PM Svanidhi Scheme: Modi ಸರ್ಕಾರದ ಈ ಅದ್ಭುತ ಯೋಜನೆಯ ಲಾಭ ಪಡೆಯಲು ನೀವು ಗ್ಯಾರಂಟಿ ನೀಡಬೇಕಾಗಿಲ್ಲ

How to get loan from PM Svanidhi scheme: ಪ್ರಧಾನ್ ಮಂತ್ರಿ ಸ್ವನಿಧಿ ಯೋಜನೆಯಡಿ 1 ವರ್ಷಕ್ಕೆ ಬಡವರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮೋದಿ ಸರ್ಕಾರ (Modi Government) 10,000 ರೂ.ಗಳ ಆರ್ಥಿಕ ನೆರವು ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಶನಿವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ : How to get loan from PM Svanidhi scheme: ಪ್ರಧಾನ್ ಮಂತ್ರಿ ಸ್ವನಿಧಿ ಯೋಜನೆಯಡಿ 1 ವರ್ಷಕ್ಕೆ ಬಡವರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಮೋದಿ ಸರ್ಕಾರ (Modi Government) 10,000 ರೂ.ಗಳ ಆರ್ಥಿಕ ನೆರವು ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಶನಿವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಒಂದು ವರ್ಷದಲ್ಲಿ ಈ ಹಣವನ್ನು ಹಿಂದಿರುಗಿಸದೆ ಇದ್ದ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚು ಸಮಯಾವಕಾಶ ಪಡೆಯುವ ಆಯ್ಕೆ ಇದೆ ಎಂದಿದ್ದಾರೆ. ದೇಶದ 50 ಲಕ್ಷ ಬೀದಿ ವ್ಯಾಪಾರಿಗಳು ಈಗಾಗಲೇ ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ.

 

ಇದನ್ನೂ ಓದಿ- ಕೋಟಿ ನಳ್ಳಿಗಳಲ್ಲಿ 24 ಗಂಟೆ ಶುದ್ದ ಕುಡಿಯುವ ನೀರು.! ಮೋದಿ ಸರ್ಕಾರ ಮಾಡುತ್ತಾ ಮ್ಯಾಜಿಕ್..?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

PM Svanidhi scheme ಯಾವಾಗ ಆರಂಭಗೊಂಡಿದೆ? How to get loan from PM Svanidhi scheme : ಕೇಂದ್ರ ಸರ್ಕಾರ 2020 ರ ಜೂನ್‌ನಲ್ಲಿ ಪಿಎಂ ಸ್ಟ್ರೀಟ್ ವೆಂಡರ್ಸ್ ಸೆಲ್ಫ್-ರಿಲಯಂಟ್ ಫಂಡ್ (PM Svanidhi) ಯೋಜನೆಯನ್ನು ಪ್ರಾರಂಭಿಸಿದೆ. ಕರೋನಾದಿಂದ ಪೀಡಿತ ಬೀದಿ ಬದಿಯಲ್ಲಿ ಸರಕುಗಳನ್ನು ಮಾರಾಟ ಮಾಡುವ ಅಂಗಡಿಯವರಿಗೆ ಸಹಾಯ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಯೋಜನೆಯಡಿ, 10 ಸಾವಿರ ರೂಪಾಯಿಗಳವರೆಗಿನ ಸಾಲವನ್ನು ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ ಅಗ್ಗದ ದರದಲ್ಲಿ ನೀಡಲಾಗುತ್ತದೆ.  ಒತ್ತುವ ಗಾಡಿಯಲ್ಲಿ ಸರಕು ಮಾರಾಟ ಮಾಡುವವರು, ಕ್ಷೌರಿಕನ ಅಂಗಡಿ, ಚಮ್ಮಾರ, ಪಾನ್ ಅಂಗಡಿ, ತರಕಾರಿಗಳು, ಹಣ್ಣುಗಳು ಇತ್ಯಾದಿಗಳಲ್ಲಿ ಸರಕುಗಳನ್ನು ಮಾರಾಟ ಮಾಡುವವರು ಇದರ ಲಾಭ ಪಡೆಯಬಹುದು.

2 /6

PM Svanidhi scheme ಲಾಭಗಳೇನು? How to get loan from PM Svanidhi scheme : ಒಂದು ವೇಳೆ ನೀವೂ ಕೂಡ ಈ ಯೋಜನೆಯ ಲಾಭ ಪಡೆಯಲು ಬಯಸುತ್ತಿದ್ದರೆ, ಅದಕ್ಕಾಗಿ ಮೊದಲು ನೀವು ಈ ಯೋಜನೆಯಡಿ ಅರ್ಜಿ ಸಲ್ಲಿಸಬೇಕು. ಸ್ಟ್ರೀಟ್ ವೆಂಡರ್ ಸ್ವಾವಲಂಬಿ ನಿಧಿಯಡಿ ವಿವಿಧ ಪ್ರದೇಶಗಳಲ್ಲಿ ಮಾರಾಟಗಾರರು, ವ್ಯಾಪಾರಿಗಳು, ಹಾಕರ್ ಗಳು, ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಸಣ್ಣ ವ್ಯಾಪಾರಿಗಳು  ಸೇರಿದಂತೆ 50 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ.

3 /6

PM Svanidhi scheme ಅಡಿ ಯಾರಿಗೆ ಸಾಲ ಸಿಗಲಿದೆ? How to get loan from PM Svanidhi scheme : ಡ್ರೈಕ್ಲೀನರ್ಸ್, ತರಕಾರಿ ಮಾರುವವರು, ಚಮ್ಮಾರರು, ಪಾನ್ ಅಂಗಡಿಯವರು, ಬೀದಿ ಬದಿ ಕ್ಷೌರ ಮಾಡುವವರು, ಒತ್ತುವ ಗಾಡಿಯಲ್ಲಿ ಹಣ್ಣು ಹಂಪಲ ಮಾರಾಟ ಮಾಡುವವರು, ಬೀದಿ ಬದಿಯಲ್ಲಿ ಇತರೆ ಸರಕು ಮಾರಾಟ ಮಾಡುವವರು ಈ ಯೋಜನೆಯ ಅಡಿಯಲ್ಲಿ ಸಾಲ ಪಡೆಯಬಹುದು.

4 /6

Ready to Eat ಸ್ಟ್ರೀಟ್ ಫುಡ್  How to get loan from PM Svanidhi scheme : ಟೀ ಸ್ಟಾಲ್ ಅಥವಾ ಟೀ ಖೋಕಾ ನಡೆಸುವವರು, ಬ್ರೆಡ್, ಪಕೌಡಿ ಹಾಗೂ ಮೊಟ್ಟೆ ಮಾರಾಟಗಾರರು, ಬಟ್ಟೆ ಮಾರಾಟ ಮಾಡುವವರು, ಪುಸ್ತಕ ಅಥವಾ ಸ್ಟೇಷನರಿ ಅಂಗಡಿ ನಡೆಸುವವರೂ ಕೂಡ ಸಾಲ ಪಡೆಯಬಹುದು.

5 /6

ಈ ಷರತ್ತನ್ನು ಪೂರ್ಣಗೊಳಿಸಬೇಕು How to get loan from PM Svanidhi scheme : ಈ ಯೋಜನೆಯಡಿ ಬೀದಿ ವ್ಯಾಪಾರ ಮಾಡುವವರು, ಬೀದಿ ಬದಿಯಲ್ಲಿ ಫುಟ್ ಪಾತ್ ಮೇಲೆ ಬಂಡಿ ಹಚ್ಚುವವ ಜನ, 24 ಮಾರ್ಚ್ , 2020 ಅಥವಾ ಅದಕ್ಕಿಂತಲೂ ಮೊದಲಿನಿಂದ ವ್ಯಾಪಾರ ನಡೆಸುವವರು ಸಾಲ ಪಡೆಯಬಹುದು. ಇದಕ್ಕಾಗಿ ಸಮೀಕ್ಷೆ ನಡೆಸಿರುವ ಸರ್ಕಾರ ಲಾಕ್ ಡೌನ್ ನಿಂದ ಪ್ರಭಾವಕ್ಕೆ ಒಳಗಾದವರ ಪಟ್ಟಿ ಸಿದ್ದಪಡಿಸಿದೆ.

6 /6

PM Svanidhi scheme ಅಡಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸಬೇಕು? How to get loan from PM Svanidhi scheme: ಪಟ್ಟಿಯಲ್ಲಿರುವ ಹೆಸರನ್ನು ಪರಿಶೀಲಿಸಲು, ನಿಮ್ಮ ಪ್ರದೇಶದ ಯಾವುದೇ ಬ್ಯಾಂಕಿಂಗ್ ವರದಿಗಾರ ಅಥವಾ ಮೈಕ್ರೋ ಫೈನಾನ್ಸ್ ಸಂಸ್ಥೆಯ ಏಜೆಂಟರನ್ನು ನೀವು ಸಂಪರ್ಕಿಸಬಹುದು. ಈ ಜನರು ಸಮೀಕ್ಷೆಯ ಪಟ್ಟಿಯನ್ನು ಹೊಂದಿದ್ದಾರೆ ಮತ್ತು ಇವರು ರಸ್ತೆ ಮಾರಾಟಗಾರರಿಗೆ ಅಪ್ಲಿಕೇಶನ್ ಅನ್ನು ಭರ್ತಿ ಮಾಡಲು ಮತ್ತು ನಿಮ್ಮ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್-ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸಹಾಯ ಮಾಡುತ್ತಾರೆ.  pmsvanidhi.mohua.gov.in ವೆಬ್ ಸೈಟ್ ನಲ್ಲಿಯೂ ಕೂಡ ನೀವು ಈ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ನೋಂದಣಿಗೆ ಆಧಾರ್ ಕಾರ್ಡ್ (Aadhaar Card) ಮತ್ತು ಮತದಾರರ ಗುರುತಿನ ಚೀಟಿ (Voter Id) ಅಗತ್ಯ. ಇವುಗಳ ಹೊರತಾಗಿ, ಚಾಲನಾ ಪರವಾನಗಿ (Driving License), MGNREGA ಕಾರ್ಡ್ ಅಥವಾ ಪ್ಯಾನ್ ಕಾರ್ಡ್(PAN Card) ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.