ಬಿಳಿ ಕೂದಲನ್ನು ಕಪ್ಪಗಾಗಿಸಲು ಇಲ್ಲಿದೆ ಸುಲಭ ʼಉಪಾಯʼ; ಈ ಮನೆಮದ್ದುಗಳನ್ನ ಟ್ರೈ ಮಾಡಿ ನೋಡಿ

ಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.

Natural Remedies for White Hair: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಕೂದಲು ಉದುರುವಿಕೆ, ಬೊಕ್ಕ ತಲೆ ಮತ್ತು ಬಿಳಿ ಕೂದಲ ಸಮಸ್ಯೆಗಳು ಸೇರಿವೆ. ಬಿಳಿ ಕೂದಲನ್ನು ಮರೆಮಾಚಲು ಮಾರುಕಟ್ಟೆಯಲ್ಲಿ ದೊರೆಯುವ ಅನೇಕರು ಹೇರ್ ಕಲರ್‌ಗಳನ್ನು ಬಳಸುತ್ತಾರೆ. ಇಂತಹ ಕಲರ್‌ಗಳಿಂದ ಅನೇಕರಿಗೆ ಚರ್ಮದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇವುಗಳ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಿಳಿ ಕೂದಲನ್ನು ಕಪ್ಪಾಗಿಸುವ ನೈಸರ್ಗಿಕ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.

2 /6

ತೆಂಗಿನ ಎಣ್ಣೆಯ ಜೊತೆಗೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಬೇಕು. ಹೀಗೆ ಮಾಡಿದ ಒಂದು ಗಂಟೆಯ ನಂತರ ತಲೆಸ್ನಾನ ಮಾಡಬೇಕು. ತೆಂಗಿನೆಣ್ಣೆಯು ಬಿಳಿ ಕೂದಲು ಬೆಳೆಯುವುದನ್ನು ತಡೆಗಟ್ಟುತ್ತದೆ.

3 /6

ಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.

4 /6

ಬಾದಾಮಿ ಎಣ್ಣೆ, ನಿಂಬೆರಸ ಮತ್ತು ನೆಲ್ಲಿಕಾಯಿಯ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

5 /6

ಮದರಂಗಿ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ 3 ಚಮಚ ನೆಲ್ಲಿ ಪುಡಿ, 1 ಚಮಚ ಕಾಫಿ ಪೌಡರ್, 1 ಚಮಚ ಮೊಸರನ್ನು ಹಾಕಿ. ನಂತರ ಅದನ್ನು ಕೂದಲಿಗೆ ಹಚ್ಚಿ ಅದು ಒಣಗಿದ ಮೇಲೆ ತಲೆಸ್ನಾನ ಮಾಡಿ.

6 /6

ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಹಾಕಿ ಕುದಿಸಿ, ಅದು ಆರಿದ ಮೇಲೆ ಅದನ್ನು ತಲೆಗೆ ಹಚ್ಚಿ. ಆಲಿವ್ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.