Mars Transit 2023: ಉಚ್ಛ ದೃಷ್ಟಿಯ ಮೂಲಕ ಮಂಗಳನ ಭ್ರಮಣ ಆರಂಭ, 3 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

Mangal Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಭೂಮಿ ಪುತ್ರ ಎಂದೇ ಭಾವಿಸಲಾಗುವ ಗ್ರಹಗಳ ಸೇನಾಪತಿ ಉಚ್ಛ ದೃಷ್ಟಿಯ ಮೂಲಕ ತನ್ನ ಭ್ರಮಣೆಯನ್ನು ಆರಂಭಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಈ ಜನರಿಗೆ ಅಪಾರ ಧನ-ಸಂಪತ್ತು ಮತ್ತು ಸ್ಥಾನಮಾನ ಪ್ರಾಪ್ತಿಯಾಗಲಿದೆ. 
 

Mars Transit In Gemini 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ ಇತರ ಗ್ರಹಗಳ ಮೇಲೆ ತನ್ನ ಉಚ್ಚ ಅಥವಾ ನೀಚ ದೃಷ್ಟಿಯನ್ನು ಬೀರುತ್ತವೆ. ಅವುಗಳ ಈ ದೃಷ್ಟಿಯ ಪ್ರಭಾವ ಮಾನವನ ಜೀವನ ಮತ್ತು ಇಡೀ ವಿಶ್ವದ ಮೇಲೆಯೇ ಗೋಚರಿಸುತ್ತದೆ. ಮಾರ್ಚ್ 13 ರಂದು, ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇದರೊಂದಿಗೆ ಆತನ ಅಷ್ಟಮ ದೃಷ್ಟಿ ಮಕರ ರಾಶಿಯ ಸ್ಥಾನದ ಮೇಲೆ ಬೀಳುತ್ತಿದ್ದು, ಮಕರ ರಾಶಿಯನ್ನು ಮಂಗಳನ ಉಚ್ಚ ರಾಶಿ ಎಂದು ಭಾವಿಸಲಾಗುತ್ತದೆ. ಈ ದೃಷ್ಟಿ 10 ಮೇ 2023 ರವರೆಗೆ ಇರಲಿದೆ. ಇದರಿಂದ ಒಟ್ಟು 3 ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಹಠಾತ್ ವಿತ್ತೀಯ ಲಾಭವನ್ನು ಪಡೆಯಲಿದ್ದಾರೆ ಮತ್ತು ಪ್ರಗತಿಯನ್ನು ಹೊಂದಲಿದ್ದಾರೆ. ಆ ಅದೃಷ್ಟವಂತ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Auspicious Navpancham Yog: 30 ವರ್ಷಗಳ ಬಳಿಕ ತ್ರಿವಳಿ 'ನವಪಂಚಮ ಯೋಗ' ನಿರ್ಮಾಣ, 3 ರಾಶಿಗಳ ಜನರು ಎರಡೂ ಕೈಗಳಿಂದ ಹಣ ಬಾಚಿಕೊಳ್ಳಲಿದ್ದಾರೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಷಭ ರಾಶಿ-ವೃಷಭ ರಾಶಿಯ ಜನರಿಗೆ, ಮಂಗಳನ ಉಚ್ಛ ದೃಷ್ಟಿಯ ನಡೆ ಸಾಕಷ್ಟು ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ಅಂಗಳದ ಅಷ್ಟಮ ದೃಷ್ಟಿ ಮಕರ ರಾಶಿಯ ಮೇಲೆ ಇದೇ. ಇದರೊಂದಿಗೆ, ನಿಮ್ಮ ಸಂಕ್ರಮಣ ಜಾತಕದಲ್ಲಿ ಆತ ಸಂಪತ್ತಿನ ಭಾವದಲ್ಲಿ ನೆಲೆಸಿ  ಅದೃಷ್ಟದ ಭಾವದ ಮೇಲೆ ತನ್ನ ಗಮನ ಕೇಂದ್ರೀಕರಿಸಲಿದ್ದಾನೆ. ಅದಕ್ಕಾಗಿಯೇ ಈ ಅವಧಿಯಲ್ಲಿ  ಅದೃಷ್ಟವು ನಿಮ್ಮೊಂದಿಗೆ ಇರಲಿದೆ. ಇದೆ ವೇಳೆ ನಿಮಗೆ ಈ ಅವಧಿಯಲ್ಲಿ ಹಳೆಯ ಹೂಡಿಕೆಯಿಂದ ಲಾಭವಾಗಬಹುದು. ಅಲ್ಲದೆ, ದೀರ್ಘಕಾಲದಿಂದ ಸಿಲುಕಿಹಾಕಿಕೊಂಡ ಹಣ ನಿಮ್ಮತ್ತ ಮರಳಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಇರಲಿದೆ. ಸ್ಪರ್ಧೆಯಲ್ಲಿ ಯಶಸ್ಸು ಸಿಗಲಿದೆ. ಸರ್ಕಾರಿ ನೌಕರಿಯಲ್ಲಿ ಯಶಸ್ಸನ್ನು ಪಡೆಯಲು ಇತ್ತೀಚೆಗೆ ಯಾವುದಾದರೊಂದು ಪರೀಕ್ಷೆಯನ್ನು ನೀಡಿದವರು ಈ ಅವಧಿಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವಿದೇಶ ಪ್ರವಾಸಕ್ಕೂ ಅವಕಾಶವಿದೆ.  

2 /3

ತುಲಾ ರಾಶಿ-ಮಂಗಳದ ಉಚ್ಛ ದೃಷ್ಟಿಯ ಭ್ರಮಣೆ  ತುಲಾ ರಾಶಿಯ ಜನರಿಗೆ ಆರ್ಥಿಕವಾಗಿ ಲಾಭದಾಯಕವೆಂದು ಸಾಬೀತಾಗಲಿದೆ. ಏಕೆಂದರೆ ಮಂಗಳ ಮತ್ತು ಶುಕ್ರನ ನಡುವೆ ಸ್ನೇಹದ ಭಾವದ ಸಂಬಂಧವಿದೆ. ಇದರೊಂದಿಗೆ ಮಂಗಳನ ಉಚ್ಛ  ದೃಷ್ಟಿ ಮಕರ ರಾಶಿಯ ಮೇಲೆ ಇರಲಿದೆ. ಅದು ನಿಮ್ಮ ಜಾತಕದ  ಸೌಕರ್ಯ ಮತ್ತು ಆಸ್ತಿಯ ಸ್ಥಾನದಲ್ಲಿದೆ, ಆದ್ದರಿಂದ ಈ ಅವಧಿಯಲ್ಲಿ  ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಅಲ್ಲದೆ, ಆಸ್ತಿ, ರಿಯಲ್ ಎಸ್ಟೇಟ್ ಮತ್ತು ಆಹಾರಕ್ಕೆ ಸಂಬಂಧಿಸಿದ ವ್ಯವಹಾರವನ್ನು ಹೊಂದಿರುವ ಜನರಿಗೆ ಈ ಸಮಯ ಅತ್ಯುತ್ತಮವಾಗಿದೆ. ಆದ್ದರಿಂದ ನೀವು ಉತ್ತಮ ಲಾಭವನ್ನು ಪಡೆಯಬಹುದು. ಇದರೊಂದಿಗೆ ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿಯ ಯೋಗ ಇದೆ..

3 /3

ಮೇಷ ರಾಶಿ-ಮಂಗಳನ ಉಚ್ಛ ದೃಷ್ಟ ಭ್ರಮಣೆ ಮೇಷ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಮಂಗಳನು ​​ನಿಮ್ಮ ವೃತ್ತಿ-ವ್ಯಾಪಾರ ಭಾವವನ್ನು ಅಷ್ಟಮ ಅಂಶದಿಂದ ಗಮನಿಸುತ್ತಿದ್ದಾನೆ. ಹೀಗಾಗಿ  ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಕಾಣಬಹುದು. ವೃತ್ತಿಯಲ್ಲಿ ವೇಗವನ್ನು ಕಾಣಬಹುದು. ಉದ್ಯೋಗದಲ್ಲಿರುವವರು ಮಾರ್ಚ್ ನಂತರ ಬಡ್ತಿ ಮತ್ತು ಇನ್‌ಕ್ರಿಮೆಂಟ್ ಪಡೆಯಬಹುದು. ಇದರೊಂದಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸಂತೋಷ ಮತ್ತು ಸಂಪನ್ಮೂಲಗಳಲ್ಲಿ ಹೆಚ್ಚಳ ಇರಲಿದೆ. ಮತ್ತೊಂದೆಡೆ, ಉದ್ಯಮಿಗಳು, ಅವರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)