ಮೇ ತಿಂಗಳಲ್ಲಿ ಇಷ್ಟು ದಿನ ರಜೆ ಇರಲಿದೆ..! ಬ್ಯಾಂಕ್ ಕೆಲಸಗಳಿದ್ದರೆ ಬೇಗ ಪೂರೈಸಿಕೊಳ್ಳಿ

ಬ್ಯಾಂಕ್ ರಜಾದಿನವನ್ನು ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಅಂದರೆ ಮೇ 8 ಮತ್ತು 22 ರಂದು ಕೂಡಾ ಬ್ಯಾಂಕ್ ಮುಚ್ಚಿರುತ್ತವೆ. ಈ ದಿನಗಳಲ್ಲಿ ಕೂಡಾ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ. 

ನವದೆಹಲಿ : ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಗತ್ಯವಾದ ಸೇವೆಗಳನ್ನು ಹೊರತುಪಡಿಸಿ, ಇತರ ಸೇವೆಗಳನ್ನು ಬಂದ್ ಮಾಡಲಾಗಿದೆ.  ಅಗತ್ಯ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ಸೇರಿಸಲಾಗಿದೆ. ಹಾಗಾಗಿ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಆದರೆ ಮೇ ತಿಂಗಳಲ್ಲಿ ಬ್ಯಾಂಕುಗಳು ಹಲವು ದಿನಗಳವರೆಗೆ ಬಂದ್ ಇರುತ್ತದೆ. ನಿಮಗೆ ಬ್ಯಾಂಕ್‌ ಗೆ ಸಂಬಂಧಪಟ್ಟ ಕೆಲಸಗಳಿದ್ದರೆ ಕೂಡಳೆ ಮುಗಿಸಿಕೊಳ್ಳಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇ ತಿಂಗಳಲ್ಲಿ ಒಟ್ಟು 12 ದಿನಗಳವರೆಗೆ ಬ್ಯಾಂಕಿಗೆ ರಜೆ ಇರಲಿದೆ. ಮೇ 1 ರಂದು ಕಾರ್ಮಿಕರ ದಿನ . ಈ ದಿನ ಬ್ಯಾಂಕುಗಳಿಗೆ ರಜೆ ಇರಲಿದೆ.   ಇನ್ನು ಮೇ 2 ಭಾನುವಾರ . ಭಾನುವಾರ ಎಂದಿನಂತೆ ಬ್ಯಾಂಕ್ ಮುಚ್ಚಿರುತ್ತದೆ. 

2 /4

 ಆರ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 5 ದಿನಗಳವರೆಗೆ ಬ್ಯಾಂಕ್ ರಜೆ ಇರಲಿದೆ. ಆದಾಗ್ಯೂ, ಆರ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯಲ್ಲಿ, ಕೆಲವು ರಜಾದಿನಗಳು ಸ್ಥಳೀಯ ರಾಜ್ಯ ಮಟ್ಟದಲ್ಲಿ ಮಾತ್ರ ಇರಲಿದೆ. ಎಲ್ಲಾ ರಾಜ್ಯಗಳಲ್ಲು ಎಲ್ಲಾ ಹಬ್ಬಗಳನ್ನು ಆಚರಿಸದ ಕಾರಣ ಎಲ್ಲಾ ರಾಜ್ಯಗಳಲ್ಲಿ 5 ದಿನಗಳ ರಜೆ ಇರುವುದಿಲ್ಲ.   

3 /4

ಬ್ಯಾಂಕ್ ರಜಾದಿನವನ್ನು ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮೇ 8 ಮತ್ತು 22 ರಂದು ಬೀಳುತ್ತಿವೆ. ಈ ದಿನ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ. ಇದಲ್ಲದೆ, ಮೇ 2, 9, 16, 23 ಮತ್ತು 30 ರಂದು ಭಾನುವಾರದ ರಜಾದಿನಗಳಿವೆ.  

4 /4

ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕುಗಳ ಸಂಘಟನೆಯಾದ ಭಾರತೀಯ ಬ್ಯಾಂಕುಗಳ ಸಂಘ (IBM) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಬ್ಯಾಂಕ್ ತೆರೆಯಲು ಸೂಚಿಸಿದೆ. ಅಂದರೆ, ಈಗ ಸಾರ್ವಜನಿಕರ ಕೆಲಸಕ್ಕಾಗಿ ಬ್ಯಾಂಕುಗಳು ಕೇವಲ 4 ಗಂಟೆಗಳ ಕಾಲ ತೆರೆದಿರುತ್ತದೆ. ಈ ನಿಟ್ಟಿನಲ್ಲಿ, ಐಬಿಎ ಎಲ್ಲಾ ರಾಜ್ಯ ಮಟ್ಟದ ಬ್ಯಾಂಕಿಂಗ್ ಕಮಿಟಿಗಳು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಳಿದೆ. ಕರೋನಾದ ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಈ ವ್ಯವಸ್ಥೆಯು ಜಾರಿಯಲ್ಲಿರುತ್ತದೆ.