ಅನೇಕ ಬಾರಿ ನಾವು ತಿಳಿದೋ ಅಥವಾ ತಿಳಿಯದೆಯೋ ತುಳಸಿಗೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ.ತುಳಸಿ ಎಲೆಗಳನ್ನು ಕೀಳಲು ಕೆಲವು ವಿಶೇಷ ನಿಯಮಗಳನ್ನು ಪುರಾಣಗಳಲ್ಲಿ ತಿಳಿಸಲಾಗಿದೆ.
Tulsi Plucking Rules : ಸನಾತನ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮೀಯ ಸ್ವರೂಪ ಎಂದು ಹೇಳಲಾಗುತ್ತದೆ.ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸುವ ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಎನ್ನುವ ಮನ್ನಣೆ ಇದೆ. ತುಳಸಿ ಗಿಡದಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ.ಹಾಗಾಗಿ ತುಳಸಿಯನ್ನು ನಿತ್ಯ ಪೂಜಿಸಿದರೆ ಮನೆಯಲ್ಲಿ ಸಂತೋಷ,ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧಾರ್ಮಿಕ ಗ್ರಂಥಗಳ ಪ್ರಕಾರ, ವಿಷ್ಣುವಿಗೆ ತುಳಸಿ ಬಹಳ ಪ್ರಿಯವಾದುದು. ಇದೇ ಕಾರಣಕ್ಕೆ ವಿಷ್ಣುವಿನ ಪೂಜೆಯಲ್ಲಿ ತುಳಸಿಯನ್ನು ಬಳಸಬೇಕು. ವಿಷ್ಣುವಿಗೆ ನೈವೇದ್ಯ ಅರ್ಪಿಸುವಾಗಲೂ ತುಳಸಿ ದಳವನ್ನು ಸೇರಿಸಬೇಕು ಎಂದು ಹೇಳಲಾಗುತ್ತದೆ.
ಅನೇಕ ಬಾರಿ ನಾವು ತಿಳಿದೋ ಅಥವಾ ತಿಳಿಯದೆಯೋ ತುಳಸಿಗೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ.ತುಳಸಿ ಎಲೆಗಳನ್ನು ಕೀಳಲು ಕೆಲವು ವಿಶೇಷ ನಿಯಮಗಳನ್ನು ಪುರಾಣಗಳಲ್ಲಿ ತಿಳಿಸಲಾಗಿದೆ.
ಏಕಾದಶಿಯ ದಿನದಂದು ತಪ್ಪಿಯೂ ತುಳಸಿ ಎಲೆಗಳನ್ನು ಕೀಳಬಾರದು. ಏಕಾದಶಿಯ ಪೂಜೆಗೆ ತುಳಸಿ ಖಂಡಿತವಾಗಿಯೂ ಬೇಕು.ಆದರೆ ಏಕಾದಶಿಯಂದು ತುಳಸಿ ಎಲೆ ಕೀಳುವುದು ತಪ್ಪು.
ಭಾನುವಾರ, ಚಂದ್ರ ಮತ್ತು ಸೂರ್ಯಗ್ರಹಣದ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು.ಭಾನುವಾರದಂದು ತುಳಸಿಗೆ ನೀರನ್ನು ಅರ್ಪಿಸಬಾರದು, ಅದನ್ನು ಮುಟ್ಟಲೂ ಬಾರದು.
ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಯಾವ ಸಂದರ್ಭದಲ್ಲಿಯೇ ಆಗಲಿ ತುಳಸಿ ಎಲೆ ಕೀಳುವಾಗ ಮೊದಲು ತುಳಸಿಗೆ ನಮಸ್ಕರಿಸಬೇಕು.
ತುಳಸಿ ಎಲೆ ಕೀಳುವಾಗ ಅದಕ್ಕೆ ಉಗುರು ತಾಗಿಸಿ ತೆಗೆಯಬಾರದು. ಬೆರಳುಗಳ ಸಹಾಯದಿಂದ ಮಾತ್ರ ತುಳಸಿ ಎಲೆಗಳನ್ನು ಕೀಳಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS KANNADA ಇದನ್ನು ಖಚಿತಪಡಿಸುವುದಿಲ್ಲ