ಯುವಾವಸ್ಥೆಯಲ್ಲಿ ಗುರು-ಶುಕ್ರರ ನಡೆ ಆರಂಭ, 4 ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!

Bruhaspati-Shukra Gochar 2023: ಪ್ರಸ್ತುತ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಪ್ರಮುಖ ಗ್ರಹಗಳಾಗಿರುವ ದೇವಗುರು ಬೃಹಸ್ಪತಿ ಹಾಗೂ ಶುಕ್ರರ ಯುವಾವಸ್ಥೆಯ ನಡೆ ಆರಂಭಗೊಂಡಿದೆ. ಅವರಿಬ್ಬರ ಈ ನಡೆ ಒಟ್ಟು ನಾಲ್ಕು ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದ್ದು, ಸ್ಥಳೀಯರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿಯಾಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 
 

Guru-Shukra Gochar 2023: ಗ್ರಹಗಳ ರಾಶಿ ಪರಿವರ್ತನೆಯ ರೀತಿಯಲ್ಲಿಯೇ ವಿವಿಧ ಗ್ರಹಗಳು ಕಾಲಕಾಲಕ್ಕೆ ತಮ್ಮ ಅವಸ್ಥೆಯನ್ನು ಬದಲಾಯಿಸುತ್ತಿರುತ್ತವೆ. ಈ ಗ್ರಹಗಳು ಒಮ್ಮೆ ತಮ್ಮ ಕುಮಾರಾವಸ್ಥೆಯಲ್ಲಿ ಸಂಚಾರ ನಡೆಸಿದರೆ, ಮತ್ತೊಮ್ಮೆ ಯುವಾವಸ್ಥೆ ಮತ್ತು ಮಗದೊಮ್ಮೆ ತನ್ನ ವೃದ್ಧಾವಸ್ಥೆಯಲ್ಲಿ ಸಂಚಾರ ನಡೆಸುತ್ತವೆ. ಸಾಮಾನ್ಯವಾಗಿ ಯುವಾವಸ್ಥೆಯಲ್ಲಿರುವ ಗ್ರಹಗಳು ಅತ್ಯಂತ ವೇಗವಾಗಿ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತವೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಪ್ರಸ್ತುತ ದೇವಗುರು ಬೃಹಸ್ಪತಿ ಹಾಗೂ ಶುಕ್ರರು ತನ್ನ ಯುವಾವಸ್ಥೆಯನ್ನು ಪ್ರವೇಶಿಸಿವೆ ಎನ್ನಲಾಗಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ, ವಿಶೇಷವಾಗಿ 4 ರಾಶಿಗಳ ಜಾತಕದವರಿಗೆ ಗ್ರಹಗಳ ಯುವಾಸ್ಥೆಯ ಸಂಚಾರ ಅಪಾರ ಮತ್ತು ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗವನ್ನು ರೂಪಿಸುತ್ತಿದೆ. ಬನ್ನಿ ಆ 4 ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-Holi 2023 ಬಳಿಕ ಗಜಕೇಸರಿ ಯೋಗ ನಿರ್ಮಾಣ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಪ್ರತಿ ಕಾರ್ಯದಲ್ಲೂ ಯಶಸ್ಸು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ವೃಷಭ ರಾಶಿ- ಯುವಾವಸ್ಥೆಯ ಗುರು ಮತ್ತು ಶುಕ್ರರ ಭೇಟಿ ನಿಮಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಗುರು ಮತ್ತು ಶುಕ್ರರು ಶುಭ ಸ್ಥಾನಗಳಲ್ಲಿ ವಿರಾಜಮಾನರಾಗಿದ್ದಾರೆ. ಹೀಗಾಗಿ ಈ ಸಮಯದಲ್ಲಿ ನಿಮಗೆ ಎಲ್ಲಾ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಗಲಿದೆ. ವ್ಯಾಪಾರ ಅಥವಾ ಕೆಲಸ-ವ್ಯವಹಾರಗಳು ವಿದೇಶಗಳಿಗೆ ಸಂಬಂಧಿಸಿದ ಜನರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ಎಲ್ಲಾ  ಇಷ್ಟಾರ್ಥಗಳು ಈಡೇರಲಿವೆ. ಹಳೆಯ ಹೂಡಿಕೆಯಿಂದಲೂ ಲಾಭವಾಗಲಿದೆ.  

2 /4

ಕರ್ಕ ರಾಶಿ- ಯುವಾವಸ್ಥೆಯಲ್ಲಿ ಗುರು-ಶುಕ್ರರ ಭ್ರಮಣ ಕರ್ಕ ರಾಶಿಯವರಿಗೆ ಅಪಾರ ವಿತ್ತೀಯ ಲಾಭ ನೀಡಲಿದೆ. ಏಕೆಂದರೆ ಗುರು ಮತ್ತು ಶುಕ್ರರು ನಿಮ್ಮ ರಾಶಿಯಿಂದ ನವಮೇಶ ಭಾವದಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ ನೀವು ಈ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇದರೊಂದಿಗೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಮತ್ತು ಮಾಲವ್ಯ ರಾಜಯೋಗಗಳೂ ಕೂಡ ರೂಪುಗೊಳ್ಳುತ್ತಿವೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಇದರೊಂದಿಗೆ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವರ ಸಮಸ್ಯೆ ನಿವಾರಣೆಯಾಗಲಿದೆ. ಈ ಸಮಯದಲ್ಲಿ ನೀವು ವಿದೇಶ ಪ್ರವಾಸವನ್ನೂ ಮಾಡಬಹುದು.  

3 /4

ಧನು ರಾಶಿ- ಯುವಾವಸ್ಥೆಯಲ್ಲಿ ಗುರು ಶುಕ್ರರ ಸಂಚಾರ ನಿಮ್ಮ ಪಾಲಿಗೂ ಕೂಡ ಸಾಕಷ್ಟು ಅನುಕೂಲಕರವಾಗಿದೆ. ಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಮಾಲವ್ಯ ಮತ್ತು ಹಂಸ ಎಂಬ ರಾಜಯೋಗಗಳು ಕೂಡ ರೂಪುಗೊಳ್ಳುತ್ತಿವೆ. ಹೀಗಾಗಿ ನೀವು ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇದರೊಂದಿಗೆ ನೀವು ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತೀರಿ. ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ನಿಮಗೆ ಭಾರಿ ಘನತೆ-ಗೌರವ ಪ್ರಾಪ್ತಿಯಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.  

4 /4

ಮೀನ ರಾಶಿ- ಯುವಾವಸ್ಥೆಯಲ್ಲಿನ ಬೃಹಸ್ಪತಿ-ಶುಕ್ರರ ನಡೆ ನಿಮ್ಮ ಪಾಲಿಗೂ ಕೂಡ ಒಳ್ಳೆಯ ಸುದ್ದಿಗಳನ್ನು ತರಲಿದೆ. ಏಕೆಂದರೆ ಗುರು ಗ್ರಹವು ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಎಂಬ ರಾಜಯೋಗವನ್ನು ಸೃಷ್ಟಿಸಿದೆ. ಮತ್ತೊಂದೆಡೆ, ಶುಕ್ರ ಗ್ರಹವು ನಿಮ್ಮ ಸಂಕ್ರಮಣ ಜಾತಕದಲ್ಲಿ ಮಾಲವ್ಯ ರಾಜಯೋಗವನ್ನು ಸಹ ಸೃಷ್ಟಿಸಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿಯನ್ನು ಹೆಚ್ಚಾಗಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ಅವರ ಆದಾಯ ಕೂಡ  ಹೆಚ್ಚಾಗಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)