Name Astrology: ಈ ಹುಡುಗಿಯರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ!

                            

Name Astrology: ಜ್ಯೋತಿಷ್ಯವು ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಭೂತ-ವರ್ತಮಾನ-ಭವಿಷ್ಯಕ್ಕೆ ಸಂಬಂಧಿಸಿದ ಬಹುತೇಕ ಮಾಹಿತಿಯನ್ನು ನೀಡುತ್ತದೆ. ಇದನ್ನು ಜ್ಯೋತಿಷ್ಯ ತಜ್ನರಿಂದ ತಿಳಿಯಬಹುದು. ಅಷ್ಟೇ ಅಲ್ಲ ಜ್ಯೋತಿಷ್ಯದಲ್ಲಿ ಅಂತಹ ಕೆಲವು ವಿಧಾನಗಳನ್ನು ಸಹ ಹೇಳಲಾಗಿದೆ, ಅದರ ಮೂಲಕ ಸಾಮಾನ್ಯ ಜನರು ಇತರರ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಬಹುದು. ಇಂದು ನಾವು ಅಂತಹ ಒಂದು ಮಾರ್ಗವನ್ನು ತಿಳಿಸಲಿದ್ದೇವೆ, ಅದರ ಮೂಲಕ ಪ್ರೀತಿಯ ವಿಷಯದಲ್ಲಿ ಯಾವ ಹುಡುಗಿಯರು ಅತ್ಯುತ್ತಮ ಸಂಗಾತಿ ಎಂದು ಸಾಬೀತುಪಡಿಸುತ್ತಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಇದಕ್ಕಾಗಿ, ಅವರ ಹೆಸರಿನ ಮೊದಲ ಅಕ್ಷರವನ್ನು (ಹೆಸರಿನ ಮೊದಲ ಅಕ್ಷರ) ಮಾತ್ರ ನೋಡಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಎ (A) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು: A ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು, ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ನಿಜವಾದ ಪ್ರೀತಿಯನ್ನು ಮಾಡುತ್ತಾರೆ ಮತ್ತು ಅವರು ತಮ್ಮ ಸಂಗಾತಿಗೆ ತಮ್ಮ ಇಡೀ ಜೀವನವನ್ನು ನೀಡುತ್ತಾರೆ. ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ತಮ್ಮ ಸಂಗಾಗಿಯನ್ನು ತುಂಬಾ ಪ್ರೀತಿಸುತ್ತಾರೆ. ಮಾತ್ರವಲ್ಲ ಅವನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.  

2 /5

ಜಿ (G) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು : G ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು, ಅವರೇ ಉತ್ತಮ ಪಾಲುದಾರರು ಎಂದು ಸಾಬೀತುಪಡಿಸುತ್ತಾರೆ ಮತ್ತು ಅವರು ಉತ್ತಮ ಸಂಗಾತಿಯನ್ನು ಸಹ ಪಡೆಯುತ್ತಾರೆ. ಒಟ್ಟಿನಲ್ಲಿ ಈ ಹುಡುಗಿಯರು ಪ್ರೀತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರು.   

3 /5

ಐ (I) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು : ಐ (I) ಅಕ್ಷರದ ಹೆಸರಿನಿಂದ ಪ್ರಾರಂಭವಾಗುವ ಹುಡುಗಿಯರು ಅವರ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಯಾವಾಗಲೂ ಅವನ ಬಗ್ಗೆ ತುಂಬಾ ಪ್ರಾಮಾಣಿಕವಾಗಿರುತ್ತಾರೆ. ಪ್ರೀತಿ ಮಾಡುವುದರ ಜೊತೆಗೆ ಸಂಗಾತಿಯನ್ನು ತುಂಬಾ ಬೆಂಬಲಿಸುತ್ತಾರೆ. ಈ ಹುಡುಗಿಯರ ಸಂಗಾತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಮತ್ತು ಇದರಲ್ಲಿ ಈ ಹುಡುಗಿಯರ ದೊಡ್ಡ ಕೊಡುಗೆ ಇದೆ ಎಂದು ಹೇಳಬಹುದು.  ಇದನ್ನೂ ಓದಿ- Narak Chaturdashi 2021: ಇಂದು ರಾತ್ರಿ 14 ದೀಪಗಳನ್ನು ಬೆಳಗಿಸುವುದರ ಹಿಂದಿನ ಮಹತ್ವವಿದು

4 /5

ಎನ್ (N) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು: N ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹೆಸರಿನ ಹುಡುಗಿಯರು ಪ್ರೀತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಕೆಲವೊಮ್ಮೆ ಅವರು ಚಿಕ್ಕ ವಯಸ್ಸಿನಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ. ಅವರ ಸಂಗಾತಿಯೂ ಅವರನ್ನು ಅಪಾರವಾಗಿ ಪ್ರೀತಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಈ ಹುಡುಗಿಯರು ತಮ್ಮ ಸಂಗಾತಿಯನ್ನು ಸಂತೋಷವಾಗಿರಿಸುವುದು ಹೇಗೆ ಎಂಬುದನ್ನು ಚೆನ್ನಾಗಿ ತಿಳಿದಿದ್ದಾರೆ. ಇದನ್ನೂ ಓದಿ- ನರಕ ಚತುರ್ದಶಿ ದಿನ ಮುಂಜಾನೆ ಸ್ನಾನ ಮಾಡುವುದರ ಹಿಂದಿದೆ ಈ ಕಾರಣ

5 /5

ಎಸ್ (S) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು : S ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ಯಾವಾಗಲೂ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುತ್ತಾರೆ ಮತ್ತು ಇದಕ್ಕಾಗಿ ಅವರು ಬಹಳ ಸಮಯ ಕಾಯಬೇಕಾಗುತ್ತದೆ. ಈ ಹುಡುಗಿಯರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ, ಪ್ರತಿ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಅವರನ್ನು ಬೆಂಬಲಿಸುತ್ತಾರೆ ಮತ್ತು ಪ್ರತಿಯಾಗಿ ಅವರಿಂದ ಅದೇ ನಿರೀಕ್ಷಿಸುತ್ತಾರೆ.  ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.