ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಚಿನ್ನದ ದರಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ನೀಡಿದೆ.
ಬೆಂಗಳೂರು : ದೀಪಾವಳಿ ಹಬ್ಬ ಸನಿಹದಲ್ಲಿದೆ. ಚಿನ್ನದ ದರ ನಿರಂತರವಾಗಿ ಹೊಸ ದಾಖಲೆಗಳತ್ತ ಸಾಗುತ್ತಿದೆ.ಹಳದಿ ಲೋಹದ ದರವು 10 ಗ್ರಾಂಗೆ 80000 ರೂ.ಯ ಗರಿಷ್ಠ ಮಟ್ಟವನ್ನು ತಲುಪಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಜೈಪುರ, ಚಂಡೀಗಢ, ಲಕ್ನೋ, ನೋಯ್ಡಾ ಹೀಗೆ ಬೇರೆ ಬೇರೆ ನಗರಗಳ ಚಿನ್ನದ ದರಕ್ಕೆ ಹೋಲಿಸಿ ನೋಡಿದರೆ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತದೆ.
ಈ ನಿಟ್ಟಿನಲ್ಲಿ ‘ಒಂದು ರಾಷ್ಟ್ರ, ಒಂದು ಚಿನ್ನದ ದರ’ ಜಾರಿಗೆ ತರುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆಯುತ್ತಿದೆ.ಇದನ್ನು ಅನುಷ್ಠಾನಗೊಳಿಸುವುದರ ಹಿಂದೆ ಚಿನ್ನದ ದರವನ್ನು ಪ್ರಮಾಣೀಕರಿಸುವ ಪ್ರಯತ್ನವಿದೆ.
ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ತನ್ನ 'ಒಂದು ರಾಷ್ಟ್ರ, ಒಂದು ಚಿನ್ನದ ದರ'ಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ನೀಡಿದೆ.
ಎಲ್ಲ ರಾಜ್ಯಗಳಿಗೂ ಒಂದೇ ದರದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೂ ಈ ಬೆಲೆ ಪ್ರತೀ ನಗರಗಳಿಗೂ ಬದಲಾಗುತ್ತದೆ.ದೇಶಾದ್ಯಂತ ಚಿನ್ನಕ್ಕೆ ಒಂದೇ ಬೆಲೆ ಜಾರಿಯಾಗಬೇಕು ಎನ್ನುವುದು ಜಿಜೆಸಿ ವಾದ.
ಒಂದು ರಾಷ್ಟ್ರ, ಒಂದು ಚಿನ್ನದ ದರದ ಅನ್ವಯ ದೇಶಾದ್ಯಂತ ಚಿನ್ನಕ್ಕೆ ಒಂದೇ ಬೆಲೆ ಇರುತ್ತದೆ.ಅಂದರೆ ದೇಶದ ಯಾವ ಮೂಲೆಯಲ್ಲಿ ಚಿನ್ನ ಖರೀದಿಸಿದರೂ, ಮಾರಿದರೂ ಅದೇ ಬೆಲೆ ಸಿಗಬೇಕು.ಈ ನಿಯಮ ಜಾರಿಯಾದ ನಂತರ ಚಿನ್ನದ ಬೆಲೆಯಲ್ಲಿ ಪಾರದರ್ಶಕತೆ ಬರಲಿದೆ.
‘ಒಂದು ರಾಷ್ಟ್ರ, ಒಂದು ಚಿನ್ನದ ದರ’ ಜಾರಿಯಾದರೆ ಬೆಲೆಯಲ್ಲಿ ಸ್ಥಿರತೆ ಇರಲಿದ್ದು, ಬೆಲೆ ಏರಿಳಿತಗಳು ಕಡಿಮೆಯಾಗಲಿವೆ. ಇದು ಹೂಡಿಕೆದಾರರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಮತ್ತು ಅವರು ಚಿನ್ನವನ್ನು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿ ನೋಡಲು ಸಾಧ್ಯವಾಗುತ್ತದೆ.