ಆತಿಯಾ ಶೆಟ್ಟಿ ಬೋಲ್ಡ್ ಪೋಟೋ ನೋಡಿ ರೊಮ್ಯಾಂಟಿಕ್ ಕಾಮೆಂಟ್ ಮಾಡಿದ ಕೆ ಎಲ್ ರಾಹುಲ್..!

ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಅವರ ಪುತ್ರಿ ಆತಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಅವರ ಸಂಬಂಧದ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿರುತ್ತವೆ. 

ನವದೆಹಲಿ: ಬಾಲಿವುಡ್ ತಾರೆ ಸುನಿಲ್ ಶೆಟ್ಟಿ (Sunil Shetty) ಅವರ ಪುತ್ರಿ ಆತಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (KL Rahul) ಅವರ ಸಂಬಂಧದ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿರುತ್ತವೆ.  ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಬಹಳಷ್ಟು ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಇಬ್ಬರೂ ಪರಸ್ಪರರ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಕಾಮೆಂಟ್ ಮಾಡುವುದನ್ನು ಕೂಡಾ ಮರೆಯುವುದಿಲ್ಲ.  ಇತ್ತೀಚೆಗೆ ಕೆ.ಎಲ್.ರಾಹುಲ್ ಸನ್ನೆಗಳಲ್ಲೇ ಆತಿಯಾ ಶೆಟ್ಟಿಗೆ ತಮ್ಮ ಹೃದಯದ ಮಾತನ್ನೂ ಕೂಡಾ ಹೇಳಿದ್ದರು. 
 

1 /6

ಇತ್ತೀಚೆಗೆ ಆತಿಯಾ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು.  ಈ ಫೋಟೋದಲ್ಲಿ ಆತಿಯಾ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಆತಿಯಾ ಥೈ ಸ್ಲಿಟ್ ಉಡುಪನ್ನು ಧರಿಸಿದ್ದು ಮೋಹಕವಾಗಿ ಕಂಗೊಳಿಸುತ್ತಿದ್ದಾರೆ.  

2 /6

ಆತಿಯಾ ಈ ಫೋಟೋಗೆ ಕೆ ಎಲ್ ರಾಹುಲ್ ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಕೆ ಎಲ್ ರಾಹುಲ್ ಇಮೋಜಿಯನ್ನು ಬಳಸಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.   

3 /6

ಇತ್ತೀಚೆಗಷ್ಟೇ ಆತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಡಿನ್ನರ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಇಬ್ಬರೂ ತಮ್ಮ ಸ್ನೇಹಿತರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.  ರಾಬಿನ್ ಉತ್ತಪ್ಪ ಅವರ ಪತ್ನಿಶೀತಲ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.  

4 /6

ಆತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಇನ್ಸ್ಟಾಗ್ರಾಮ್ ನಲ್ಲಿ ಪರಸ್ಪರರ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿರುತ್ತಾರೆ.

5 /6

ಕೆ ಎಲ್ ರಾಹುಲ್ ಜನ್ಮದಿನದಂದು ಆತಿಯಾ ರಾಹುಲ್ ಗೆ ಶುಭಕೋರುವುದರೊಂದಿಗೆ my person ಎಂದು ಕೂಡಾ ಬರೆದಿದ್ದರು. ಈ ಮೂಲಕ ಅವರಿಬ್ಬರ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದ್ದರು.

6 /6

ಇನ್ನು ಆತಿಯಾ ಜನ್ಮದಿನದಂದು ರಾಹುಲ್ ಕೂಡಾ ಆತಿಯಾಗೆ ವಿಶ್ ಮಾಡಿದ್ದರು. ಈ ವೇಳೆ ರಾಹುಲ್ ಮತ್ತು ಆತಿಯಾ ಜೊತೆಗಿರುವ ಫೋಟೋವೊಂದನ್ನು ಕೂಡಾ ಶೇರ್ ಮಾಡಿದ್ದರು.