ಅತಿಯಾದ ಸೋಮಾರಿಗಳಾಗಿರುತ್ತಾರೆ ಈ ರಾಶಿಯವರು.!

ವ್ಯಕ್ತಿಯು ಜನಿಸಿದ ಗ್ರಹ-ನಕ್ಷತ್ರಗಳ ಪ್ರಕಾರ, ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸಲಾಗುತ್ತದೆ. ಕೆಲವು ರಾಶಿಯಲ್ಲಿ ಜನಿಸಿದವರು ವಿಪರಿತ ಸೋಮಾರಿಗಳಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ.  

ಬೆಂಗಳೂರು : ಸೋಮಾರಿತನವು  ವ್ಯಕ್ತಿಯ ಕೆಟ್ಟ ಶತ್ರು. ಮನುಷ್ಯನಾದವನಿಗೆ  ವಿಶ್ರಾಂತಿ ಬೇಕು. ಆದರೆ ವಿಶ್ರಾಂತಿಯೇ ಒಂದು ರೀತಿಯ ಚಟವಾಗಿ ಹೋಗಬಾರದು. ಮಿತಿ ಮೀರಿದ ವಿಶ್ರಾಂತಿ ಪಡೆಯುವವರು ಸೋಮಾರಿತನದ ವರ್ಗಕ್ಕೆ ಸೇರುತ್ತಾರೆ. ವ್ಯಕ್ತಿಯು ಜನಿಸಿದ ಗ್ರಹ-ನಕ್ಷತ್ರಗಳ ಪ್ರಕಾರ, ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸಲಾಗುತ್ತದೆ. ಕೆಲವು ರಾಶಿಯಲ್ಲಿ ಜನಿಸಿದವರು ವಿಪರಿತ ಸೋಮಾರಿಗಳಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಧನು ರಾಶಿಯವರು ತಿರುಗಾಡುವ ವಿಚಾರದಲ್ಲಿ ಬಹಳ  ಸೋಮಾರಿಗಳಾಗಿರುತ್ತಾರೆ.  ಪದೇ ಪದೇ ಎದ್ದು ನಡೆಯುವುದು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಸಡಾ ಕುಳಿತುಕೊಂಡು ಆರಾಮ ಮಾಡುವುದೆಂದರೆ ಇವರಿಗೆ ಬಹಳ ಇಷ್ಟ. ಧನು ರಾಶಿಯವರು ಎಷ್ಟು ಸೋಮಾರಿಗಳೆಂದರೆ ತಿನ್ನಲು ಎದ್ದೇಳುವುದು ಕೂಡಾ ಅವರಿಗೆ  ಇಷ್ಟವಾಗುವುದಿಲ್ಲ. 

2 /4

ಮೀನ ರಾಶಿಯವರು ಸಂಪೂರ್ಣವಾಗಿ ಸೋಮಾರಿಗಳಾಗಿರುವುದಿಲ್ಲ. ಅವರ ಸೋಮಾರಿತನವು ಸಮಯ ಮತ್ತು ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅವರ ಮೂಡ್ ಸರಿಯಾಗಿದ್ದರೆ ಎಲ್ಲಾ ಕೆಲಸಗಳನ್ನೂ ಖುಷಿಯಿಂದ ಮಾಡುತ್ತಾರೆ. ಆದರೆ ಮೂಡ್ ಸರಿಯಿಲ್ಲದಿದ್ದರೆ ಸ್ವಲ್ಪ ಓಡಾಟವನ್ನು  ಕೂಡಾ ಅವರು ಸಹಿಸುವುದಿಲ್ಲ. 

3 /4

ಕುಂಭ ರಾಶಿಯವರು ಯಾವುದೇ ಕೆಲಸವನ್ನು ಮತ್ತೆ ಮತ್ತೆ ಮಾಡಲು ಇಷ್ಟಪಡುವುದಿಲ್ಲ.  ಈ ರಾಶಿಯವರು ಹೆಚ್ಚು ಕಷ್ಟಕರವಾದ ವೃತ್ತಿಯನ್ನು ಆರಿಸಿಕೊಳ್ಳುವುದರಿಂದ ದೂರ ಉಳಿಯುತ್ತಾರೆ. ಇವರಿಗೆ ಏನೇ ಕೆಲಸ ಆಗಬೇಕಾದರೂ ಬಹಲ್ ಸುಲಭವಾಗಿ ಆಗಬೇಕು. ಸುಲಭವಾದ ಕೆಲಸಗಳನ್ನು ಮಾಡಲು ಮಾತ್ರ ಅವರು ಇಷ್ಟಪಡುತ್ತಾರೆ. ಆದರೂ ಈ ರಾಶಿಯವರಿಗೆ ಏನಾದರೂ ಜವಾಬ್ದಾರಿ ಕೊಟ್ಟರೆ ಅದರಿಂದ ಹಿಂದೆ ಸರಿಯುವುದಿಲ್ಲ. 

4 /4

ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯಲು ಇಷ್ಟಪಡುತ್ತಾರೆ. ಶೀಘ್ರದಲ್ಲೇ ಜನಪ್ರಿಯರಾಗಲು ಬಯಸುತ್ತಾರೆ. ನೃತ್ಯ ಮತ್ತು ಹಾಡುಗಳಂತಹ ಸೃಜನಶೀಲ ಕೆಲಸಗಳಲ್ಲಿ ಅವರಿಗೆ ಆಸಕ್ತಿ ಹೆಚ್ಚು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಕಠಿಣ ಪರಿಶ್ರಮದಿಂದ ದೂರ ಓಡುತ್ತಾರೆ. ಸಿಂಹ ರಾಶಿಯವರು ಒತ್ತಡಕ್ಕೆ ಒಳಗಾಗುತ್ತಾರೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)