Mahashivratri 2024: ಶಿವನಿಗೆ ಸಂಬಂಧಿಸಿದ ಈ ಸಂಗತಿಗಳು ಕನಸಿನಲ್ಲಿ ಕಂಡರೆ, ಜೀವನವೇ ಧನ್ಯ!

Dream Interpretation: ಮಲಗಿದಾಗ ಕನಸುಗಳು ಬೀಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಸ್ವಪ್ನ ಶಾಸ್ತ್ರದಲ್ಲಿ (Dream Science) ನಾವು ಕನಸಿನಲ್ಲಿ ಕಾಣುವ ಎಲ್ಲಾ ಸಂಗತಿಗಳ ಅರ್ಥವನ್ನು ವರ್ಣಿಸಲಾಗಿದೆ.  (Spiritual News In Kannada)

Dream Interpretation: ಮಲಗಿದಾಗ ಕನಸುಗಳು ಬೀಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಸ್ವಪ್ನ ಶಾಸ್ತ್ರದಲ್ಲಿ (Dream Science) ನಾವು ಕನಸಿನಲ್ಲಿ ಕಾಣುವ ಎಲ್ಲಾ ಸಂಗತಿಗಳ ಅರ್ಥವನ್ನು ವರ್ಣಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶಾದ್ಯಂತ ಮಹಾಶಿವರಾತ್ರಿ ಹಬ್ಬ ಆಚರಿಸಲಾಗುವುದು. ಹೀಗಿರುವಾಗ, ಕನಸಿನಲ್ಲಿ ಶಿವನಿಗೆ ಸಂಬಂಧಿಸಿದ ವಸ್ತುಗಳು (Dreaming Of Things Related To Lord Shiva) ಕಂಡರೆ ಅದರ ಅರ್ಥ ಏನು? ಪ್ರತಿ ವರ್ಷ ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿ (Mahashivratri 2024) ಹಬ್ಬವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದಕ್ಕೂ ಮುನ್ನ ನಿಮ್ಮ ಕನಸಿನಲ್ಲಿ ಶಿವನಿಗೆ ಸಂಬಂಧಿಸಿದ ಸಂಗತಿಗಳನ್ನು ನೀವು ನಿಮ್ಮ ಕನಸಿನಲ್ಲಿ ಕಂಡರೆ, ಅದರ ಅರ್ಥ ಏನು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-Mahashivratri 2024: ಈ ಬಾರಿಯ ಶಿವರಾತ್ರಿಯಲ್ಲಿ ಈ ಜನರಿಗೆ ಅಷ್ಟೈಶ್ವರ್ಯ ಕರುಣಿಸಲಿದ್ದಾನೆ ಶಿವ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

1. ಕನಸಿನಲ್ಲಿ ರುದ್ರಾಕ್ಷಿ ಕಂಡ್ರೆ ಏನರ್ಥ: ಕನಸಿನಲ್ಲಿ ರುದ್ರಾಕ್ಷಿ ಕಾಣುವುದು ಒಂದು ಶುಭ ಸಂಕೇತವಾಗಿದೆ. ಇದರರ್ಥ ಯಾವುದೇ ದೀರ್ಘಕಾಲದ ಕಾಯಿಲೆಯಿಂದ ನಿಮಗೆ ಮುಕ್ತಿ ಸಿಗಲಿದೆ ಮತ್ತು ನೀವು ಬೇಗನೆ ಗುಣಮುಖರಾಗುವಿರಿ ಎಂದರ್ಥ. ಇದಲ್ಲದೆ, ಕೆಲಸದಲ್ಲಿ ಬರುವ ಅಡೆತಡೆಗಳು ಮತ್ತು ಸಮಸ್ಯೆಗಳು ಕೂಡ ದೂರಾಗುತ್ತವೆ ಮತ್ತು ನೀವು ಸಾಕಷ್ಟು ಯಶಸ್ಸನ್ನು ಸಾಧಿಸುವಿರಿ ಎಂದರ್ಥ.  

2 /6

2. ಶಿವಲಿಂಗದ ಅಭಿಷೇಕ ಕಂಡರೆ ಏನರ್ಥ? : ಕನಸಿನಲ್ಲಿ ಶಿವಲಿಂಗದ ಅಭಿಷೇಕ ಕಂಡರೆ ಅದೂ ಕೂಡ ಶುಭ ಸಂಕೇತವಾಗಿದೆ.  ಇದರರ್ಥ ಜೀವನದಲ್ಲಿ ಸಾಕಷ್ಟು ಸುಖ ಸಂತೋಷ ನಿಮ್ಮ ಕದ ತಟ್ಟಲಿದೆ ಎಂದರ್ಥ. ಇದಲ್ಲದೆ, ಯಾವುದಾದರೂ ದೀರ್ಘಕಾಲದ ಸಮಸ್ಯೆ ಎದುರಿಸುತ್ತಿದ್ದರೆ, ಅದರಿಂದ ನಿಮಗೆ ಶೀಘ್ರದಲ್ಲಿಯೇ ಮುಕ್ತಿಸಿಗಲಿದೆ ಎಂದರ್ಥ.   

3 /6

3. ನಂದಿ ಎತ್ತು ಕಂಡರೆ ಏನರ್ಥ?: ಕನಸಿನಲ್ಲಿ ಗೂಳಿ ಅಥವಾ ಶಿವನ ವಾಹನ ನಂದಿ ಕಾಣುತ್ತಿದ್ದು ಮತ್ತು ಶಿವ ಅದರ ಮೇಲೆ ಸವಾರಿ ಮಾಡುತ್ತಿದ್ದರೆ. ನಿಮ್ಮ ಜೀವನದಲ್ಲಿ ಯಾವುದಾದರೊಂದು ಒಳ್ಳೆಯ ಘಟನೆ ಸಂಭವಿಸಲಿದೆ ಎಂದರ್ಥ. ಸ್ವಪ್ನ ಶಾಸ್ತ್ರದ ಪ್ರಕಾರ ಶಿವನ ಕೃಪೆಯಿಂದ ನೀವು ಶೀಘ್ರದಲ್ಲೇ ಅಪಾರ ಯಶಸ್ಸನ್ನು ಪಡೆಯುವಿರಿ ಎಂದರ್ಥವಾಗುತ್ತದೆ (Mahashivratri 2024).   

4 /6

4. ಬೆಲ್ಪತ್ರಿ ಕಂಡರೆ ಏನರ್ಥ?: ಕನಸಿನಲ್ಲಿ ನಿಮಗೆ ಒಂದು ವೇಳೆ ಶಿವನಿಗೆ ಅತ್ಯಂತ್ರ ಪ್ರಿಯವಾದ ಬೆಲ್ಪತ್ರಿ ಕಂಡರೆ. ಶೀಗ್ರದಲ್ಲೇ ನಿಮ್ಮ ಹಣಕಾಸಿನ ಮುಗ್ಗಟ್ಟು ದೂರಾಗಲಿದೆ ಎಂಬುದನ್ನು ಅದು ಸೂಚಿಸುತ್ತದೆ.  ಇದಲ್ಲದೆ, ಸಿಲುಕಿಬಿದ್ದ ಹಣ ನಿಮ್ಮತ್ತ ಮರಳಲಿದೆ ಎಂಬುದು ಅದರ ಅರ್ಥವಾಗುತ್ತದೆ. ಇದಲ್ಲದೆ, ನಿಮ್ಮ ಜೀವನದಲ್ಲಿ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ ಎನ್ನಲಾಗುತ್ತದೆ.  

5 /6

5. ಶಿವಲಿಂಗ ಕಂಡರೆ ಏನರ್ಥ?: ಕನಸಿನಲ್ಲಿ ಶಿವಲಿಂಗ ಕಾಣುವುದು ಅಂತ್ಯಂತ ಶುಭ ಸಂಕೇತವಾಗಿದೆ. ಶಿವಲಿಂಗವನ್ನು ಶಿವನ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಶಿವಲಿಂಗ ಕಂಡರೆ ನಿಮ್ಮ ನೌಕರಿಯಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ ಮತ್ತು ನಿಮಗೆ ಬಡ್ತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ ಎಂದರ್ಥ.  

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)