ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಮಾಡಿದ್ದಾರೆ ಈ ಕೆಲಸ

ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಮಾಡಿದ್ದಾರೆ ಈ ಕೆಲಸ

Feb 10, 2020, 07:24 PM IST

ನವದೆಹಲಿ: ಆಸ್ಕರ್ 2020 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಮಾರಂಭಕ್ಕೂ ಮುನ್ನವೇ ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಪೋಸ್ಟ್ ವೊಂದನ್ನು ಹಂಚಿಕೊಂಡು ತಾವು ಈ ಬಾರಿಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ, ಈ ಪೋಸ್ಟ್ ಹಂಚಿಕೊಂಡಿದ್ದ ಪ್ರಿಯಾಂಕಾ ತಾವು ಈ ಹಿಂದೆ ಈ ಪ್ರತಿಷ್ಠಿತ ಸಮಾರಂಭದಲ್ಲಿ ಪಾಲ್ಗೊಂಡಿರುವ ಕುರಿತು ತಮ್ಮ ಕೆಲ ಹಳೆ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ, "ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ತಾವು ಶಾಮೀಲಾಗುತ್ತಿಲ್ಲ. ಆದರೆ, ನಿಮ್ಮೆಲ್ಲರ ಜೊತೆಗೆ ನಾನೂ ಕೂಡ ಈ ಸಮಾರಂಭ ವೀಕ್ಷಿಸಲಿದ್ದೇನೆ! ನೀವು ಯಾರಿಗೆ ಈ ಸಮಾರಂಭದಲ್ಲಿ ಬೆಂಬಲಿಸಲಿದ್ದೀರಿ ಎಂಬುದನ್ನು ನನಗೆ ತಿಳಿಸಿ" ಎಂದಿದ್ದಳು.

2016 ಹಾಗೂ 2017ರಲ್ಲಿ ಪ್ರಿಯಾಂಕಾ ಚೋಪ್ರಾ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಟ್ವೀಟ್ ನಲ್ಲಿ ತನ್ನ ಹಳೆ ದಿನಗಳನ್ನು ನೆನಪಿಸಿಕೊಂಡಿರುವ ಈ ಖ್ಯಾತ ನಟಿ, "ನನ್ನ ಹ್ಯಾಶ್ ಟ್ಯಾಗ್ ಆಸ್ಕರ್ ನ ಥ್ರೋಬ್ಯಾಕ್ ಲುಕ್ , ನಿಮ್ಮ ನೆಚ್ಚಿನ ಫೋಟೋ ಯಾವುದು?" ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಇದೆ ವೇಳೆ ಪ್ರಿಯಾಂಕಾ ಅಭಿಮಾನಿಗಳೂ ಕೂಡ ರೆಡ್ ಕಾರ್ಪೆಟ್ ಮೇಲೆ ತಮ್ಮ ನೆಚ್ಚಿನ ನಟಿಯನ್ನು ತಾವು ಮಿಸ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಹಂಚಿಕೊಂಡಿರುವ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ಹಲವರು 2016ರಲ್ಲಿನ ಪ್ರಿಯಾಂಕಾ ಲುಕ್ ತಮಗೆ ಹೆಚ್ಚು ಇಷ್ಟವಾಗಿತ್ತು ಎಂದು ಹೇಳಿದ್ದಾರೆ.

1/7

2/7

3/7

4/7

5/7

6/7

7/7