16 ಪತ್ನಿಯರು 151 ಮಕ್ಕಳಿರುವ ಈ ವ್ಯಕ್ತಿ 17ನೇ ಮದುವೆಯ ಸಿದ್ದತೆಯಲ್ಲಿದ್ದಾನೆ..!

ಜಿಂಬಾಬ್ವೆಯಲ್ಲಿ ವ್ಯಕ್ತಿಯೊಬ್ಬ 16 ಮದುವೆಯಾಗಿದ್ದಾನೆ. 16 ಮದುವೆಯಲ್ಲಿ 151 ಮಕ್ಕಳಿದ್ದಾರೆ.

ನವದೆಹಲಿ : ನಮ್ಮ ಸುತ್ತಮುತ್ತ ಅನೇಕ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದು ಒಮ್ಮಿಂದೊಮ್ಮೆಲೇ ಗೊತ್ತಾಗುವ ವೆಳೆಗೆ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ಭಾರತೀಯ ಸಂಸ್ಕೃತಿಯ ಪ್ರಕಾರ, ಯಾವುದೇ ವ್ಯಕ್ತಿ ಒಂದು ಮದುವೆಯಾಗಬಹುದು. ಎರಡನೇ ಮದುವೆಯಾಗಬೇಕಾದರೆ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದುಕೊಂಡು ಆಗಬೇಕಾಗುತ್ತದೆ. ಆದರೆ ಕೆಲ ದೇಶಗಳಲ್ಲಿ ಇಂಥಹ ನಿರ್ಬಂಧಗಳಿಲ್ಲ. ಇಂಥದ್ದೇ ಒಂದು ಪ್ರಕರಣ  ಇದೀಗ ಬೆಳಕಿಗೆ ಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಜಿಂಬಾಬ್ವೆಯಲ್ಲಿ ವ್ಯಕ್ತಿಯೊಬ್ಬ 16 ಮದುವೆಯಾಗಿದ್ದಾನೆ. 16 ಮದುವೆಯಲ್ಲಿ 151 ಮಕ್ಕಳಿದ್ದಾರೆ. ಆದರೆ ಈ ವ್ಯಕ್ತಿ ಇನ್ನೂ ಹೆಚ್ಚು ಮಕ್ಕಳನ್ನು ಹೊಂದುವ ಬಯಕೆಯಲ್ಲಿದ್ದಾನೆ.   

2 /4

ಈ ವ್ಯಕ್ತಿ ವಿಚಿತ್ರ ನಂಬಿಕೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಮಿಶೆಕ್ ನ್ಯಾನ್ ದೋರ್ ಎಂಬ ಹೆಸರಿನ ಈ ವ್ಯಕ್ತಿಯ, ಪ್ರಕಾರ ಇವರ ಜೀವನದ ಉದ್ದೇಶವೇ ತನ್ನ ಪತ್ನಿಯರನ್ನು ಸಂತೋಷದಿಂದ ನೋಡಿಕೊಳ್ಳುವುದಂತೆ.    

3 /4

66 ವರ್ಷದ ಈ ವ್ಯಕ್ತಿ ಇನ್ನೂ ಸಣ್ಣ ವಯಸ್ಸಿನ ಯುವತಿಯರನ್ನು ಮದುವೆಯಾಗುವ ಇಚ್ಛೆಯಲ್ಲಿದ್ದಾರೆ. ಪ್ರಸ್ತುತ ಇರುವ ಪತ್ನಿಯರು, ಈಗಾಗಲೇ ಬಹಳಷ್ಟು ಮಕ್ಕಳನ್ನು ಹೆತ್ತಿದ್ದು, ಇನ್ನು ಹೆಚ್ಚಿನ ಮಕ್ಕಳನ್ನು ಹೆರಲು ಶಕ್ತರಲ್ಲದ ಕಾರಣ, ಈ ವ್ಯಕ್ತಿ ಈಗ 17ನೇ ಮದುವೆಯ ಸಿದ್ದತೆಯಲ್ಲಿದ್ದಾರೆ.   

4 /4

16 ಪತ್ನಿ 151 ಮಕ್ಕಳನ್ನು ಹೊಂದಿರುವ ಈ ವ್ಯಕ್ತಿ, 100 ಪತ್ನಿಯರನ್ನು ಮತ್ತು ಸಾವಿರ ಮಕ್ಕಳನ್ನು ಹೊಂದುವ ಇರಾದೆ ಇಟ್ಟುಕೊಂಡಿದ್ದಾನಂತೆ. ಅಲ್ಲದೆ,  ತಾನು ಸಾಯುವವರೆಗೂ ಈ ಕಾರ್ಯವನ್ನು ಮುಂದುವರೆಸುವುದಾಗಿಯೂ ಹೇಳಿದ್ದಾನೆ.   

You May Like

Sponsored by Taboola