drinking water: ಮನುಷ್ಯನ ದೇಹದಲ್ಲಿ ಬಹುಪಾಲು ಪ್ರಮಾಣದಲ್ಲಿ ನೀರಿನಂಶವಿದೆ. ಇದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ಬಾಯಾರಿಕೆ, ಸುಸ್ತು, ಉಷ್ಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನೀರನ್ನು ಕುಡಿಯಬೇಕು. ಆದರೆ ದೇಹಕ್ಕೆ ಎಷ್ಟು ಪ್ರಮಾಣದ ಬೇಕು ಎಂಬುದು ನಿಮಗೆ ತಿಳಿದಿದೆಯೇ? ಹೆಚ್ಚಾಗಿ ನೀರು ಕುಡಿದರೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವಿದೆಯೇ? ಈ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮನುಷ್ಯನ ದೇಹದಲ್ಲಿ ಬಹುಪಾಲು ಪ್ರಮಾಣದಲ್ಲಿ ನೀರಿನಂಶವಿದೆ. ಇದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ಬಾಯಾರಿಕೆ, ಸುಸ್ತು, ಉಷ್ಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನೀರನ್ನು ಕುಡಿಯಬೇಕು. ಆದರೆ ದೇಹಕ್ಕೆ ಎಷ್ಟು ಪ್ರಮಾಣದ ಬೇಕು ಎಂಬುದು ನಿಮಗೆ ತಿಳಿದಿದೆಯೇ? ಹೆಚ್ಚಾಗಿ ನೀರು ಕುಡಿದರೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವಿದೆಯೇ? ಈ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈಗ ಬೇಸಿಗೆ ಸಮಯ. ನೀರು ಕುಡಿದಷ್ಟು ಮತ್ತೆ ಮತ್ತೆ ಕುಡಿಯಬೇಕೆನಿಸುತ್ತದೆ. ಅಷ್ಟೇ ಅಲ್ಲದೆ, ಕಡಿಮೆ ನೀರು ಕುಡಿದರೆ ಅದರಿಂದ ತೊಂದರೆಯಾಗುತ್ತದೆ. ಕೆಲವೊಮ್ಮೆ ಹೆಚ್ಚು ಕುಡಿದರೂ ಸಹ ಅದರಿಂದ ತೊಂದರೆಯಾಗುತ್ತದೆ, ಹಾಗಾದರೆ ಏನು ಮಾಡಬೇಕು? ಈ ಬಗ್ಗೆ ನಾವು ಭಾರತದ ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಅವರೊಂದಿಗೆ ಮಾತನಾಡಿದ್ದೇವೆ. ಅವರು ಮಿತಿಗಿಂತ ಹೆಚ್ಚು ನೀರು ಕುಡಿಯುವುದು ಅಪಾಯಕಾರಿ ಎಂದು ಹೇಳಿದ್ದಾರೆ.
ನಿಮಗೆ ಏಕೆ ಬಾಯಾರಿಕೆಯಾಗುತ್ತದೆ ಎಂದು ತಿಳಿದಿದೆಯೇ? ನಮ್ಮ ಮೆದುಳಿನಲ್ಲಿ ಥ್ರಸ್ಟ್ ಸೆಂಟರ್ ಇದೆ. ಇದು ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದನ್ನು ಸೂಚಿಸುತ್ತದೆ. ಪೆಪ್ಟೈಡ್ ಸ್ರವಿಸುವಿಕೆಯು ಥ್ರಸ್ಟ್ ಸೆಂಟರ್ಗೆ ಸಂಕೇತವನ್ನು ನೀಡಿದಾಗ ನಾವು ನೀರು ಕುಡಿಯುತ್ತೇವೆ.
ಬಾಯಾರಿಕೆಯಾದಾಗ ನೀರು ಕುಡಿಯುವುದು ಸಹಜ. ಆದರೆ ನೀವು ಬಾಯಾರಿಕೆ ಇಲ್ಲದ ಸಂದರ್ಭದಲ್ಲಿ ಸುಖಾಸುಮ್ಮನೆ ನೀರು ಕುಡಿಯುತ್ತಿದ್ದರೆ ಈ ಅಭ್ಯಾಸವನ್ನು ಸೈಕೋಜೆನಿಕ್ ಪಾಲಿಡಿಪ್ಸಿಯಾ ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿ ದ್ರವದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೆಚ್ಚು ನೀರು ಕುಡಿದರೆ ದೇಹದಲ್ಲಿ ಸೋಡಿಯಂ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಜೀವಕೋಶಗಳಲ್ಲಿ ನೀರಿನ ಪ್ರಮಾಣವು ಹೆಚ್ಚಾಗುತ್ತದೆ. ಇದನ್ನು ಹೈಪೋನಾಟ್ರೀಮಿಯಾ ಎಂದು ಕರೆಯಲಾಗುತ್ತದೆ. ಇದು ವಿಶೇಷವಾಗಿ ಮೆದುಳಿಗೆ ಹಾನಿ ಮಾಡುತ್ತದೆ.
ತಲೆನೋವು, ಸುಸ್ತು, ನಿಶಕ್ತಿ, ವಾಕರಿಕೆ, ವಾಂತಿ, ಕಡಿಮೆ ರಕ್ತದೊತ್ತಡ, ಸ್ನಾಯು ಸೆಳೆತ, ಅಶಾಂತಿ, ಕೋಪಗೊಳ್ಳುವುದು, ಇನ್ನೂ ಕೆಲವು ಪರಿಸ್ಥಿತಿಗಳಲ್ಲಿ ಕೋಮಾಗೆ ಹೋಗಿರುವ ಘಟನೆಯೂ ಉಂಟು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)