Tea and Coffe health : ಹೆಚ್ಚಿನ ಜನರು ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ, ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬನ್ನಿ ಚಹಾ ಮತ್ತು ಕಾಫಿ ಯಕೃತ್ತಿನ ಮೇಲೆ ಹೇಗೆ ನೇರ ಪರಿಣಾಮ ಬೀರುತ್ತದೆ ಅಂತ ತಿಳಿಯೋಣ..
ಬೆಳ್ಳಿಗೆ ಆದ್ರೆ ಸಾಕು ಹೆಚ್ಚಿನ ಜನರು ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ, ಚಹಾ ಅಥವಾ ಕಾಫಿಯ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ ಅಂತ ತಜ್ಞರು ಹೇಳುತ್ತಾರೆ.
ಟೀ ಮತ್ತು ಕಾಫಿ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ. ಸಾಮಾನ್ಯವಾಗಿ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ ಎನ್ನುತ್ತಾರೆ ತಜ್ಞರು.
ಚಹಾ ಮತ್ತು ಕಾಫಿ ಯಕೃತ್ತಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಲಿವರ್ ವೈಫಲ್ಯವು ಹೆಚ್ಚು ಸಾಧ್ಯತೆ ಇರುತ್ತದೆ. ಹೆಚ್ಚು ಟೀ ಅಥವಾ ಕಾಫಿ ಕುಡಿಯುವುದರಿಂದ ಲಿವರ್ ಟಾಕ್ಸಿನ್‌ಗಳ ಹೆಚ್ಚಳಕ್ಕೆ ಕಾರಣವಾಗಬಹುದು.
ಟಾಕ್ಸಿನ್ ಯಕೃತ್ತಿನ ಉರಿಯೂತವನ್ನು ಉಂಟುಮಾಡುತ್ತದೆ. ಚಹಾಕ್ಕಿಂತ ಕಾಫಿ ಹೆಚ್ಚು ಹಾನಿಕಾರಕವಾಗಿದೆ. ಮಸಾಲಾ ಟೀ ಕುಡಿಯುವುದು ಕೂಡ ಒಳ್ಳೆಯದಲ್ಲ.
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ನಿಮ್ಮ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದನ್ನು ತಪ್ಪಿಸಿ. ರಾತ್ರಿಯೂ ಸಹ ಚಹಾ ಕುಡಿಯಬೇಡಿ.