ಆಗಸ್ಟ್ 2023 ರಲ್ಲಿ ದೊಡ್ಡ ಗ್ರಹಗಳ ರಾಶಿ ಗೋಚರದಿಂದ, ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಬಾಗ್ಯ!

Planetary Transit In August 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಯ ದೃಷ್ಟಿಯಿಂದ ಆಗಸ್ಟ್ ತಿಂಗಳು ತುಂಬಾ ಮಹತ್ವದ್ದಾಗಿದೆ. ಏಕೆಂದರೆ, ಆಗಸ್ಟ್ ತಿಂಗಳಿನಲ್ಲಿ ಬುಧ, ಸೂರ್ಯ ಸೇರಿದಂತೆ ಶುಕ್ರ ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿವೆ. ಗ್ರಹಗಳ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. 
 

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಹಾಗೂ ನಕ್ಷತ್ರಗಳ ಸ್ಥಿತಿ ಪರಿವರ್ತನೆಯ ಪ್ರಭಾವ ಎಲ್ಲಾ ರಾಶಿಗಳ ಜಾತಕದವರ ಜೀವನದ ಮೇಲೆ ಉಂಟಾಗುತ್ತದೆ. ಹೀಗಿರುವಾಗ ಆಗಸ್ಟ್ ತಿಂಗಳು ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಈ ತಿಂಗಳಿನಲ್ಲಿ ಸೂರ್ಯ ಸೇರಿದಂತೆ ಹಲವು ಗ್ರಹಗಳ ಸ್ಥಿತಿ ಪರಿವರ್ತನೆಯಾಗಲಿದೆ. ಇದು ದ್ವಾದಶ ರಾಶಿಗಳು ಸೇರಿದಂತೆ (Spiritual News In Kannada) ಭೂಮಿಯ ಮೇಲಿರುವ ಸಕಲ ಚರರಾಚರಗಳ ಮೇಲೆ ಪ್ರಭಾವವನ್ನು ಉಂಟುಮಾಡುತ್ತದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ವೈಭವದಾತ ಶುಕ್ರನ ಗೋಚರದ ಜೊತೆಗೆ ಆತನ ಉದಯ ಹಾಗೂ ಅಸ್ತ ಕೂಡ ನೆರವೇರಲಿದೆ. ಇನ್ನೊಂದೆಡೆ ಭೂಮಿ ಪುತ್ರ ಎಂದೇ ಖ್ಯಾತ ಮಂಗಳ ಕೂಡ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಇನ್ನೊಂದೆಡೆ ಬುಧ ತನ್ನ ವಕ್ರ ನಡೆಯನ್ನು ಕೂಡ ಅನುಸರಿಸಲಿದ್ದಾನೆ. ಹಾಗಾದರೆ ಬನ್ನಿ ಆಗಸ್ಟ್ ತಿಂಗಳಿನಲ್ಲಿ ಯಾವ ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿವೆ ಮತ್ತು ಅವುಗಳಿಂದ ಯಾವ ಜನರಿಗೆ ವಿಶೇಷ ಲಾಭ ಸಿಗಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-ಮುಂದಿನ 43 ದಿನ ಶುಕ್ರ ದೆಸೆಯಿಂದ ಈ 4 ರಾಶಿಗಳ ಜನರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಶುಕ್ರ ಗೋಚರ- ಬರುವ ಆಗಸ್ಟ್ 7ರಂದು ಶುಕ್ರ ವಕ್ರ ಭಾವದಲ್ಲಿಯೇ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 2, 2023ರವರೆಗೆ ಶುಕ್ರ ಅಲ್ಲಿಯೇ ಇರಲಿದ್ದಾನೆ. ಈ ಅವಧಿಯಲ್ಲಿ ಸೆಪ್ಟೆಂಬರ್ 4 ರಂದು ಆತ ಪುನಃ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಶುಕ್ರ ಗೋಚಾರದ ಅವಧಿ ಒಟ್ಟು 23 ದಿನಗಳದ್ದಾಗಿರುತ್ತದೆ. ವೃಷಭ ಹಾಗೂ ತುಲಾ ರಾಶಿಗಳ ಜಾತಕದವರಿಗೆ ಶುಕ್ರ ಅಧಿಪತಿ. ಶುಕ್ರನನ್ನು ಧನ,ಸಮೃದ್ಧಿ, ಸುಖ, ಆನಂದ, ಧನಲಾಭ, ಆಕರ್ಷಣೆ, ಸುಂದರತೆ, ಪ್ರೇಮ ಸಂಬಂಧ ಇತ್ಯಾದಿಗಳ ಕಾರಕ ಗ್ರಹ ಎಂದೂ ಕೂಡ ಹೇಳಲಾಗುತ್ತದೆ. ಹೀಗಿರುವಾಗ ಚಂದ್ರನ ರಾಶಿಯಾಗಿರುವ ಕರ್ಕ ರಾಶಿಯಲ್ಲಿ ಸೂರ್ಯನ ಗೋಚರದಿಂದ ಹಲವು ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಅದರಲ್ಲಿಯೂ ವಿಶೇಷವಾಗಿ ಮಿಥುನ ಹಾಗೂ ವೃಶ್ಚಿಕ ರಾಶಿಗಳ ಜಾತಕದವರಿಗೆ ಧನಲಾಭ ಪ್ರಾಪ್ತಿಯಾಗಲಿದ್ದು, ಅವರ ಭಾಗ್ಯೋದಯ ನಿಶ್ಚಿತ ಎನ್ನಲಾಗಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.   

2 /5

2. ಶುಕ್ರ ಅಸ್ತ 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಆಗಸ್ಟ್ 7, 2023 ರಂದು ಶುಕ್ರ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಮಾರನೇ ದಿನ ಅಂದರೆ ಆಗಸ್ಟ್ 8 ರಂದು ಅದೇ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಶುಕ್ರನ ಈ ಅಸ್ತದಿಂದ ಹಲವು ರಾಶಿಗಳಿಗೆ ಲಾಭ ಸಿಗಲಿದೆ. ಮಿಥುನ ರಾಶಿಯ ಜಾತಕದವರಿಗೆ ಮಿಶ್ರ ಫಲಿತಾಂಶಗಳು ಪ್ರಾಪ್ತಿಯಾಗಲಿದ್ದು ಕರ್ಕ ರಾಶಿಯ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ.  

3 /5

3. ಸೂರ್ಯ ಗೋಚರ 2023: ವೈದಿಕ ಪಂಚಾಂಗದ ಪ್ರಕಾರ ಆಗಸ್ಟ್ 17, 2023 ರಂದು ಮಧ್ಯಾಹ್ನ 1 ಗಂಟೆ 23 ನಿಮಿಷಕ್ಕೆ ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಸ್ವರಾಶಿ ಗೋಚರ ಹಲವು ರಾಶಿಗಳಿಗೆ ವಿಶೇಷ ಲಾಭವನ್ನು ತಂದುಕೊಡಲಿದೆ. ಸೂರ್ಯನ ಈ ಗೋಚರದಿಂದ ಸಮಾಜದಲ್ಲಿ ಅವರ ಸ್ಥಾನಮಾನ ಹೆಚ್ಚಾಗಲಿದೆ. ರಚನಾತ್ಮಕ ಕಲೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಇದರಿಂದ ಲಾಭ ಸಿಗಲಿದೆ. ಏಕಾಗ್ರತೆ, ಶಕ್ತಿ, ಬುದ್ಧಿಯಲ್ಲಿ ಸಾಕಷ್ಟು ವೃದ್ದಿಯಾಗಲಿದೆ.  

4 /5

4. ಮಂಗಳ ಗೋಚರ 2023: ಸಾಹಸ ಹಾಗೂ ಶಕ್ತಿಯ ಕಾರಕನಾಗಿರುವ ಮಂಗಳ ಆಗಸ್ಟ್ 18ರಂದು ಮಧ್ಯಾಹ್ನ 3 ಗಂಟೆ 14 ನಿಮಿಷಕ್ಕೆ ಕನ್ಯಾ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಮಂಗಳನ ಈ ಗೋಚರ ಮೇಷ, ಮಿಥುನ, ಕರ್ಕ, ವೃಷಿಕ ರಾಶಿಗಳು ಸೇರಿದಂತೆ ಇತರ ರಾಶಿಗಳಿಗೆ ವಿಶೇಷ ಲಾಭ ಸಿಗಲಿದೆ.  

5 /5

5. ಶುಕ್ರ ಉದಯ 2023: ಆಗಸ್ಟ್ 8 ರಂದು ಕರ್ಕ ರಾಶಿಯಲ್ಲಿ ಅಸ್ತಮಿಸಿದ ಶುಕ್ರ ಆಗಸ್ಟ್ 18ರಂದು ಸಂಜೆ 7 ಗಂಟೆ 17 ನಿಮಿಷಕ್ಕೆ ಕರ್ಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಶುಕ್ರನ ಶುಭ ದೆಸೆಯಿಂದ ಹಲವು ರಾಶಿಗಳ ಜಾತಕದವರ ಜೀವನದಲ್ಲಿ ಭೌತಿಕ ಸುಖದ ಜೊತೆಗೆ ವೈವಾಹಿಕ ಸುಖ, ಭೋಗಗಳು ಪ್ರಾಪ್ತಿಯಾಗಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)