಆಶೀರ್ವಾದವನ್ನು ಸಹ ತರುತ್ತದೆ.  

7 /7

ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಪರಿಶೀಲಿಸಿಲ್ಲ.